‘ತೈವಾನ ಇದು ಚೀನಾದ ಪ್ರದೇಶವಾಗಿದೆ, ಹಾಗಾಗಿ ಈ ವಿಷಯದಲ್ಲಿ ಯಾವುದೇ ಹಸ್ತಕ್ಷೇಪವನ್ನು ಸಹಿಸುವುದಿಲ್ಲ (ಅಂತೆ) !’ – ಚೀನಾದ ಎಚ್ಚರಿಕೆ

ಚೀನಾ ಈ ರೀತಿ ಬೆದರಿಸುವುದಾದರೆ ಸಂಪೂರ್ಣ ವಿಶ್ವ ಮತ್ತು ಸಂಯುಕ್ತ ರಾಷ್ಟ್ರಗಳು ಚೀನಾವನ್ನು ಬಹಿಷ್ಕರಿಸಬೇಕು !- ಸಂಪಾದಕರು 

ಚೀನಾದ ಅಧ್ಯಕ್ಷ ಶೀ-ಜಿನಪಿಂಗ್

ಬೀಜಿಂಗ (ಚೀನಾ) _ ತೈವಾನ್ ವಿಷಯದಲ್ಲಿ ಚೀನಾ ಇತರ ದೇಶಗಳಿಗೆ ಎಚ್ಚರಿಕೆ ನೀಡಿದೆ. ‘ತೈವಾನ್ ತನ್ನನ್ನು ಸ್ವತಂತ್ರ ದೇಶವೆಂದು ಹೇಳಿಕೊಂಡರೂ, ಅದು ಚೀನಾದ ಭೂಭಾಗವಾಗಿದೆ. ತೈವಾನ್ ನ ವಿಷಯದಲ್ಲಿ ಇತರ ದೇಶಗಳ ಹಸ್ತಕ್ಷೇಪವನ್ನು ಸಹಿಸಲಾಗುವುದಿಲ್ಲ. ತೈವಾನನ ಮೇಲೆ ನಿಯಂತ್ರಣವನ್ನಿಡಲು ಅವಶ್ಯಕತೆ ಬಿದ್ದರೆ ನಾವು ಸೈನ್ಯಬಲವನ್ನು ಬಳಸುತ್ತೇವೆ ಎಂದು ಚೀನಾದ ಅಧ್ಯಕ್ಷ ಜಿನಪಿಂಗ್ ಹೇಳಿದ್ದಾರೆ.

ಅಧ್ಯಕ್ಷ ಜಿನಪಿಂಗ ಇವರ ಈ ಹೇಳಿಕೆಯು ಅಮೇರಿಕಾಕ್ಕೆ ನೀಡಿದ ಬೆದರಿಕೆಯಾಗಿದೆ ಎಂದು ಹೇಳಲಾಗಿದೆ. ತೈವಾನ್ ವಿಷಯದಲ್ಲಿ ಕಳೆದ ವರ್ಷದಿಂದ ಉಭಯ ದೇಶಗಳಲ್ಲಿ ಉದ್ವಿಗ್ನತೆ ಉಂಟಾಗಿದೆ. ಕಳೆದ ವಾರದಲ್ಲಿ ತೈವಾನ ವಾಯು ಪ್ರದೇಶದಲ್ಲಿ ಚೀನಾದ 150 ಯುದ್ಧ ವಿಮಾನಗಳು ನುಸುಳಿವೆ. ಈ ಕುರಿತು ತೈವಾನ ಮತ್ತು ಅಮೇರಿಕಾ ಕಳವಳವನ್ನು ವ್ಯಕ್ತ ಪಡಿಸಿವೆ. ‘ಚೀನಾ ತೈವಾನ್ ಮೇಲೆ ದಾಳಿ ಮಾಡಿದರೆ ಅದರಿಂದ ಗಂಭೀರ ಪರಿಣಾಮವಾಗಲಿದೆ’, ಎಂದು ತೈವಾನ್ ಎಚ್ಚರಿಕೆ ನೀಡಿತ್ತು.