ಇಂತಹ ಕೀಳುಮಟ್ಟದ ಕಳ್ಳತನ ಮಾಡುವ ಪೊಲೀಸರನ್ನು ಅಮಾನತುಗೊಳಿಸುವುದಲ್ಲ, ಬದಲಾಗಿ ಅವರನ್ನು ಕೆಲಸದಿಂದ ವಜಾ ಮಾಡಿ ಸೆರೆಮನೆಗೆ ಅಟ್ಟಬೇಕು ! ಜೊತೆಗೆ ಈ ಅಧಿಕಾರಿಯು ಈ ರೀತಿಯ ಎಷ್ಟು ಅಪರಾಧ ಮಾಡಿದ್ದಾರೆ, ಇದನ್ನೂ ಸಹ ಕಂಡು ಹಿಡಿಯಬೇಕು !- ಸಂಪಾದಕರು
ತಿರುವನಂತಪುರಮ್ (ಕೇರಳ) – ಪೊಲೀಸ್ ಉಪನಿರೀಕ್ಷಕ ಜ್ಯೊತಿ ಸುಧಾಕರ ಇವರನ್ನು ರೈಲ್ವೆಯ ಅಪಘಾತದಲ್ಲಿ ಮೃತಪಟ್ಟ ಓರ್ವ ಪ್ರವಾಸಿಯ ಸಂಚಾರವಾಣಿಯನ್ನು ಕದ್ದ ಪ್ರಕರಣದಲ್ಲಿ ಅಮಾನತು ಮಾಡಲಾಗಿದೆ. ಪ್ರವಾಸಿ ಅರುಣ ಜೆರಿ ಇವರು ಜೂನ್ 18, 2021 ರಂದು ಅಪಘಾತದಿಂದ ಮೃತಪಟ್ಟಿದ್ದರು. ಆ ಸಮಯದಲ್ಲಿ ಘಟನೆಯ ಸ್ಥಳಕ್ಕೆ ಅವರ ಸಂಬಂಧಿಕರು ತಲುಪಿದಾಗ ಅವರಿಗೆ ಜೆರಿಯವರ ಸಂಚಾರವಾಣಿ ಮತ್ತು ಕೆಲವು ವಸ್ತುಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂತು. ಅವರು ಈ ಬಗ್ಗೆ ಕೇರಳದ ಪೊಲೀಸ್ ಮಹಾನಿರ್ದೇಶಕ, ಅದೇ ರೀತಿ ಸೈಬರ್ ಸೆಲ್ ಪೊಲೀಸರಲ್ಲಿ ದೂರನ್ನು ನೀಡಿದರು. ಸೈಬರ್ ಸೆಲ್‍ನವರು ಮಾಡಿದ ತನಿಖೆಯಲ್ಲಿ ಈ ಸಂಚಾರವಾಣಿಯು ಪೊಲೀಸ್ ಉಪನಿರೀಕ್ಷಕ ಜ್ಯೋತಿ ಸುಧಾಕರ ಇವರ ಬಳಿ ಇರುವುದು ಪತ್ತೆಯಾಯಿತು.
A Kerala police sub-inspector was suspended for stealing a mobile phone from a young man who had died in a train accident.#Kerala #Crime https://t.co/dig02QCmn8
— IndiaToday (@IndiaToday) October 10, 2021