‘ಜನರಿಗೆ ಗೋಮಾಂಸ ತಿನ್ನಲು ಪ್ರೋತ್ಸಾಹಿಸಿದರೆ ‘ಭಾಜಪವು ಗೋಹತ್ಯೆ ಮೇಲೆ ನಿರ್ಬಂಧ ಹೇರಲಿದೆ’ ಎಂಬ ತಪ್ಪು ತಿಳುವಳಿಕೆಯು ದೂರವಾಗುವುದು!'(ಅಂತೆ)

ನಾನು ಜನರಿಗೆ ಚಿಕನ್, ಮಟನ್ ಅಥವಾ ಮಾಂಸದ ಬದಲು ಗೋ ಮಾಂಸವನ್ನು ಹೆಚ್ಚು ತಿನ್ನಲು ಪ್ರೋತ್ಸಾಹಿಸುತ್ತೇನೆ. ಜನರಿಗೆ ಗೋಮಾಂಸ ತಿನ್ನಲು ಪ್ರೋತ್ಸಾಹಿಸುವುದರಿಂದ ‘ಭಾಜಪವು ಗೋಹತ್ಯೆ ಮೇಲೆ ನಿರ್ಬಂಧ ಹೇರಲಿದೆ’ ಎಂಬ ತಪ್ಪು ತಿಳುವಳಿಕೆಯು ದೂರವಾಗುವುದು.

ಅಪಘಾನಿಸ್ತಾನದಲ್ಲಿ ಸಂಯುಕ್ತ ರಾಷ್ಟ್ರ ಸಂಘದ ಮುಖ್ಯ ಕಚೇರಿಯ ಮೇಲಿನ ಗೋಲಿಬಾರಿನಲ್ಲಿ ಸುರಕ್ಷಾ ಕರ್ಮಚಾರಿಯ ಮೃತ್ಯು

ಹೇರಾತ ಪ್ರಾಂತದಲ್ಲಿರುವ ಸಂಯುಕ್ತ ರಾಷ್ಟ್ರ ಸಂಘದ ಮುಖ್ಯ ಕಚೇರಿಯ ಮೇಲೆ ನಡೆಸಿದ ಗೋಲಿಬಾರಿನಲ್ಲಿ ಒಬ್ಬ ಸುರಕ್ಷಾ ಕರ್ಮಚಾರಿಯು ಸಾವನ್ನಪ್ಪಿದನು. ಈ ಆಕ್ರಮಣದ ಹಿಂದೆ ತಾಲಿಬಾನ್‌ನ ಕೈವಾಡ ಇದೆಯೇನು ಎಂಬ ಈ ವಿಷಯವಾಗಿ ಇನ್ನು ಯಾವುದೇ ಪುರಾವೆಗಳು ಸಿಕ್ಕಿಲ್ಲ.

ಇಸ್ರೈಲ್ ನ ತೈಲವಾಹಕ ಹಡಗಿನ ಮೇಲೆ ಡ್ರೋನ್ ನ ಮೂಲಕ ನಡೆಸಿದ ಆಕ್ರಮಣದಲ್ಲಿ ಇಬ್ಬರ ಮೃತ್ಯು

ಒಮಾನ ಹತ್ತಿರ ಅರಬ್ಬಿ ಸಮುದ್ರದಲ್ಲಿ ಇಸ್ರೈಲ್ ನ ತೈಲವಾಹಕ ಹಡಗಿನ ಮೇಲೆ ಡ್ರೋನ್ ನ ಮೂಲಕ ಆಕ್ರಮಣ ನಡೆಸಲಾಯಿತು. ಇದರಲ್ಲಿ ಹಡಗಿನ ಚಾಲಕ ದಳದ ಇಬ್ಬರು ಕೊಲ್ಲಲ್ಪಟ್ಟರು. ಇವರಿಬ್ಬರು ಬ್ರಿಟನ್ ಮತ್ತು ರೊಮಾನಿಯ ಇಲ್ಲಿಯ ನಿವಾಸಿಗಳಾಗಿದ್ದಾರೆ.

ಭಯೋತ್ಪಾದಕರಿಂದ ದೇವಾಲಯಗಳ ಮೇಲೆ ದಾಳಿ ಮಾಡುವ ಸಂಚು !

ರಾಜ್ಯದ ದೇವಾಲಯಗಳ ಮೇಲೆ ದಾಳಿ ಮಾಡುವ ಸಂಚನ್ನು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳವು ರಾಜ್ಯದ ೧೪ ಸ್ಥಳಗಳಲ್ಲಿ ದಾಳಿ ನಡೆಸಿದೆ. ಕಳೆದ ವಾರದಲ್ಲಿ ಪೊಲೀಸರು ಇಬ್ಬರು ಭಯೋತ್ಪಾದಕರನ್ನು ಸ್ಪೋಟಕ ಸಹಿತ ಬಂಧಿಸಿದ್ದರು.

ಹರಿಯಾಣ ಸರಕಾರದಿಂದ ಗೋಹತ್ಯೆ ಮತ್ತು ಗೋ ಕಳ್ಳಸಾಗಣೆಯನ್ನು ತಡೆಗಟ್ಟಲು ವಿಶೇಷ ಗೋ ಸಂರಕ್ಷಣಾ ಕ್ರಿಯಾ ಪಡೆಯ ಸ್ಥಾಪನೆ

ಹರಿಯಾಣಾ ಸರಕಾರವು ಗೋ ಕಳ್ಳಸಾಗಣೆ, ಗೋಹತ್ಯೆ ಮತ್ತು ಬೀದಿ ಪ್ರಾಣಿಗಳ ಓಡಾಟಗಳನ್ನು ತಡೆಗಟ್ಟಲು ಪ್ರತಿಯೊಂದು ಜಿಲ್ಲಾ ಮಟ್ಟದಲ್ಲಿ ‘ಸ್ಪೆಶಲ್ ಕೌ ಪ್ರೊಟೆಕ್ಷನ್ ಟಾಸ್ಕ ಫೋರ್ಸ್’ಅನ್ನು (ವಿಶೇಷ ಗೋರಕ್ಷಣಾ ಕೃತಿ ಪಡೆ)ಸ್ಥಾಪಿಸಲಾಗಿದೆ.

ತಿರುನೆಲವೇಲಿ (ತಮಿಳುನಾಡು) ಇಲ್ಲಿನ ಹಿಂದೂಗಳಿಗೆ ಪವಿತ್ರವಾದ ಬೆಟ್ಟದ ಮೇಲೆ ಚಂದ್ರ ಮತ್ತು ನಕ್ಷತ್ರ” ಚಿತ್ರಿಸಿ ‘ಅಲ್ಲಾಹ’ ಮತ್ತು ‘786’ ಬರೆದ ಧರ್ಮಾಂಧರು!

ಮಸೀದಿ ಅಥವಾ ಚರ್ಚ್‍ಗಳ ಮೇಲೆ ಹಿಂದೂಗಳು ತಮ್ಮ ಧರ್ಮದ ಪವಿತ್ರ ಅಕ್ಷರಗಳನ್ನು ಬರೆದಿದ್ದರೆ ಇಷ್ಟೊತ್ತಿಗೆ ದೇಶದಲ್ಲಿ ಅಷ್ಟೇ ಅಲ್ಲ ಇಡೀ ಜಗತ್ತಿನಲ್ಲಿ ಹಿಂಸಾತ್ಮಕ ಪ್ರತಿಕ್ರಿಯೆಯು ಉದ್ಭವಿಸುತ್ತಿದ್ದವು.

ಅಸ್ಸಾಂನಲ್ಲಿ ರೋಗಿಗಳನ್ನು ಉಪಚರಿಸುವ ನೆಪದಿಂದ ಮತಾಂತರಿಸುವ ಕ್ರೈಸ್ತ ಧರ್ಮಪ್ರಚಾರಕನ ಬಂಧನ.

ಒತ್ತಾಯಪೂರ್ವಕವಾಗಿ ಜನರನ್ನು ಮತಾಂತರಿಸುತ್ತಿದ್ದ ಪ್ರಕರಣದಲ್ಲಿ ಅಸ್ಸಾಂ ಪೊಲೀಸರು ಇಲ್ಲಿಯ ಕ್ರಿಶ್ಚನ್ ಮಿಷಿನರಿ(ಧರ್ಮಪ್ರಚಾರಕ) ರಂಜನ್ ಸುತಿಯಾನನ್ನು ಬಂಧಿಸಿದ್ದಾರೆ.

ಪೊಲೀಸರು ಕೊಟ್ಟಿರುವ ಮಾಹಿತಿಯಿಂದ ಸಮಾಚಾರವನ್ನು ಪ್ರಸಾರ ಮಾಡಿದರೆ ಅಪಕೀರ್ತಿ ಹೇಗೆ ಆಗುತ್ತದೆ? ಮುಂಬೈ ಉಚ್ಚ ನ್ಯಾಯಾಲಯ

ನಟಿ ಶಿಲ್ಪಾ ಶೆಟ್ಟಿ ಇವರು ತಮ್ಮ ಪತಿ ರಾಜ ಕುಂದ್ರಾ ಅವರ ಬಂಧನದ ಸಮಾಚಾರಗಳಿಂದ ಅಪಕೀರ್ತಿ ಆಗುತ್ತಿರುವ ಬಗ್ಗೆ ನ್ಯಾಯಾಲಯದಲ್ಲಿ ಮನವಿಯನ್ನು ದಾಖಲಿಸಿದ್ದಾರೆ.

ಚೀನಾಗೆ ಕೊರೊನಾದ ‘ಸೂಪರ್ ಸ್ಪ್ರೆಡರ್’ ಎಂದು ಕರೆದಿದ್ದಕ್ಕಾಗಿ ಭಾರತೀಯ ಮಾಸಿಕ ಪತ್ರಿಕೆಯನ್ನು ಚೀನಾವು ನಿಷೇಧಿಸಿದೆ !

ಚೀನಾವನ್ನು ಕೊರೊನಾದ ‘ಸುಪರ ಸ್ಪ್ರೆಡರ್’ (ದೊಡ್ಡ ಪ್ರಮಾಣದಲ್ಲಿ ಸೋಂಕು ಹರಡಿಸುವ) ಎಂದು ಹೇಳಿದ್ದರಿಂದ ಚೀನಾವು ಭಾರತದ ‘ಸ್ವರಾಜ್ಯ’ ಮಾಸಿಕ ಪತ್ರಿಕೆಯನ್ನು ನಿಷೇಧಿಸಿದೆ, ಕೊರೊನಾ ರೋಗಾಣುವು ಚೀನಾದ ವುಹಾನ್‌ನ ಪ್ರಸಿದ್ಧ ಪ್ರಯೋಗಾಲಯದಿಂದಲೇ ಹುಟ್ಟಿಕೊಂಡಿತು, ಎಂಬುದು ವಿಶ್ವದ ಅನೇಕ ವಿಜ್ಞಾನಿಗಳ ಅಭಿಪ್ರಾಯವಾಗಿದೆ.

ದೆಹಲಿಯಲ್ಲಿನ ಚೀನಾ ರಾಯಭಾರಿ ಕಛೇರಿಯು ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾರತದಲ್ಲಿನ ಸಾಮ್ಯವಾದಿ ಪಕ್ಷ, ದ್ರಮುಕ ಇತ್ಯಾದಿ ಪಕ್ಷಗಳ ನೇತಾರರ ಸಹಭಾಗ !

ಶತ್ರುರಾಷ್ಟ್ರದ ರಾಯಭಾರಿ ಕಛೇರಿಯು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಹಭಾಗಿಯಾಗುವ ಪಕ್ಷಗಳ ನೇತಾರರನ್ನು  ರಾಷ್ಟ್ರವಾದಿ ನಾಗರಿಕರು ಕಾನೂನುಬದ್ಧ ಮಾರ್ಗದಿಂದ ಕಠೋರವಾಗಿ ಪ್ರಶ್ನಿಸಬೇಕಿದೆ !