|
ನವದೆಹಲಿ – ಸರ್ವೋಚ್ಚ ನ್ಯಾಯಾಲಯವು ಇತ್ತೀಚಿಗೆ ಒಂದು ಮಹತ್ವಪೂರ್ಣ ನಿರ್ಣಯ ನೀಡಿದೆ. ಸರಕಾರಿ ಅನುದಾನಿತ ಕ್ರೈಸ್ತ ಮಿಷನರಿ ಶಾಲೆಗಳಲ್ಲಿನ ಪಾದ್ರಿ ಮತ್ತು ನನ್ ಇವರು ತಮ್ಮ ವೇತನ ಆದಾಯ ತೆರಿಗೆ ಪಾವತಿಸಬೇಕು ಎಂದು ಹೇಳಿದೆ. ಆದಾಯ ತೆರಿಗೆ ಇಲಾಖೆಯಿಂದ ‘ಟಿ.ಡಿ.ಎಸ್.’ (ಕಂಪನಿಯಿಂದ ತೆರಿಗೆ ಕಡಿತ) ವಿಧಿಸದೇ ಇರಲು ಯಾವುದೇ ಅಡಚಣೆ ಇಲ್ಲವೆಂದು ನ್ಯಾಯಾಲಯ ಹೇಳಿದೆ. ಟಿ.ಡಿ.ಎಸ್. ಇದು ಉತ್ಪನ್ನದ ಮೂಲದ ಆಧಾರದಲ್ಲಿ ವಿಧಿಸುವ ತೆರಿಗೆಯಾಗಿದೆ. ಈ ವಿಷಯದಲ್ಲಿ ತಮಿಳುನಾಡು ಮತ್ತು ಕೇರಳದ ೧೦೦ ಕ್ರೈಸ್ತ ಡಯೋಸೇಷನ್ ಸಂಸ್ಥೆ ಮತ್ತು ಅದರ ಮಂಡಳಿಯು ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸುತ್ತಾ ಸರ್ವೋಚ್ಚ ನ್ಯಾಯಾಲಯವು, ಸರಕಾರಿ ಅನುದಾನದಿಂದ ದೊರೆಯುವ ಎಲ್ಲಾ ಸಂಬಳದ ಮೇಲೆ ತೆರಿಗೆ ವಿಧಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.
೧. ಕೆಲವು ದಿನಗಳ ಹಿಂದೆ ತತ್ಕಾಲಿನ ನ್ಯಾಯಾಧೀಶರಾದ ಡಿ.ವೈ.ಚಂದ್ರಚೂಡ ಅವರ ಅಧ್ಯಕ್ಷತೆಯಲ್ಲಿನ ಖಂಡ ಪೀಠವು ಈ ತೀರ್ಪು ನೀಡಿತ್ತು. ೧೯೪೪ ರಲ್ಲಿ ಆಗಿನ ಬ್ರಿಟಿಷ್ ಸರಕಾರವು ಮಿಷನರಿ ಶಾಲೆಗಳಿಗೆ ತೆರಿಗೆಯಲ್ಲಿ ರಿಯಾಯಿತಿ ನೀಡಿತ್ತು. ಅದರ ನಂತರ ಏಳು ದಶಕಗಳ ಕಾಲ ಸರ್ಕಾರವು ಈ ಶಾಲೆಗಳಿಂದ ತೆರಿಗೆ ಸ್ವೀಕರಿಸಲಿಲ್ಲ. ಡಿಸೆಂಬರ್ ೨೦೧೪ ರಲ್ಲಿ ಭಾಜಪ ಸರ್ಕಾರ ಬಂದಾಗ ಕೇಂದ್ರವು ಟಿ.ಡಿ.ಎಸ್ ವಿಧಿಸಿತು.
೨. ಸರಕಾರಿ ಅನುದಾನಿತ ಮಿಷನರಿ ಶಾಲೆಗಳಲ್ಲಿ ಕೆಲಸ ಮಾಡುವ ಕ್ರೈಸ್ತ ಪಾದ್ರಿ ಮತ್ತು ನನ್ ಗಳಿಗೆ ಸರಕಾರದ ತಿಜೋರಿಯಿಂದ ಅಂದರೆ ಜನರು ನೀಡಿರುವ ತೆರಿಗೆಯಿಂದ ಅನುದಾನವು ದೊರೆಯುತ್ತಿರುವಾಗಲೂ ಅದರ ಮೇಲೆ ತೆರಿಗೆ ವಿಧಿಸಲಾಗದಿರುವುದು ಬಹಳ ಆಘಾತಕಾರಿಯಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.
೩.೨೦೨೧ ರಲ್ಲಿ ಕೇರಳ ಉಚ್ಚ ನ್ಯಾಯಾಲಯವು ತೀರ್ಪು ನೀಡಿದಾಗ, ನನ್ ಮತ್ತು ಪಾದ್ರಿ ಗಳಿಗೆ ನೀಡುವ ವೇತನ ತೆರಿಗೆಗೆ ಯೋಗ್ಯವಾಗಿದೆ. ಸಂವಿಧಾನದಲ್ಲಿನ ಧಾರ್ಮಿಕ ಸ್ವಾತಂತ್ರ್ಯ ನೀಡುವ ಕಲಂ ೨೫ ರ ಇದು ಉಲ್ಲಂಘನೆಯಲ್ಲ ಎಂದೂ ಉಚ್ಚ ನ್ಯಾಯಾಲಯವು ನಮೂದಿಸಿತ್ತು. ಈ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿಲಾಗಿತ್ತು.
Priests and nuns in government-aided missionary schools will have to pay income tax on their salaries!
An important judgment delivered by the Supreme Court on December 2014, hence the BJP government has now decided to levy taxes!
But this means that during the Congress rule,… pic.twitter.com/LtpNOhGvZK
— Sanatan Prabhat (@SanatanPrabhat) November 15, 2024
ಸಂಪಾದಕೀಯ ನಿಲುವು
|