ಬೆಂಗಳೂರಿನ 16 ಮಸೀದಿಗಳ ಮೇಲಿನ ಧ್ವನಿವರ್ಧಕಗಳಿಂದಾಗುವ ಶಬ್ಧ ಮಾಲಿನ್ಯ ವಿರುದ್ಧ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ

ನ್ಯಾಯಾಲಯದಿಂದ ರಾಜ್ಯ ಸರಕಾರಕ್ಕೆ ಪ್ರಮಾಣಪತ್ರ ಸಲ್ಲಿಸಲು ಆದೇಶ

ನ್ಯಾಯಾಲಯದಲ್ಲಿ ಇದಕ್ಕಾಗಿ ಏಕೆ ಅರ್ಜಿ ಸಲ್ಲಿಸಬೇಕಾಗುತ್ತದೆ ? ಪೊಲೀಸರು ಮತ್ತು ಆಡಳಿತದವರಿಗೆ ವಾಯುಮಾಲಿನ್ಯವಾಗುತ್ತಿರುವುದು ಗಮನಕ್ಕೆ ಬರುವುದಿಲ್ಲವೇ ? ಅಥವಾ ಅವರು ಕಿವುಡರಾಗಿದ್ದಾರೆಯೇ ? – ಸಂಪಾದಕರು

ಬೆಂಗಳೂರು – ಕರ್ನಾಟಕ ಉಚ್ಚ ನ್ಯಾಯಾಲಯವು ಮಸೀದಿಗಳ ಮೇಲಿನ ಧ್ವನಿವರ್ಧಕದಿಂದ ಆಗುತ್ತಿರುವ ಶಬ್ಧಮಾಲಿನ್ಯ ಬಗ್ಗೆ ಒಂದು ಅರ್ಜಿಯ ಆಲಿಕೆಯನ್ನು ಮಾಡುತ್ತಿರುವಾಗ ರಾಜ್ಯ ಸರಕಾರಕ್ಕೆ 4 ವಾರಗಳಲ್ಲಿ ಪ್ರಮಾಣಪತ್ರ ಸಲ್ಲಿಸುವಂತೆ ಆದೇಶ ನೀಡಿದೆ. ಇದರಲ್ಲಿ ಥಣಿಸಂದ್ರಾ ಮಾರ್ಗದಲ್ಲಿಯ ಐಕಾನ್ ಅಪಾರ್ಟ್‍ಮೆಂಟ್‍ನಲ್ಲಿನ 32 ನಿವಾಸಿಗಳು ಇಲ್ಲಿಯ 16 ಮಸೀದಿಗಳ ಮೇಲಿನ ಧ್ವನಿವರ್ಧಕಗಳಿಂದಾಗುವ ಶಬ್ಧಮಾಲಿನ್ಯದ ಬಗ್ಗೆ  ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಿದ್ದಾರೆ.