ಪೋರಬಂದರ್ (ಗುಜರಾತ್) – ಪೋರಬಂದರ್ ಕರಾವಳಿಯಲ್ಲಿ 700 ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇರಾನಿನ ನೌಕೆಯೊಂದರಿಂದ ಈ ಮಾದಕ ದ್ರವ್ಯ ಸಾಗಾಟ ನಡೆಯುತ್ತಿರುವ ಬಗ್ಗೆ ಮಾದಕ ದ್ರವ್ಯ ನಿಯಂತ್ರಣ ವಿಭಾಗದ ತಂಡಕ್ಕೆ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ಆಧರಿಸಿ ನೌಕಾಪಡೆ ಮತ್ತು ಗುಜರಾತ್ ನ ಭಯೋತ್ಪಾದನಾ ನಿಗ್ರಹ ದಳದ ಸಹಯೋಗದಲ್ಲಿ ಕಾರ್ಯಾಚರಣೆ ನಡೆಸಿ ಸಮುದ್ರದ ಮಧ್ಯ ಭಾಗದಲ್ಲಿ ಈ ಇರಾನಿನ ನೌಕೆಯನ್ನು ತಡೆದು ಅಂದಾಜು 700 ಕೆ.ಜಿ ಮಾದಕ ದ್ರವ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಈ ವಸ್ತುಗಳ ಒಟ್ಟು ಮೌಲ್ಯ ಕೋಟ್ಯಂತರ ರೂಪಾಯಿ ಇರುವ ಸಾಧ್ಯತೆಯಿದೆ.
ಈ ಪ್ರಕರಣದಲ್ಲಿ ಎಷ್ಟು ಜನರನ್ನು ಬಂಧಿಸಲಾಗಿದೆ ಎಂಬುದು ಇದುವರೆಗೂ ಸ್ಪಷ್ಟವಾಗಿಲ್ಲ. ನೌಕೆಯಲ್ಲಿ ಇರುವ ಮಾದಕ ದ್ರವ್ಯ ಮತ್ತು ಇತರ ಸಾಕ್ಷ್ಯಗಳನ್ನು ಪರಿಶೀಲಿಸಿದ ನಂತರವೇ ಸಂಪೂರ್ಣ ಚಿತ್ರಣ ಸ್ಪಷ್ಟವಾಗಲಿದೆ ಎಂಬ ಮಾಹಿತಿಯನ್ನು ಅಧಿಕೃತ ಮೂಲಗಳು ತಿಳಿಸಿವೆ.
ಸಂಪಾದಕೀಯ ನಿಲುವುಮಾದಕ ವಸ್ತುಗಳ ವ್ಯಾಪಾರದಿಂದಲೇ ಜಿಹಾದಿ ಭಯೋತ್ಪಾದನೆ, ನಕ್ಸಲಿಸಂ ಮತ್ತು ಅನ್ಯ ಅಪರಾಧಗಳಿಗೆ ಹಣಕಾಸು ಪೂರೈಕೆಯಾಗುತ್ತದೆ. ಆದ್ದರಿಂದ ಈ ದಂಧೆ ಮಾಡುವವರನ್ನು ಬಂಧಿಸಿ ಸರಕಾರವು ಅಂತವರನ್ನು ಗಲ್ಲಿಗೇರಿಸಬೇಕು. |