ಮೈಸೂರಿನಲ್ಲಿ ೨೦೧೬ ರಲ್ಲಿ ನಡೆದ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಅಲ್ ಖಾಯದಾದ ೩ ಉಗ್ರರರು ತಪ್ಪಿತಸ್ಥರು

  • ಉಗ್ರರಿಗೆ ಗಲ್ಲು ಶಿಕ್ಷೆ ಆಗಲು ಸರಕಾರಿ ವ್ಯವಸ್ಥೆಯು ಪ್ರಯತ್ನ ಮಾಡಬೇಕು. ಆಗ ಮಾತ್ರ ಭಯೋತ್ಪಾದನೆ ಬೇರುಸಮೇತ ನಾಶಮಾಡಬಹುದು !
  • ಒಂದು ಬಾಂಬ್ ಸ್ಫೋಟದ ತೀರ್ಪು ೫ ವರ್ಷದ ನಂತರ ಆಗುವುದು ಜನರಿಗೆ ಅಪೇಕ್ಷಿತವಿಲ್ಲ !

ಬೆಂಗಳೂರು – ಮೈಸೂರಿನ ಚಾಮರಾಜಪುರದ ನ್ಯಾಯಾಲಯದ ಪರಿಸರದಲ್ಲಿನ ಶೌಚಾಲಯದಲ್ಲಿ ಆಗಸ್ಟ್ ೧, ೨೦೧೬ ರಲ್ಲಿ ನಡೆದ ಬಾಂಬ್ ಸ್ಫೋಟದ ಪ್ರಕರಣದಲ್ಲಿ ನ್ಯಾಯಾಲಯ ‘ಅಲ್ ಕಾಯದಾ’ ಈ ಜಿಹಾದಿ ಉಗ್ರರ ಸಂಘಟನೆಯ ಜೊತೆ ಸಂಬಂಧಿತ ೩ ಉಗ್ರರು ತಪ್ಪಿತಸ್ಥರೆಂದು ಸಾಬೀತುಪಡಿಸಿತು. ನೈನಾರ ಅಬ್ಬಾಸ್ ಅಲಿಯಾಸ್ ಲೈಬ್ರೆರಿ ಅಬ್ಬಾಸ್, ಎಮ್. ಸಾಮಸನ್ ಕರೀಮ ರಾಜಾ ಅಲಿಯಾಸ್ ಅಬ್ದುಲ್ ಕರೀಮ್ ಮತ್ತು ದಾವುದ ಸುಲೇಮಾನ್ ಎಂದು ಅವರ ಹೆಸರುಗಳಿವೆ. ಅವರೆಲ್ಲರೂ ತಮಿಳುನಾಡಿನ ಮದುರೈಯಲ್ಲಿ ವಾಸವಾಗಿದ್ದರು. ಇವರೆಲ್ಲರಿಗೆ ಅಕ್ಟೋಬರ್ ೧೧ ರಂದು ಶಿಕ್ಷೆ ನೀಡಲಾಗುವುದು.