ಕಾಶ್ಮೀರದಲ್ಲಿ ಹಿಂದೂಗಳ ಮೇಲಾಗುವ ಆಕ್ರಮಣದ ಹಿಂದೆ ಅತಿಕ್ರಮಣಮುಕ್ತವಾಗುತ್ತಿರುವ ಹಿಂದೂಗಳ ಆಸ್ತಿಯೇ ಕಾರಣ !

ಹಿಂದೂಗಳು ಮತ್ತೊಮ್ಮೆ ಕಾಶ್ಮೀರಕ್ಕೆ ಬರಬಾರದು, ಎಂದು ಜಿಹಾದಿ ಉಗ್ರಗಾಮಿಗಳ ಇಚ್ಛೆಯಾಗಿದೆ. ಇದರಿಂದ ಅವರಿಗೆ ಧರ್ಮವಿದೆ ಎಂಬುದು ಸ್ಪಷ್ಟವಾಗುತ್ತದೆ !

ಕಾಶ್ಮೀರದಲ್ಲಿ ಕಾಶ್ಮೀರಿ ಹಿಂದೂಗಳ ಪುನರ್ವಸತಿಯಾಗಬೇಕು’, ಎಂದು ದೇಶದಲ್ಲಿರುವ ಎಷ್ಟು ರಾಜಕೀಯ ಪಕ್ಷಗಳಿಗೆ, ಮುಸಲ್ಮಾನ ಹಾಗೂ ಕ್ರೈಸ್ತ ಸಂಘಟನೆಗಳಿಗೆ ಅನಿಸುತ್ತದೆ, ಎಂಬುದನ್ನು ಅವರು ಹೇಳಬೇಕು ಹಾಗೂ ಆ ರೀತಿಯ ಆಕ್ರಮಣಗಳನ್ನು ಜಾಹೀರಾಗಿ ನಿಷೇಧಿಸಬೇಕು, ಆದರೆ ಪ್ರತ್ಯಕ್ಷವಾಗಿ ಮಾತ್ರ ಆ ರೀತಿ ನಡೆಯುತ್ತಿರುವುದು ಕಳೆದ ೩೨ ವರ್ಷಗಳಲ್ಲಿ ಕಂಡುಬರಲಿಲ್ಲ ಎಂಬುದು ಸರ್ವಧರ್ಮಸಮಭಾವವನ್ನು ಕಾಪಾಡುವ ಹಿಂದೂಗಳು ಗಮನಕ್ಕೆ ತಂದು ಕೊಳ್ಳಬೇಕು !

ಶ್ರೀನಗರ (ಜಮ್ಮೂ-ಕಾಶ್ಮೀರ) – ಕಳೆದ ೪ ದಿನಗಳಲ್ಲಿ ಶ್ರೀನಗರದಲ್ಲಿ ೨ ಹಿಂದೂಗಳು ಹಾಗೂ ೨ ಸಿಕ್ಖರನ್ನು ಜಿಹಾದಿ ಉಗ್ರಗಾಮಿಗಳು ಹತ್ಯೆ ಮಾಡಿದ ಬಳಿಕ ಕಾಶ್ಮೀರದಲ್ಲಿ ಮತ್ತೊಮ್ಮೆ ಒತ್ತಡದ ಸ್ಥಿತಿ ನಿರ್ಮಾಣವಾಗಿದೆ. ಮುಸಲ್ಮಾನೇತರರ ಮೇಲಿನ ದಾಳಿಗಳಿಗೆ ಹಿಂದೂಗಳ ಆಸ್ತಿಯ ಮೇಲಾದ ಅತಿಕ್ರಮಣವನ್ನು ಬಿಡಿಸಲು ಪ್ರಾರಂಭಿಸಿರುವ ಪ್ರಯತ್ನಗಳೇ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

೧. ವರ್ಷ ೧೯೮೯ರ ಬಳಿಕ ಉಗ್ರಗಾಮಿಗಳ ಭಯೋತ್ಪಾದನೆಯಿಂದ ಲಕ್ಷಗಟ್ಟಲೆ ಹಿಂದೂಗಳು ಪಲಾಯನ ಮಾಡಿದ್ದರು. ಅವರ ಆಸ್ತಿಯನ್ನೆಲ್ಲ ಸ್ಥಳೀಯ ಮುಸಲ್ಮಾನರು ಅತಿಕ್ರಮಣ ಮಾಡಿದ್ದರು. ಈಗ ಕಲಮು ೩೭೦ಅನ್ನು ರದ್ದು ಪಡಿಸಿದ ಬಳಿಕ ರಾಜ್ಯದ ಆಡಳಿತಾಂಗವು ಒಂದು ಜಾಲತಾಣವನ್ನು ಪ್ರಾರಂಭಿಸಿದೆ. ಅದಕ್ಕೆ ಅನುಸಾರವಾಗಿ ದೇಶದ ಯಾವುದೇ ಭಾಗದಲ್ಲಿ ವಾಸಿಸುತ್ತಿರುವ ಕಾಶ್ಮೀರಿ ಹಿಂದೂಗಳು ತಮ್ಮ ಅತಿಕ್ರಮಣ ಮಾಡಿರುವ ಆಸ್ತಿಯ ಬಗ್ಗೆ ತಕರಾರು ನೋಂದಾಯಿಸಬಹುದಾಗಿದೆ. ಆ ತಕರಾರಿನ ಮೇಲೆ ಆಡಳಿತವು ಕಾರ್ಯಾಚರಣೆ ನಡೆಸಿ ಅದನ್ನು ಅತಿಕ್ರಮಣ ಮುಕ್ತಗೊಳಿಸುತ್ತಿದೆ.

೨. ಜಮ್ಮೂ-ಕಾಶ್ಮೀರದ ವರಿಷ್ಠ ಅಧಿಕಾರಿಯೊಬ್ಬರು ನುಡಿದರು, ಪ್ರತಿಯೊಂದು ಜಿಲ್ಲೆಯಲ್ಲಿಯೂ ಅತಿಕ್ರಮಣವಾಗಿರುವ ಆಸ್ತಿಯಿದೆ. ಸರ್ವಾಧಿಕ ೧ ಸಾವಿರ ತಕರಾರು ಅನಂತನಾಗದಲ್ಲಿದೆ. ಒಂದು ಪ್ರಕರಣದಲ್ಲಿ ೫ ಏಕರೆಗಿಂತ ಹೆಚ್ಚು ನೆಲವನ್ನು ಕಬಳಿಸಲಾಗಿತ್ತು. ಈಗ ಆ ನೆಲವನ್ನು ಮುಕ್ತಗೊಳಿಸಲಾಗಿದೆ. ಬಹುತಾಂಶ ಪ್ರಕರಣದಲ್ಲಿ ಅತಿಕ್ರಮಣ ಮಾಡಿದವರು ನೆರೆಹೊರೆಯವರೇ ಆಗಿದ್ದರು. (ಹಿಂದೂ-ಮುಸಲ್ಮಾನ ಭಾಯಿ ಭಾಯಿ’ ಎನ್ನುವವರು ಈ ವಿಷಯದಲ್ಲಿ ಯಾಕೆ ಬಾಯಿ ಮುಚ್ ಕುಳಿತಿದ್ದಾರೆ ? ? ಸಂಪಾದಕರು) ಕೆಲವು ಪ್ರಕರಣದಲ್ಲಿ ಭೂ ಮಾಫಿಯಾದವರು ಸಕ್ರಿಯವಾಗಿದ್ದಾರೆ.

೩. ಕಾಶ್ಮೀರಿ ಪಂಡಿತರ ಸಂಘರ್ಷ ಸಮಿತಿಯ ಪದಾಧಿಕಾರಿಗಳಾದ ಸಂದೀಪರವರು ನುಡಿದರು, ಕೇವಲ ಹಿಂದೂಗಳಷ್ಟೇ ಮನೆ ಬಿಟ್ಟು ಹೋಗಿಲ್ಲ. ಎಷ್ಟೋ ಸಿಕ್ಖರು ಹಾಗೂ ಮುಸಲ್ಮಾನರನ್ನು ಕೂಡ ಪಲಾಯನ ಮಾಡಲು ಒತ್ತಾಯ ಪಡಿಸಲಾಯಿತು. ಅವರ ಆಸ್ತಿಯೂ ಕೂಡ ವಾಪಾಸು ಸಿಗಬೇಕು. (ಈ ರೀತಿಯ ಬೇಡಿಕೆಗಳನ್ನು ಕೇವಲ ಹಿಂದೂಗಳಷ್ಟೇ ಮಾಡಬಹುದು. ಇದರಿಂದ ಹಿಂದೂ ಧರ್ಮದ ಕಲಿಕೆ ಎಷ್ಟು ಅದ್ವಿತೀಯವಾಗಿದೆ ಎಂಬುದು ಗಮನಕ್ಕೆ ಬರುತ್ತದೆ ! ? ಸಂಪಾದಕರು)

೪. ಶ್ರೀನಗರದ ಜಿಲ್ಲಾಧಿಕಾರಿಗಳಾದ ಮಹಂಮದ್ ಎಜಾಜ ಅಸದರವರು ನುಡಿದರು, ಜಿಲ್ಲೆಯಲ್ಲಿ ಒಟ್ಟು ೬೬೦ ತಕರಾರುಗಳು ಸಿಕ್ಕಿದೆ. ಅವುಗಳ ಪೈಕಿ ೩೯೦ ತಕರಾರುಗಳನ್ನು ನಿವಾರಿಸಲಾಗಿದೆ. ೧೬ ಪ್ರಕರಣಗಳಲ್ಲಿ ಆದಾಯದ ಕಾಗದಪತ್ರಗಳಲ್ಲಿ ಮಾರ್ಪಾಟು ಮಾಡಿ ಬೇರೆಯವರ ಹೆಸರಿನಲ್ಲಿ ಭೂಮಿಯನ್ನು ವರ್ಗಾಯಿಸಲಾಗಿದೆ.