ಜರ್ಮನಿಯಲ್ಲೂ ಯುಕೆ ಮಾದರಿಯ ‘ಗ್ರೂಮಿಂಗ್ ಗ್ಯಾಂಗ್’ !

  • ಅಪ್ರಾಪ್ತ ಹುಡುಗಿಯರನ್ನು ಮಾದಕ ಪದಾರ್ಥಗಳ ಆಮಿಷವೊಡ್ಡಿ ಸಿಲುಕಿಸಿ ಲೈಂಗಿಕ ಕಿರುಕುಳ

  • ಪಾಕಿಸ್ತಾನ ಮತ್ತು ಸಿರಿಯಾ ಮೂಲದ ನಾಗರಿಕರ ಬಂಧನ

​(ಗ್ರೂಮಿಂಗ್ ಗ್ಯಾಂಗ್ ಎಂದರೆ ಸಣ್ಣ ಹುಡುಗಿಯರನ್ನು ಅಥವಾ ಯುವತಿಯರನ್ನು ಜಾಲದಲ್ಲಿ ಸಿಲುಕಿಸಿ ಅವರ ಲೈಂಗಿಕ ಕಿರುಕುಳ ಮಾಡುವ ಗ್ಯಾಂಗ್)

ಬರ್ಲಿನ್ (ಜರ್ಮನಿ) – ಜರ್ಮನಿಯ ನೂರ್ನಬರ್ಗ್‌ ನಲ್ಲಿ ಮಹಿಳೆಯರು ಮತ್ತು ಹುಡುಗಿಯರ ಲೈಂಗಿಕ ಕಿರುಕುಳ ಹಾಗೂ ಅವರನ್ನು ಮಾದಕ ಪದಾರ್ಥಗಳ ಜಾಲದಲ್ಲಿ ಸಿಲುಕಿಸಿದ ಆರೋಪದ ಮೇಲೆ ಇಬ್ಬರು ಪಾಕಿಸ್ತಾನಿ ನಾಗರಿಕರನ್ನು ಜರ್ಮನಿ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು 6 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ನಂತರ ಬಂಧಿಸಲಾಗಿದೆ. ಇವರಲ್ಲಿ 2 ಪಾಕಿಸ್ತಾನಿ ಮತ್ತು ಸಿರಿಯಾದ 4 ನಾಗರಿಕರು ಸೇರಿದ್ದಾರೆ. ಯುನೈಟೆಡ್ ಕಿಂಗ್‌ಡಮ್‌ ನಲ್ಲಿ ಗ್ರೂಮಿಂಗ್ ಗ್ಯಾಂಗ್ ಸಾವಿರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿತ್ತು. ಈ ಗ್ಯಾಂಗ್‌ನಲ್ಲಿ ಪಾಕಿಸ್ತಾನಿ ಮೂಲದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು.

1. ಈ ಜನರು ನೂರ್ನ ಬರ್ಗ್ ರೈಲ್ವೆ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಗಿಯರು ಮತ್ತು ಮಹಿಳೆಯರ ನಂಬಿಕೆಯನ್ನು ಗಳಿಸುತ್ತಿದ್ದರು ಮತ್ತು ನಂತರ ಅವರನ್ನು ಮಾದಕ ಪದಾರ್ಥಗಳ ವ್ಯವಹಾರಕ್ಕೆ ತಳ್ಳುತ್ತಿದ್ದರು. ಈ ಜನರು ಅವರ ಲೈಂಗಿಕ ಕಿರುಕುಳವನ್ನೂ ಮಾಡುತ್ತಿದ್ದರು ಮತ್ತು ನಂತರ ಮಾದಕ ಪದಾರ್ಥಗಳ ವ್ಯಸನವನ್ನು ಹಚ್ಚಿಸಿ ಅವರಿಂದಲೇ ಅದರ ಕಳ್ಳಸಾಗಣೆಯನ್ನು ಮಾಡಿಸುತ್ತಿದ್ದರು. ನೂರೆಂಬರ್ಗ್ ಸೆಂಟ್ರಲ್ ಸ್ಟೇಷನ್ ಸುತ್ತಮುತ್ತಲಿನ ‘ಗ್ರೂಮಿಂಗ್ ಗ್ಯಾಂಗ್’ ಅನ್ನು ಮಟ್ಟಹಾಕಲು ಪೊಲೀಸರು ಅವರ ಹಿನ್ನೆಲೆಯನ್ನು ತನಿಖೆ ಮಾಡುವಲ್ಲಿ ನಿರತರಾಗಿದ್ದಾರೆ. ಇದಕ್ಕಾಗಿ ಮೇ ತಿಂಗಳಲ್ಲಿ ತನಿಖಾ ಆಯೋಗವನ್ನು ಸ್ಥಾಪಿಸಲಾಗಿತ್ತು.

​2. ಮೇ 2026 ರಲ್ಲಿ ಗೋಸ್ಟೆನ್‌ಹೋಫ್ ಜಿಲ್ಲೆಯ ಅಪಾರ್ಟ್‌ಮೆಂಟ್‌ ಒಂದರಿಂದ ಪೊಲೀಸರು ಇಂತಹದೇ ಒಂದು ಗ್ರೂಮಿಂಗ್ ಗ್ಯಾಂಗ್‌ನ ಇಬ್ಬರು ಆರೋಪಿಗಳನ್ನು ಬಂಧಿಸಿದರು. ಇವರಿಬ್ಬರೂ ಸಿರಿಯಾ ನಾಗರಿಕರಾಗಿದ್ದಾರೆ. ಇವರ ವಯಸ್ಸು ಕೇವಲ 26 ವರ್ಷ ಮತ್ತು 24 ವರ್ಷ. 26 ವರ್ಷದ ಈ ಗ್ರೂಮಿಂಗ್ ಗ್ಯಾಂಗ್ ಸದಸ್ಯ ಅಪ್ರಾಪ್ತ ಹುಡುಗಿಯರಿಗೆ ಮಾದಕ ಪದಾರ್ಥಗಳನ್ನು ಪೂರೈಸುತ್ತಿದ್ದನು. ಸಿರಿಯಾದ 24 ವರ್ಷದ ನಾಗರಿಕನು ಅಪ್ರಾಪ್ತರ ಮೇಲಿನ ಲೈಂಗಿಕ ಕಿರುಕುಳಯ ಪ್ರಕರಣದಲ್ಲಿ ದೋಷಿ ಎಂದು ಕಂಡುಬಂದಿದ್ದಾನೆ.

ಪಾಕಿಸ್ತಾನ, ಸಿರಿಯಾ, ಗಾಜಾ, ಸರ್ಬಿಯಾ ನಾಗರಿಕರ ಮೇಲೆ ನಿಗಾ

ಕಳೆದ ಕೆಲವು ವರ್ಷಗಳಲ್ಲಿ ಸಿರಿಯಾ, ಪಾಕಿಸ್ತಾನ, ಸರ್ಬಿಯಾ ಮತ್ತು ಗಾಜಾ ಪಟ್ಟಿಯಿಂದ ಬಂದ ನಿರಾಶ್ರಿತರ ಮೇಲೆ ತನಿಖಾ ಆಯೋಗವು ಗಮನ ಕೇಂದ್ರೀಕರಿಸಿದೆ. ಸಂಶಯಿತರು 18 ರಿಂದ 35 ವರ್ಷ ವಯಸ್ಸಿನವರಾಗಿದ್ದಾರೆ. ದೇಶದಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು ಹದಿಹರೆಯದವರ ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರ ಪ್ರಕರಣಗಳ ಸಂಖ್ಯೆ ವೇಗವಾಗಿ ಹೆಚ್ಚಾಗಿದೆ. ‘ಸಂತ್ರಸ್ತರ ಸಂಖ್ಯೆ ಈ ಹಿಂದಿನ ಅಂದಾಜಿಗಿಂತ ಹೆಚ್ಚಿರಬಹುದು’ ಎಂಬುದು ತನಿಖಾಧಿಕಾರಿಗಳ ಅಭಿಪ್ರಾಯವಾಗಿದೆ. ಸದ್ಯಕ್ಕೆ ಸರಕಾರಿ ಅಧಿಕಾರಿಗಳು ಈ ಗ್ಯಾಂಗ್‌ ಗೆ ಬಲಿಯಾದ ಹುಡುಗಿಯರ ಅಥವಾ ಮಹಿಳೆಯರ ಅಂತಿಮ ಅಧಿಕೃತ ಸಂಖ್ಯೆಯನ್ನು ಘೋಷಿಸಿಲ್ಲ. ಯುರೋಪ್‌ನ ಅನೇಕ ದೇಶಗಳಲ್ಲಿ, ವಿಶೇಷವಾಗಿ ಜರ್ಮನಿ, ಬ್ರಿಟನ್, ಫ್ರಾನ್ಸ್ ಮತ್ತು ಬೆಲ್ಜಿಯಂನಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಸಂಘಟಿತ ಗ್ರೂಮಿಂಗ್ ಜಾಲಗಳು ಮುಂಚೂಣಿಗೆ ಬಂದಿವೆ. ಈ ಪ್ರಕರಣಗಳಲ್ಲಿ ಸಾಮಾನ್ಯ ಮಾದರಿ ಏನೆಂದರೆ, ಈ ಜನರು ಅಸಹಾಯಕ, ಬಡ ಮತ್ತು ಅಸುರಕ್ಷಿತ ಅಪ್ರಾಪ್ತ ಹುಡುಗಿಯರನ್ನು ಮೊದಲು ನಂಬಿಕೆಗೆ ತೆಗೆದುಕೊಳ್ಳುತ್ತಾರೆ, ಅವರನ್ನು ಪ್ರೀತಿಯ ಜಾಲದಲ್ಲಿ ಸಿಲುಕಿಸುತ್ತಾರೆ ಮತ್ತು ನಂತರ ಮಾದಕ ಪದಾರ್ಥ, ಬೆದರಿಕೆಗಳು ಅಥವಾ ಮಾನಸಿಕ ಒತ್ತಡದ ಮೂಲಕ ಅವರ ಕಿರುಕುಳ ಮಾಡುತ್ತಾರೆ.