ಲಿಂಗಾಯತ ಸಮುದಾಯದ ದೀಕ್ಷೆಯನ್ನು ಪಡೆದ ರಾಹುಲ್ ಗಾಂಧಿ !

ಚುನಾವಣೆ ಬಂದಾಗ ರಾಹುಲ್ ಗಾಂಧಿಗೆ ಧಾರ್ಮಿಕತೆಯು ನೆನಪಾಗುವುದು ಈ ಹಿಂದೆ ಹಲವು ಬಾರಿ ಕಂಡು ಬಂದಿದೆ ! ಆದರೆ, ಕಾಂಗ್ರೆಸ್‌ನವರು ಎಷ್ಟೇ ಧಾರ್ಮಿಕತೆಯನ್ನು ಬಿಂಬಿಸಿಕೊಂಡರೂ ಕಾಂಗ್ರೆಸ್ಸಿನ ನಿಜಸ್ವರೂಪ ಜನರಿಗೆ ಗೊತ್ತಿದ್ದರಿಂದ ಜನರು ಕಾಂಗ್ರೆಸ್ಸನ್ನು ಆರಿಸುವುದಿಲ್ಲ ಎಂಬುದೂ ಅಷ್ಟೇ ಸತ್ಯ !

ಆಂದೋಲನದ ಸಮಯದಲ್ಲಿ ಕಾಂಗ್ರೆಸ್ ನಾಯಕಿ ನೆಟ್ಟ ಡಿಸೋಜಾ ಪೊಲೀಸರ ಮೇಲೆ ಉಗಳಿದರು !

ಕಾಂಗ್ರೆಸ್ಸಿನಿಂದ ದೇಶಾದ್ಯಂತ ಆಂದೋಲನ ಮಾಡಲಾಗುತ್ತಿದೆ. ದೆಹಲಿಯ ಆಂದೋಲನ ಸಮಯದಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ನೆಟ್ಟ ಡಿಸೋಜಾ ಅವರು ಪೊಲೀಸ್ ಸಿಬ್ಬಂದಿಗಳ ಮೇಲೆ ಉಗಳಿರುವ ಘಟನೆ ನಡೆದಿದೆ.

ಪ್ರಧಾನಿ ನರೇಂದ್ರ ಮೋದಿ ನಾಯಿಯಂತೆ ಸಾಯುತ್ತಾರೆ ಎಂದು ನಾಗಪುರದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ ಶೇಖ್ ಹುಸೇನ್!

ನ್ಯಾಶನಲ್ ಹೆರಾಲ್ಡ್ ಪತ್ರಿಕೆಯಲ್ಲಾದ ಅವ್ಯವಹಾರದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ದೆಹಲಿಯಲ್ಲಿ ಜಾರಿ ನಿರ್ದೇಶನಾಲಯ (ಈಡಿ) ಸತತವಾಗಿ ಮೂರನೇ ದಿನವೂ ವಿಚಾರಣೆಗೊಳಪಡಿಸಿದೆ. ಈ ವೇಳೆಗೆ ಕಾಂಗ್ರೆಸ್ ಕಾರ್ಯಕರ್ತರು ಮೂರು ದಿನಗಳ ಕಾಲ ನಿರ್ದೇಶನಾಲಯದ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಾಮಾನ್ಯ ಜ್ಞಾನವಿಲ್ಲದ ಮತ್ತು ರಾಷ್ಟ್ರವಿರೋಧಿ !

ಯಾವುದೇ ಅಂಶದಿಂದ ದೇಶದ ಅಧಿಕೃತ ಪ್ರತಿನಿಧಿತ್ವ ಮಾಡದಿರುವಾಗಲೂ ! ವಿದೇಶಕ್ಕೆ ಹೋಗಿ ‘ಭಾರತದ ಸ್ಥಿತಿ ಚೆನ್ನಾಗಿಲ್ಲ, ಬೆಲೆಯೆರಿಕೆ ಮತ್ತು ನಿರುದ್ಯೋಗ ಹೆಚ್ಚಾಗಿದೆ. ಉತ್ಪಾದನೆಯನ್ನು ಹೆಚ್ಚಿಸಿ ನೌಕರಿ ಕೊಡಬೇಕು, ಎಂಬಂತಹ ಹೇಳಿಕೆಗಳನ್ನು ನೀಡಿ ರಾಹುಲ ಗಾಂಧಿಯವರು ಏನು ಸಾಧಿಸುತ್ತಿದ್ದಾರೆ ?

ಬಿಜೆಪಿ ದೇಶದಲ್ಲಿ ಧ್ರುವಿಕರಣದ ಸೀಮೆಎಣ್ಣೆ ಸಿಂಪಡಿಸುತ್ತಿದೆ ಮತ್ತು ಕಿಡಿ ಹತ್ತಿಸಿದ ನಂತರ ದೇಶ ಉರಿಯಲು ಪ್ರಾರಂಭವಾಗಲಿದೆ (ಅಂತೆ) ! ರಾಹುಲ ಗಾಂಧಿ

ಬಿಜೆಪಿ ದೇಶದಲ್ಲಿ ಧ್ರುವಿಕರಣದ ಸೀಮೆಎಣ್ಣೆ ಸಿಂಪಡಿಸುತ್ತಿದೆ. ನಿಮಗೆ ಕೇವಲ ಒಂದು ಕಿಡಿ ಹೊತ್ತಿಸಲಿಕ್ಕಿದೆಯಷ್ಟೆ, ನಂತರ ದೇಶ ಸ್ವತಃ ಸುಟ್ಟುಹೋಗಲಿದೆ ಎಂದು ಕಾಂಗ್ರೆಸಿನ ನಾಯಕ ರಾಹುಲ ಗಾಂಧಿಯವರು ನಿರಾಧಾರ ಟೀಕೆ ಮಾಡಿದ್ದಾರೆ.

ದೆಹಲಿಯ ಜಹಾಂಗೀರಪುರಿಯಲ್ಲಿ ಅನಧಿಕೃತ ಕಟ್ಟಡಗಳ ಮೇಲೆ ದೊಡ್ಡ ಕಾರ್ಯಾಚರಣೆ

ದೆಹಲಿಯ ಜಹಾಂಗೀರಪುರಿಯಲ್ಲಿ ಹನುಮಾನ ಜಯಂತಿಯ ಮೆರವಣಿಗೆಯ ಮೇಲೆ ಮುಸಲ್ಮಾನಬಹುಳ ಭಾಗದಲ್ಲಿರುವ ಮಸೀದಿಯಿಂದ ಕಲ್ಲುತೂರಾಟ ನಡೆಸಿದ ಬಳಿಕ ಆದ ಹಿಂಸಾಚಾರದಲ್ಲಿ ಅನೇಕ ಪೊಲೀಸ ಸಿಬ್ಬಂದಿಗಳು ಗಾಯಗೊಂಡಿದ್ದರು.

ಗಾಂಧಿ ಪರಿವಾರವು ಕಾಂಗ್ರೆಸ್‌ನ ನೇತೃತ್ವವನ್ನು ಬಿಡಲಿ ! – ಕಾಂಗ್ರೆಸ ಮುಖಂಡ ಕಪಿಲ ಸಿಬ್ಬಲ

ಗಾಂಧಿ ಕುಟುಂಬವು ಕಾಂಗ್ರೆಸ್‌ನ ನೇತೃತ್ವವನ್ನು ಬಿಡಲಿ ಹಾಗೂ ಬೇರೆಯಾರಿಗಾದರೂ ಅವಕಾಶ ನೀಡಲಿ, ಎಂದು ಕಾಂಗ್ರೆಸ್‌ನ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಕಪಿಲ ಸಿಬ್ಬಲರವರು ತೀಕ್ಷ್ನವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.

ಜನರ ತಿರ್ಮಾನವನ್ನು ನಮ್ರತೆಯಿಂದ ಸ್ವೀಕರಿಸಿ! – ರಾಹುಲ ಗಾಂಧಿ

೫ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲನ್ನು ಅನುಭವಿಸಿದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕಾರ್ಯಕರ್ತರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆ. ಅವರು ‘ಜನತೆಯ ನಿರ್ಣಯವನ್ನು ನಮ್ರತೆಯಿಂದ ಸ್ವೀಕರಿಸಿ, ಜನಮತವನ್ನು ಗಳಿಸಿದವರಿಗೆ ಹಾರ್ದಿಕ ಶುಭಾಶಯಗಳು.

ಪುನಃ ನಾಥುರಾಮ !

ತಮ್ಮನ್ನು ತಾವು ಗಾಂಧಿವಾದಿಗಳೆಂದು ಹೇಳಿಕೊಳ್ಳುವ ಕಾಂಗ್ರೆಸ್ ಗಾಂಧಿಯವರ ಹತ್ಯೆಯ ನಂತರ ದೇಶದಲ್ಲಿ ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಬ್ರಾಹ್ಮಣರ ಮೇಲೆ ಆಕ್ರಮಣಗಳನ್ನು ಮಾಡಿ ಅವರನ್ನು ಹತ್ಯೆಗೈದಿತು, ಅವರ ಮನೆಮಾರುಗಳನ್ನು ದೋಚಿತು.

‘ಶ್ರೀ ಸರಸ್ವತಿ ದೇವಿಯು ಎಲ್ಲರಿಗೂ ಜ್ಞಾನ ನೀಡುತ್ತಾಳೆ, ಭೇದಭಾವ ಮಾಡುವುದಿಲ್ಲ !’ – ಕಾಂಗ್ರೆಸ್ಸಿನ ನೇತಾರ ರಾಹುಲ ಗಾಂಧಿ

ವಸಂತ ಪಂಚಮಿಯಂದು ಮಧ್ಯಪ್ರದೇಶದಲ್ಲಿನ ಧಾರದಲ್ಲಿರುವ ಭೋಜಶಾಲೆಯಲ್ಲಿನ ಶ್ರೀ ಸರಸ್ವತಿ ದೇವಿಯ ಪೂಜೆಗೆ ಕಾಂಗ್ರೆಸ್‌ ಸರಕಾರವು ನಿರಾಕರಿಸುತ್ತಿತ್ತು, ಆಗ ರಾಹುಲ ಗಾಂಧಿಯವರಿಗೆ ದೇವಿಯು ಏಕೆ ನೆನಪಾಗುತ್ತಿರಲಿಲ್ಲ ?