ರಾಜಸ್ಥಾನದ ಭರತಪುರದಲ್ಲಿ ಮತಾಂಧ ಗೋಕಳ್ಳರಿಂದಾದ ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸರಿಗೆ ಗಾಯ

4 ಮತಾಂಧ ಗೋಕಳ್ಳರ ಬಂಧನ !

ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಮತಾಂಧ ಗೋಕಳ್ಳರು ಪೊಲೀಸರ ಮೇಲೆ ಗುಂಡು ಹಾರಿಸುವ ಧೈರ್ಯ ತೋರುತ್ತಾರೆ, ಇದನ್ನು ಗಮನದಲ್ಲಿಡಿ ! – ಸಂಪಾದಕರು 

ಇಂತಹ ಗೋಕಳ್ಳರಿಗೆ ಗಲ್ಲು ಶಿಕ್ಷೆ ವಿಧಿಸಲು ಸರಕಾರ ಪ್ರಯತ್ನಿಸುವುದೆ ?- ಸಂಪಾದಕರು 

ಭರತಪುರ (ರಾಜಸ್ಥಾನ) – ಭರತಪುರ ಜಿಲ್ಲೆಯಲ್ಲಿ 2 ಬೇರೆ ಬೇರೆ ಘಟನೆಗಳಲ್ಲಿ ಗೋಕಳ್ಳರು ಪೊಲೀಸರ ಮೇಲೆ ಗುಂಡು ಹಾರಿಸಿದ ಮತ್ತು ಕಲ್ಲೆಸೆದ ಘಟನೆ ನಡೆದಿದೆ. ಇದರಲ್ಲಿ ಇಬ್ಬರು ಪೋಲಿಸ್ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಈ ಪ್ರಕರಣದಲ್ಲಿ 4 ಗೋಕಳ್ಳರನ್ನು ಬಂಧಿಸಲಾಗಿದೆ. ಅವರಿಂದ 1 ವಾಹನ, 2 ದ್ವಿಚಕ್ರ ವಾಹನ, 3 ದೇಶಿ ಪಿಸ್ತೂಲು, 13 ಮದ್ದುಗುಂಡುಗಳು ಮತ್ತು 10 ಲೀಟರ ಸರಾಯಿ ವಶಪಡಿಸಿಕೊಳ್ಳಲಾಗಿದೆ. ಇದರ ಜೊತೆಗೆ 4 ಹಸುಗಳನ್ನು ಬಿಡಿಸಲಾಗಿದೆ.

1. ಗಾಂಧಿನಗರ ಕಾಲೋನಿಯಲ್ಲಿ ಗುಂಡಿನ ದಾಳಿಯ ಪ್ರಕರಣದಲ್ಲಿ ಇರ್ಷಾದ್ ಎಂಬ ಕಳ್ಳನನ್ನು ಬಂಧಿಸಲಾಗಿದೆ, ಹಾಗೂ ಇತರ 4 ಜನರು ಪರಾರಿಯಾಗಿದ್ದಾರೆ.

2. ಎರಡನೆಯ ಘಟನೆಯಲ್ಲಿ 3 ಗೋಕಳ್ಳರು ಪೊಲೀಸರ ಮೇಲೆ ಗುಂಡು ಹಾರಿಸಿದರು. ಪೊಲೀಸರು ಅದಕ್ಕೆ ಪ್ರತ್ಯುತ್ತರ ನೀಡುತ್ತಾ ಒಂದುಗಂಟೆಯ ಚಕಮಕಿಯಲ್ಲಿ ಅವರನ್ನು ಬಂಧಿಸಿದ್ದಾರೆ. ಅವರ ಮೇಲೆ ಹಸು ಕಳ್ಳಸಾಗಾಣಿಕೆಯ ಅನೇಕ ಅಪರಾಧಗಳು ಇವೆ. ಕಳೆದ ವರ್ಷ ಗೋಕಳ್ಳರಿಂದಾದ ಗುಂಡಿನ ದಾಳಿಯಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದರು.