ಗುಜರಾತನ ಮುಖ್ಯಮಂತ್ರಿ ವಿಜಯ ರೂಪಾಣಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ

ಮುಖ್ಯಮಂತ್ರಿ ವಿಜಯ ರೂಪಾಣಿ

ಕರ್ಣಾವತಿ (ಗುಜರಾತ) – ರಾಜ್ಯದಲ್ಲಿನ ಭಾಜಪ ಸರಕಾರದ ಮುಖ್ಯಮಂತ್ರಿ ವಿಜಯ ರೂಪಾಣಿಯವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರೂಪಾಣಿಯವರು ರಾಜ್ಯಪಾಲರನ್ನು ಭೇಟಿಯಾಗಿ ಅವರ ಬಳಿ ರಾಜೀನಾಮೆಯನ್ನು ನೀಡಿದರು. ಸ್ವತಃ ವಿಜಯ ರೂಪಾಣಿಯವರು ಪತ್ರಿಕಾ ಪರಿಷತ್ತನ್ನು ಆಯೋಜಿಸಿ ಈ ಬಗ್ಗೆ ಮಾಹಿತಿ ನೀಡಿದರು. ಅವರು ‘ಗುಜರಾತಿನ ಜನತೆಯು ನನ್ನ ಮೇಲೆ ವಿಶ್ವಾಸವನ್ನು ತೋರಿಸಿದೆ, ಈ ಬಗ್ಗೆ ನಾನು ಜನತೆ ಮತ್ತು ಭಾಜಪಕ್ಕೆ ಆಭಾರಿಯಾಗಿದ್ದೇನೆ. ನನ್ನ ರಾಜೀನಾಮೆಯಿಂದ ಪಕ್ಷದಲ್ಲಿ ಹೊಸ ಮುಖಗಳಿಗೆ ಅವಕಾಶ ಮತ್ತು ಜವಾಬ್ದಾರಿ ದೊರೆಯುವುದು’ ಎಂದು ಹೇಳಿದರು. ಈ ಸಮಯದಲ್ಲಿ ಅವರು ಇಂದಿನವರೆಗೆ ದೊರೆತಿರುವ ಸಹಾಯದ ಬಗ್ಗೆ ಎಲ್ಲರಿಗೆ ಧನ್ಯವಾದಗಳನ್ನು ತಿಳಿಸಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾಜಪವು ಹೊಸ ಮುಖಗಳೊಂದಿಗೆ ಹೋರಾಡುವ ಸಿದ್ಧತೆ ಮಾಡುತ್ತಿರುವ ಮಾಹಿತಿಯು ಸೂತ್ರಗಳ ಮೂಲಕ ತಿಳಿದುಬಂದಿದೆ.