ಬಕ್ಸರ್ (ಬಿಹಾರ) – ಗಂಗಾ ನದಿಯಲ್ಲಿ 50 ರಿಂದ 60 ಹಿಂದೂಗಳನ್ನು ಮತಾಂತರ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಇದರ ಒಂದು ವೀಡಿಯೊ ಬಹಿರಂಗವಾಗಿದೆ. ತದನಂತರ ಹಿಂದೂ ಸಂಘಟನೆಗಳು ಈ ಮತಾಂತರವನ್ನು ವಿರೋಧಿಸಿದವು. ಇದಾದ ಬಳಿಕ ಪೊಲೀಸರು ಮತಾಂತರ ಮಾಡಿದ ಮೂವರು ಪಾದ್ರಿಗಳನ್ನು ಬಂಧಿಸಿದ್ದಾರೆ. ಜನರು ತಮ್ಮ ಸ್ವಂತ ಇಚ್ಛೆಯಿಂದ ಬಂದರು ಮತ್ತು ಬೈಬಲ್ ಅನ್ನು ಓದಿದ ನಂತರ ಅವರು ಸ್ವತಃ ಮತಾಂತರಗೊಳ್ಳಲು ನಿರ್ಧರಿಸಿದರೆಂದು ಪಾದ್ರಿಗಳು ಹೇಳಿದ್ದಾರೆ. ಈ ಘಟನೆ ನಾಗಪುರ ಗ್ರಾಮದ ಮಹಾವೀರ ಗಂಗಾ ನದಿಯ ದಡದಲ್ಲಿ ನಡೆದಿದೆ. ಸ್ಯಾಮ್ಯುಯೆಲ್ ಎಂಬ ಹೆಸರಿನ ಪಾದ್ರಿ ತಮಿಳುನಾಡಿನವರಾಗಿದ್ದು, ಪಾದ್ರಿ ರಾಜು ರಾಮ ಮಸಿಹ ಮತ್ತು ರಾಜೀವ ರಂಜನ ರಾಮ ಇಬ್ಬರೂ ಬಿಹಾರದ ನಿವಾಸಿಗಳಾಗಿದ್ದಾರೆ.
1. ಪಾದ್ರಿ ರಾಜೂರಾಮ ಮಾತನಾಡಿ, ‘ಹಲವಾರು ಜನರು ನನ್ನ ಬಳಿ ಬಂದು ಅವರ ಕಾಯಿಲೆಗಳ ಬಗ್ಗೆ ನನಗೆ ಹೇಳಿದರು. ನಾನು ಅವರಿಗೆ ಔಷಧಿಯನ್ನು ತೆಗೆದುಕೊಳ್ಳುವಂತೆ ಹೇಳಿ `ನಿಮ್ಮ ಕಾಯಿಲೆ ದೂರವಾಗುವಂತೆ, ನಾನು ಏಸುವಿನಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಹೇಳಿದೆ. ಆ ನಂತರ ಯಾರ ತೊಂದರೆಗಳು ದೂರವಾದವೋ, ಅವರು ನಮ್ಮ ಧರ್ಮವನ್ನು ಸ್ವ ಇಚ್ಛೆಯಿಂದ ಸ್ವೀಕರಿಸಲು ಮುಂದೆ ಬಂದರು.’ ಎಂದು ಹೇಳಿದರು.
2. ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಈ ಬಗ್ಗೆ ಮಾತನಾಡಿ, ಮೊದಲು ಆದಿವಾಸಿಗಳ ಮೇಲೆ ಅತ್ಯಾಚಾರ ನಡೆಯುತ್ತಿತ್ತು. ಈಗ ಬಡವರಿಗೆ ಮತಾಂತರಗೊಳ್ಳಲು ಆಮಿಶವೊಡ್ಡುತ್ತಿದ್ದಾರೆ. ಮತಾಂತರದ ವಿರುದ್ಧ ಕಠಿಣ ಕಾನೂನು ತರುವ ಆವಶ್ಯಕತೆಯಿದೆ. ಮತಾಂತರದಿಂದ ಪ್ರತಿಯೊಂದು ಜಿಲ್ಲೆಯೂ ಸಂಕಷ್ಟಕ್ಕೆ ಸಿಲುಕಿದೆ. ಆರೋಗ್ಯ ಮತ್ತು ಶಿಕ್ಷಣದ ಹೆಸರಿನಲ್ಲಿ ಚಮತ್ಕಾರವನ್ನು ತೋರಿಸಿ ಮತಾಂತರಗೊಳಿಸುವುದು ದುರ್ದೈವವಾಗಿದೆ ಎಂದು ಹೇಳಿದರು.
Mass conversion of Hindus in the river Ganga at Buxar (Bihar), 3 priests arrested
Only a Hindu Rashtra can now bring an anti-conversion law with strict punishment to prevent such incidents!#conversion #Hindusunderattack pic.twitter.com/Y202hEFsHB
— Sanatan Prabhat (@SanatanPrabhat) November 16, 2024
ಸಂಪಾದಕೀಯ ನಿಲುವುಇಂತಹ ಘಟನೆಗಳನ್ನು ತಡೆಯಲು ಕಠಿಣ ಶಿಕ್ಷೆಯೊಂದಿಗೆ ಮತಾಂತರ ವಿರೋಧಿ ಕಾನೂನನ್ನು ತರಲು ಹಿಂದೂ ರಾಷ್ಟ್ರವೇ ಬೇಕು. |