ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಅಮರಕಂಟಕದಲ್ಲಿರುವ ನರ್ಮದಾ ನದಿಯ ಉಗಮ ದೇವಸ್ಥಾನಕ್ಕೆ ದಾನ ರೂಪದಲ್ಲಿ ಬಂದಿರುವ ಚಿನ್ನ ಮತ್ತು ಬೆಳ್ಳಿಯ ಯಾವುದೇ ದಾಖಲೆಗಳು ಲಭ್ಯವಿಲ್ಲ ಎಂದು ಆರೋಪಿಸಲಾಗಿದೆ.
ಅಮರಕಂಟಕದಲ್ಲಿರುವ ನರ್ಮದಾ ನದಿಯ ಉಗಮ ದೇವಸ್ಥಾನಕ್ಕೆ ದಾನ ರೂಪದಲ್ಲಿ ಬಂದಿರುವ ಚಿನ್ನ ಮತ್ತು ಬೆಳ್ಳಿಯ ಯಾವುದೇ ದಾಖಲೆಗಳು ಲಭ್ಯವಿಲ್ಲ ಎಂದು ಆರೋಪಿಸಲಾಗಿದೆ.
ಗುಜರಾತ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದ ಕಾಣಿಕೆ ಡಬ್ಬಿಯ ನೋಟು ಎಣಿಕೆಯ ಸಮಯದಲ್ಲಿ ನೌಕರನೊಬ್ಬ ನೋಟುಗಳನ್ನು ಕಳ್ಳತನ ಮಾಡುತ್ತಿರುವುದು ‘ಸಿಸಿಟಿವಿ’ ದೃಶ್ಯಾವಳಿಗಳಲ್ಲಿ ಈಗ ಹೊರಬಂದಿದೆ.
‘ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ಗೆ ಬಂದ ದೇಣಿಗೆಗಳು ಮತ್ತು ಅರ್ಪಣೆಗಳ ನಿರ್ವಹಣೆಯಲ್ಲಿ ನಡೆದಿರುವ ಆರ್ಥಿಕ ಅವ್ಯವಹಾರಗಳ ಪ್ರಕರಣದ ತನಿಖೆಯು ನ್ಯಾಯಾಲಯದ ಉಸ್ತುವಾರಿಯಲ್ಲಿ ನಡೆಯಬೇಕು ಎಂದು ಆಗ್ರಹಿಸಲಾಗಿದೆ
ಪೊಲೀಸರು ಮತ್ತು ಸರ್ಕಾರಕ್ಕೆ ನಾಚಿಕೆಯಾಗಬೇಕು. ಹಿಂದೂ ದೇವಾಲಯಗಳಿಗೆ ಸಂಬಂಧಿಸಿದಂತೆ ಇಂತಹ ಘಟನೆಗಳನ್ನು ತಡೆಗಟ್ಟುವ ಬಗ್ಗೆ ಅಷ್ಟೊಂದು ಅಸಡ್ಡೆ ತೋರುವವರನ್ನು ಜೈಲಿಗೆ ಹಾಕಬೇಕು!
ಪ್ರಮೋದ್ ನೌಟಿಯಾಲ್ ಅವರಿಗೆ ದೇವಸ್ಥಾನದ ದೇಣಿಗೆಯ ಜವಾಬ್ದಾರಿಯಿತ್ತು. ಅವರು ‘ದೇಣಿಗೆ ಅಧಿಕಾರಿ’ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಬಂಧನದ ನಂತರ ಬದರಿನಾಥ ದೇವಸ್ಥಾನ ಸಮಿತಿಯ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮೇಲೂ ಬಂಧನದ ಭೀತಿ ಎದುರಾಗಿದೆ.
ಪ್ರಾಚೀನ ಬುದ್ಧೇಶ್ವರ ದೇವಸ್ಥಾನದಿಂದ ಮೇಲಿಂದ ಮೇಲೆ ಆಗುತ್ತಿದ್ದ ಗಂಟೆಯ ಕಳುವಿನ ರಹಸ್ಯ ಕೊನೆಗೂ ಬಯಲಾಗಿದ್ದು, ದೇವಸ್ಥಾನದ ಸೇವಕನೇ ಹಿತ್ತಾಳೆಯ ಬೆಲೆಬಾಳುವ ಗಂಟೆಯನ್ನು ಕದಿಯುವಾಗ ಸಾಕ್ಷ್ಯ ಸಮೇತವಾಗಿ ಸಿಕ್ಕಿಬಿದ್ದಿದ್ದಾನೆ.
ಬೇಲೂರು ನಗರದ ಐತಿಹಾಸಿಕ ಚನ್ನಕೇಶವ ಸ್ವಾಮಿ ದೇವಸ್ಥಾನದ ಹುಂಡಿಯಿಂದ ೧ ಲಕ್ಷದ ೯೮ ಸಾವಿರ ರೂಪಾಯಿಗಳನ್ನು, ಹುಂಡಿ ಹಣದ ಎಣಿಕೆಯ ಚಿತ್ರೀಕರಣಕ್ಕಾಗಿ ಬಂದಿದ್ದ ವ್ಯಕ್ತಿಯೊಬ್ಬ ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಆ ಸಮಯದಲ್ಲಿ ಅವರ ಬೇಡಿಕೆಗಳನ್ನು ಆಲಿಸಲಿಲ್ಲ. ಆದ್ದರಿಂದ, ಪ್ರತಿಭಟನೆಯ ರೂಪವಾಗಿ ಕೊನೆಗೆ ೨೩ ಸಿಬ್ಬಂದಿ ಒಟ್ಟಾಗಿ ರಾಜೀನಾಮೆ ನೀಡಿದ್ದಾರೆ.
ಪ್ರಸಿದ್ಧ ತೀರ್ಥಕ್ಷೇತ್ರ ಶ್ರೀ ಬದರಿನಾಥ ಧಾಮದ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ದೇವಸ್ಥಾನ ಸಮಿತಿಯ ಅಧ್ಯಕ್ಷರ ಅಮಾನತುಗೊಂಡಿರುವ ಖಾಸಗಿ ಕಾರ್ಯದರ್ಶಿ ಪ್ರಮೋದ ನೌಟಿಯಾಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಉತ್ತರಾಖಂಡದ ಪ್ರಸಿದ್ಧ ಬದರಿನಾಥ ಧಾಮದಲ್ಲಿ ದೇಣಿಗೆ ಕಳ್ಳತನದ ಆರೋಪದ ಪ್ರಕರಣದಲ್ಲಿ, ಬದರಿನಾಥ-ಕೇದಾರನಾಥ ಮಂದಿರ ಸಮಿತಿಯ ಅಧ್ಯಕ್ಷರ ಖಾಸಗಿ ಕಾರ್ಯದರ್ಶಿ ಪ್ರಮೋದ ನೌಟಿಯಾಲರವರನ್ನು ಅಮಾನತುಗೊಳಿಸಲಾಗಿದೆ.