ಮಹಿಳೆಯ ವೇಲು ಬೈಕ್ ‘ಚೈನ್’ ನಲ್ಲಿ ಸಿಲುಕಿ ಅಪಘಾತ: ಕೈ ಮುರಿತ !

ಬೈಕ್ ನಲ್ಲಿ ಕೂರುವಾಗ ಮಹಿಳೆಯರು ಜಾಗೃತರಾಗಿರಬೇಕೆಂದು ಸೂಚಿಸುವ ಘಟನೆ !

ಝಾನ್ಸಿ (ಉತ್ತರಪ್ರದೇಶ) – ಮಹಿಳೆಯರು ದ್ವಿಚಕ್ರ ವಾಹನದಲ್ಲಿ ಕೂರುವಾಗ ಎಷ್ಟು ಜಾಗೃತರಾಗಿರಬೇಕು ಎಂಬುದನ್ನು ಸೂಚಿಸುವ ದುರಂತದ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರು ತನ್ನ ಆರು ತಿಂಗಳ ಮಗುವನ್ನು ಹಿಡಿದುಕೊಂಡು ಓರ್ವ ಸಂಬಂಧಿಕರ ಬೈಕ್ ನ ಹಿಂದೆ ಕುಳಿತಿದ್ದರು. ಮಹಿಳೆಯ ವೇಲು ಬೈಕ್ ‘ಚೈನ್’ ನಲ್ಲಿ ಸಿಲುಕಿ ದೊಡ್ಡ ಅನರ್ಥ ನಡೆದಿದೆ. ಮಹಿಳೆಯು ತನ್ನ ವೇಲನ್ನು ಕೈಗೆ ಸುತ್ತಿಕೊಂಡಿದ್ದರಿಂದ ಆಕೆಯ ಎಡಗೈ ಚೈನಿನಲ್ಲಿ ಸಿಲುಕಿತು ಮತ್ತು ಮೊಳಕೆವರೆಗೆ ಕೈ ಮುರಿದಿರುವ ಭಯಾನಕ ಘಟನೆ ವರದಿಯಾಗಿದೆ. ಈ ಅಪಘಾತ ಝಾನ್ಸಿ ಯ ಹಂಸಾರಿ -ರಾಜಗಡ ಮಾರ್ಗದಲ್ಲಿ ನಡೆದಿದೆ. ಮಹಿಳೆಯು ಆಕೆಯ ಕೈಯನ್ನು ಕಳೆದುಕೊಂಡಿದ್ದು ಒಂದು ಖಾಸಗಿ ಆಸ್ಪತ್ರೆಯಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ವರ್ಷ ರಾಯಗಡನ ನಿವಾಸಿ ಜಯರಾಮ ಅಹಿರವಾರ್ ಮತ್ತು ರಕ್ಷಾ ಎಂಬ ಯುವತಿಯ ವಿವಾಹವಾಗಿತ್ತು. ರಕ್ಷಾ ತನ್ನ ೬ ತಿಂಗಳ ಮಗುವಿನ ಜೊತೆಗೆ ಭಾವು ಬೀಜ್ ಹಬ್ಬದ ಪ್ರಯುಕ್ತ ತವರು ಮನೆಗೆ ಬಂದಿದ್ದಳು. ಆಗ ಈ ಅಪಘಾತ ನಡೆದಿದೆ.

ಟ್ರಾಫಿಕ್ ಪೊಲೀಸರಿಂದ ಮಹಿಳೆಯರಿಗೆ ಕರೆ !

ದ್ವಿಚಕ್ರ ವಾಹನ ಸ್ಟಾರ್ಟ್ ಮಾಡುವ ಮೊದಲು ನಿಮ್ಮ ಬಟ್ಟೆ ಚಕ್ರದಲ್ಲಿ ಸಿಲುಕದಂತೆ ಕಾಳಜಿ ವಹಿಸಿ. ಸೀರೆ ಅಥವಾ ವೇಲು ಗಟ್ಟಿಯಾಗಿ ದೇಹದ ಸುತ್ತಲು ಕಟ್ಟಿಕೊಳ್ಳಿ, ಹಾಗೂ ಸೀರೆಯ ಸೆರಗು ಗಾಳಿಯಲ್ಲಿ ಹಾರಾಡಲು ಬಿಡಬೇಡಿ, ಎಂದು ಟ್ರಾಫಿಕ್ ಪೊಲೀಸರು ಕರೆ ನೀಡಿದ್ದಾರೆ.