ನವರಾತ್ರೋತ್ಸವದ ನಿಮಿತ್ತ ಗರ್ಭನಿರೋಧಕದ ಮೇಲೆ ರಿಯಾಯತಿ ನೀಡಿದ ಆನ್ ಲೈನ್ ನಲ್ಲಿ ವಸ್ತುಗಳನ್ನು ಮಾರಾಟ ಮಾಡುವ ಸಂಸ್ಥೆ ‘ನಾಯಕಾ’ !

  • ಗರ್ಭನಿರೋಧಕದ ಮೇಲೆ ಶೇಕಡ ೪೦ರಷ್ಟು ರಿಯಾಯತಿ

  • ‘ನಾಯಕಾ’ದ ಮೇಲೆ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಮಾದ್ಯಮಗಳಿಂದ ಬೇಡಿಕೆ

ಬಹುತಾಂಶ ಹಿಂದೂಗಳು ಧರ್ಮಾಭಿಮಾನಶೂನ್ಯ ರಾಗಿದ್ದಾರೆ. ಹಾಗಾಗಿ ಅವರ ಶ್ರದ್ಧಾಸ್ಥಾನಗಳ ಹಾಗೂ ಹಬ್ಬಗಳ ಅವಹೇಳನೆಯಾಗುವಾಗಲೂ ಅವರು ನಿಷ್ಕ್ರಿಯವಾಗಿರುತ್ತಾರೆ. ಈ ಕಂಪನಿಯ ವಿರುದ್ಧ ಕೇಂದ್ರ ಹಾಗೂ ಎಲ್ಲಾ ರಾಜ್ಯಗಳಲ್ಲಿ ಸರಕಾರಗಳು ಸ್ವತಃ ಮುಂದಾಳತ್ವವಹಿಸಿ ಕಾರ್ಯಾಚರಣೆ ನಡೆಸಿ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ರಕ್ಷಿಸಬೇಕು. ಹಿಂದೂ ರಾಷ್ಟ್ರದಲ್ಲಿ ಈ ರೀತಿಯ ಪ್ರಕಾರಗಳನ್ನು ಅವಹೇಳನೆಯನ್ನು ಮಾಡಲು ಯಾರಿಗೂ ಧೈರ್ಯವಾಗುವುದಿಲ್ಲ, ಎಂಬ ರೀತಿಯ ಕಾಯಿದೆಯ ಭಯವಿರಲಿದೆ !

ನವದೆಹಲಿ – ‘ನಾಯಕಾ’ ಎಂಬ ಆನ್ ಲೈನ್ ನಲ್ಲಿ ವಸ್ತುಗಳನ್ನು ಮಾರಾಟ ಮಾಡುವ ಸಂಸ್ಥೆಯು ನವರಾತ್ರಿಯ ನಿಮಿತ್ತ ಗರ್ಭನಿರೋಧಕವನ್ನು ಮಾರಾಟ ಮಾಡಲು ಶೇಕಡ ೪೦ರಷ್ಟು ರಿಯಾಯತಿ ನೀಡುವಂತಹ ಯೋಜನೆ ಘೋಷಿಸಿದೆ. ಅದಕ್ಕೆ ಸಾಮಾಜಿಕ ಮಾಧ್ಯಮಗಳಿಂದ ವಿರೋಧವಾಗುತ್ತಿದೆ.

೧. ಟ್ವಿಟರ ನಲ್ಲಿ ಬಳಕೆಗಾರರೊಬ್ಬರು ಟ್ವಿಟ್ ಮಾಡಿ ‘ನಾನು ‘ನಾಯಕಾ’ ಆಪ್ ಡಿಲೀಟ್ ಮಾಡಲಿದ್ದೇನೆ. ‘ನಾಯಕಾ’ ರಮಝಾನ, ಈದ, ಗುಡ ಫ್ರಾಯಡೆ, ಕ್ರಿಸಮಸ ಮುಂತಾದ ಹಬ್ಬಗಳ ಸಮಯದಲ್ಲಿ ಕೂಡ ಆ ರೀತಿಯ ರಿಯಾಯತಿ ನೀಡಬೇಕು. ಪ್ರತೀಸಲ ಹಿಂದೂಗಳ ಹಬ್ಬಗಳ ಸಮಯದಲ್ಲಿ ಈ ರೀತಿಯ ರಿಯಾಯತಿಯನ್ನು ಹೇಗೆ ನೀಡಲಾಗುತ್ತದೆ?” ಎಂದು ಹೇಳಿದರು.

೨. ಸಂತೋಷ ಎಂಬ ಹೆಸರಿನ ಬಳಕೆಗಾರರು ಟ್ವಿಟ್ ಮಾಡಿ, ‘ನಾಯಕಾ’ದ ಮೇಲೆ ಸಂಪೂರ್ಣವಾಗಿ ಬಹಿಷ್ಕಾರ ಹೇರಬೇಕು. ಅತಿಸ್ವಾತಂತ್ರ್ಯ ಹೆಚ್ಚು ಅಪಾಯಕರವಾಗಿರುತ್ತದೆ. ಅದರ ವಿರುದ್ಧವಾಗಿ ಕಾನೂನು ಮಾರ್ಗದಲ್ಲಿ ಕಾರ್ಯಾಚರಣೆ ಮಾಡಬೇಕು ಎಂದು ಹೇಳಿದ್ದಾರೆ

೩. ಬಳಕೆಗಾರರೊಬ್ಬರು ‘ನಾಯಕಾ’ ಅಥವಾ ಇತರ ಕಂಪನಿಗಳಿಗೆ ಹಿಂದೂಗಳ ಹಬ್ಬ ಹಾಗೂ ಅವರ ದೇವತೆಗಳಿಗೆ ಅವಮಾನ ಮಾಡಬಹುದು; ಏಕೆಂದರೆ ಆ ರೀತಿ ಮಾಡಿದರೂ ಸಹ, ಆ ಹಿಂದೂಗಳು ಆ ಸಂಸ್ಥೆಯ ಉತ್ಪಾದನೆಗಳನ್ನು ಖರೀದಿಸುತ್ತಾರೆ ಎಂದು ತಿಳಿದಿದೆ ಎಂದು ಬರೆದಿದ್ದಾರೆ (ಈ ರೀತಿಯ ಮಾನಸಿಕತೆ ಹಿಂದೂಗಳಿಗೆ ಲಜ್ಜಾಸ್ಪದ! ಅಂತಹವರನ್ನು ಹಿಂದೂಗಳ ದೇವತೆಗಳಾದರೂ ಆಪತ್ಕಾಲದಲ್ಲೇಕೆ ಕಾಪಾಡ ಬೇಕು – ಸಂಪಾದಕರು)