ಗುಜರಾತನಲ್ಲಿ ಎತ್ತರದ ಗಣೇಶ ಮೂರ್ತಿಗಳ ಮೇಲಿನ ನಿರ್ಬಂಧ ರದ್ದು !
ಗಣೇಶೋತ್ಸವಕ್ಕಾಗಿ ಎತ್ತರದ ಗಣೇಶ ಮೂರ್ತಿಗಳ ಮೇಲಿನ ನಿರ್ಬಂಧವನ್ನು ಗುಜರಾತ ಸರಕಾರ ತೆಗೆದುಹಾಕಿದೆ. ೨೦೨೧ ರಲ್ಲಿ ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಗಣೇಶ ಮೂರ್ತಿಗಳ ಎತ್ತರ ೪ ಅಡಿ ಮತ್ತು ಮನೆಯಲ್ಲಿಯ ಗಣೇಶ ಮೂರ್ತಿಗಳು ೨ ಅಡಿ ಮೀರಿರಬಾರದು ಎಂಬ ನಿರ್ಬಂಧಗಳನ್ನು ವಿಧಿಸಲಾಗಿತ್ತು.