ಮಧ್ಯಪ್ರದೇಶದ ರಿವಾದಲ್ಲಿ ಗೋ-ಕಳ್ಳಸಾಗಣೆ: ಇಬ್ಬರು ಮುಸಲ್ಮಾನ ಮಹಿಳೆಯರ ಸೆರೆ : Rewa Beef Smuggling Arrests

ಸಿಕ್ಕಿಬೀಳುವ ಭಯದಿಂದ ಗೋಮಾಂಸವನ್ನು ಕಾಲುವೆಗೆ ಎಸೆದು, ಗ್ರಾಮಸ್ಥರ ಮೇಲೆ ಕಲ್ಲು ತೂರಾಟ

ದನಗಳ ಕಳ್ಳಸಾಗಣೆಯಲ್ಲಿ ಇಬ್ಬರು ಮುಸ್ಲಿಂ ಸಹೋದರಿಯರು ಭಾಗಿ

ರಿವಾ (ಮಧ್ಯಪ್ರದೇಶ) – ಮುಸ್ಕಾನ್ ಖಾನ್ ಮತ್ತು ರುಬಿಯಾ ಖಾನ್ ಎಂಬ ಇಬ್ಬರು ಮುಸ್ಲಿಂ ಸಹೋದರಿಯರು ಗೋಮಾಂಸ ಕಳ್ಳಸಾಗಣೆ ಮಾಡುತ್ತಿದ್ದಾಗ ಲೋಹಿ ಗ್ರಾಮಸ್ಥರು ಅವರನ್ನು ರೆಡ್ ಹ್ಯಾಂಡ್ ಹಿಡಿದಿದ್ದಾರೆ. ಗ್ರಾಮಸ್ಥರು ತಮ್ಮನ್ನು ಸುತ್ತುವರೆದಿರುವುದನ್ನು ಗಮನಿಸಿದ ಅವರು ಗೋಮಾಂಸ ತುಂಬಿದ್ದ ಚೀಲವನ್ನು ಇಲ್ಲಿನ ಕಾಲುವೆಗೆ ಎಸೆದರು. ಅಲ್ಲದೆ ಅವರು ಗ್ರಾಮಸ್ಥರ ಮೇಲೆಯೂ ಕಲ್ಲು ತೂರಾಟ ನಡೆಸಿದರು. ಇದರಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರಾಗಿರುವ ರೈತ ಆನಂದ್ ಸಿಂಗ್ ಬಘೇಲ್ ಅವರ ತಲೆಗೆ ಗಂಭೀರ ಗಾಯಗಳಾಗಿವೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಪೊಲೀಸರು ಗ್ರಾಮಸ್ಥರ ಸಹಾಯದಿಂದ ಕಾಲುವೆಯಿಂದ ಗೋಮಾಂಸವನ್ನು ಹೊರತೆಗೆದು ತಪಾಸಣೆಗಾಗಿ ಪ್ರಯೋಗಾಲಯಕ್ಕೆ (ಲ್ಯಾಬ್) ಕಳುಹಿಸಿದ್ದಾರೆ. ‘ವಶಪಡಿಸಿಕೊಂಡ ಮಾಂಸದ ವರದಿ ಬಂದ ನಂತರವಷ್ಟೇ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.

ಲೋಹಿ ಗ್ರಾಮದ ಜನರಿಗೆ ಕಳೆದ ಕೆಲವು ದಿನಗಳಿಂದ ಈ ಇಬ್ಬರು ಸಹೋದರಿಯರ ಮೇಲೆ ಗೋ-ಕಳ್ಳಸಾಗಣೆಯ ಶಂಕೆಯಿತ್ತು. ಇದೇ ಕಾರಣಕ್ಕೆ ಗ್ರಾಮಸ್ಥರು ಈ ಸಹೋದರಿಯರನ್ನು ಬೆನ್ನಟ್ಟಿ ಅವರನ್ನು ತಡೆಯಲು ಯತ್ನಿಸಿದರು; ಆದರೆ ಇಬ್ಬರು ಸಹೋದರಿಯರು ನಿಲ್ಲದೆ ತಮ್ಮ ದ್ವಿಚಕ್ರ ವಾಹನವನ್ನು ವೇಗವಾಗಿ ಚಲಾಯಿಸಿ ಓಡಿಸಲು ಯತ್ನಿಸಿದ್ದರು.

ಸಂಪಾದಕೀಯ ನಿಲುವು

ಗೋಮಾಂಸ ಕಳ್ಳಸಾಗಣೆಯಲ್ಲಿ ಈಗ ಮುಸ್ಲಿಂ ಮಹಿಳೆಯರೂ ಹಿಂದೆ ಬಿದ್ದಿಲ್ಲ ಎಂಬುದನ್ನು ಈ ಘಟನೆ ತೋರಿಸುತ್ತದೆ!