ಚೀನಾದ ಸಂಚಾರವಾಣಿಯ ಆಮದುನಲ್ಲಿ ಶೇ. ೫೫ ರಷ್ಟು ಇಳಿಕೆ !

‘ಆತ್ಮನಿರ್ಭರ ಭಾರತ’ ದಿಕ್ಕಿನತ್ತ ಭಾರತೀಯರ ಮುನ್ನಡೆ !

ನವ ದೆಹಲಿ – ಪ್ರಧಾನಿ ನರೇಂದ್ರ ಮೋದಿ ಅವರ ‘ಆತ್ಮ ನಿರ್ಭರ ಭಾರತ’ ಈ ಧೋರಣೆ ಘೋಷಣೆ ಮಾಡಿದ ನಂತರ ಭಾರತ ಸ್ವಯಂ ಪೂರ್ಣ ಆಗುವ ದಿಕ್ಕಿಗೆ ಸಾಗುತ್ತಿದೆ. ೨೦೨೦-೨೧ ರಲ್ಲಿ ಭಾರತ ಒಟ್ಟು ಆಮದು ಮಾಡಿರುವ ವಸ್ತು ಮತ್ತು ಸೇವೆ ಇದರಲ್ಲಿ ಚೀನಾದ ಸಹಭಾಗವು ಶೇ. ೧೬.೫ ಇತ್ತು. ೨೦೨೧-೨೨ ಈ ಹಣಕಾಸು ವರ್ಷದಲ್ಲಿ ಮಾತ್ರ ಈ ಪ್ರಮಾಣ ಶೇ. ೧೫.೪ ಕ್ಕೆ ಬಂದಿದೆ. ಚೀನಾದಿಂದ ಆಮದು ಮಾಡಿರುವ ಪ್ರಮಾಣ ಕೆಲವೇ ಅಂಶ ಕಡಿಮೆ ಆಗಿರುವ ಹಾಗೆ ಕಾಣುತ್ತಿದ್ದರೂ ಚೀನಾ ಸಂಚಾರವಾಣಿಯ ಆಮದಿನಲ್ಲಿ ಮಾತ್ರ ಶೇ. ೫೫ ರಷ್ಟ ಇಳಿಕೆಯಾಗಿದೆ. ೨೦೨೦-೨೧ ಈ ಹಣಕಾಸು ವರ್ಷದಲ್ಲಿ ೧.೪ ಅಬ್ಜ ಡಾಲರಿನ ಚೀನಾ ಸಂಚಾರವಾಣಿ ಆಮದು ಮಾಡಲಾಗಿತ್ತು. ೨೦೨೧-೨೨ ರಲ್ಲಿ ಮಾತ್ರ ಇದೇ ಪ್ರಮಾಣ ಕೇವಲ ೬೨೫ ಕೋಟಿ ಡಾಲರಿಗೆ ತಲುಪಿದೆ.