ಹೆಚ್ಚಿನ ಮುಸಲ್ಮಾನ ವ್ಯಾಪಾರಿಗಳಿಗೆ ಶೇ. ೯೦ ಆರ್ಥಿಕ ನಷ್ಟ !

ಅಜಮೇರನ ಗೌಹರ ಚಿಸ್ತಿಯು ನೂಪುರ ಶರ್ಮಾ ಇವರ ಶಿರಶ್ಚೇಧ ಮಾಡುವ ಬೆದರಿಕೆ ನೀಡಿದ ಪರಿಣಾಮ !

ಬಕ್ರಿ ಈದ ದಿನದಂದು ಹಿಂದೂಗಳು ಅಜಮೇರ ದರ್ಗಾ ನಿರ್ಲಕ್ಷಿಸಿದರು !

(ದರ್ಗಾ ಎಂದರೆ ಮುಸಲ್ಮಾನ ಸಂತರ ಸಮಾಧಿ)

(ಸೌಜನ್ಯ : TIMES NOW)

ಅಜಮೇರ (ರಾಜಸ್ಥಾನ) – ಯಾವಾಗಲೂ ಇಲ್ಲಿಯ ಕ್ವಾಜಾ ಮೋಯಿದ್ದಿನ ಚೀಶ್ತಿ ಇವರ ಪ್ರಸಿದ್ಧ ದರ್ಗಾ(‘ಅಜ್ಮೆರ-ಶರೀಫ್’)ಗೆ ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡುವ ಹಿಂದೂಗಳು ಈಗ ಅಲ್ಲಿ ಯಾವುದೇ ಔಷಧಿಗೂ ಅಲ್ಲಿ ಹೋಗದೆ ಇರುವ ಮಾಹಿತಿ ಬೆಳಕಿಗೆ ಬಂದಿದೆ. ನಗರದ ವಿಶ್ರಾಂತಿ ಗೃಹದ ಗಳಿಕೆ ಶೇ. ೯೦ ಕಡಿಮೆಯಾಗಿದ್ದೂ ಉಪಹಾರ ಗೃಹಗಳಿಗೆ ಕೋಟಿಗಟ್ಟಲೆ ನಷ್ಟ ಆಗಿರುವುದು ಕಂಡು ಬಂದಿದೆ. ಜುಲೈ ೮ ಶುಕ್ರವಾರರಂದು ನಮಾಜ್‌ಗೆ ಹಾಗೂ ಜುಲೈ ೧೦ ರಂದು ನಡೆದಿರುವ ಬಕ್ರಿ ಈದ್‌ಗೆ ಬಹಳ ಕಡಿಮೆ ಪ್ರಮಾಣದಲ್ಲಿ ಪ್ರತಿಕ್ರಿಯೆ ದೊರೆತಿದೆ.

ನೂಪುರ ಶರ್ಮಾ ಇವರ ವಿರೋಧದಲ್ಲಿ ಇಲ್ಲಿಯ ದರ್ಗಾದಲ್ಲಿ ಕನಿಷ್ಟ ೩ ಖಾದಿಮ(ಸೇವಕರು) ಪ್ರಚೋದನಕಾರಿ ಹೇಳಿಕೆ ನೀಡಿದ್ದರಿಂದ ಹಾಗೂ ಉದಯಪೂರ ಹತ್ಯೆಯ ಆರೋಪಿಯೂ ಕೂಡ ದರ್ಗಾದ ಸೇವಕರ ಜೊತೆ ಸಂಬಂಧ ಇರುವುದು ಬೆಳಕಿಗೆ ಬಂದ ನಂತರ ಹಿಂದೂಗಳು ಅಜ್ಮೆರದ ದರ್ಗಾ ನಿರ್ಲಕ್ಷಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಖಾದಿಮ ಏನುದ್ದೀನ್ ಚಿಶ್ತಿಯು, ನಗರದ ಅರ್ಥ ವ್ಯವಸ್ಥೆ ಇದು ಪ್ರತಿದಿನ ಅಜ್ಮೆರಗೆ ಭೇಟಿ ನೀಡುವ ೧೫-೨೦ ಸಾವಿರ ಜನರ ಮೇಲೆ ಅವಲಂಬಿಸಿರುತ್ತದೆ ಎಂದು ಹೇಳಿದರು. ಇನ್ನೊಂದು ಅಂಗಡಿಯವನ ಪ್ರಕಾರ ಅಜ್ಮೆರದಲ್ಲಿ ವ್ಯಾಪಾರಿಗಳಿಗೆ ಕನಿಷ್ಠ ೫೦ ಕೋಟಿ ರೂಪಾಯ ಆರ್ಥಿಕ ನಷ್ಟ ಅನುಭವಿಸಬೇಕಾಗಿದೆ. ಈ ಮಾಹಿತಿ ‘ಟೈಮ್ಸ್ ಆಫ್ ಇಂಡಿಯಾ’ದ ಆಂಗ್ಲ ವಾರ್ತಾಪತ್ರಿಕೆಯಲ್ಲಿ ನೀಡಿದೆ.

ಹಿಂದೂಗಳ ವಿರೋಧದಲ್ಲಿ ಹೇಳಿಕೆಯಿಂದ ಜನರು ನಿರ್ಲಕ್ಷ ಮಾಡಿದ್ದಾರೆ ! – ‘ಜನ್ನತ್ ಗ್ರೂಪ್ ಆಫ್ ಹೋಟೆಲ್ಸ್’ನ ಮಾಲಿಕ

ದರ್ಗಾ ಕ್ಷೇತ್ರದಲ್ಲಿ ‘ಜನ್ನತ್ ಗ್ರೂಪ ಆಫ್ ಹೋಟೆಲ್ಸ್’ನ ಮಾಲೀಕ ರಿಯಾಜ್ ಖಾನ್ ಇವರು ನೀಡಿರುವ ಮಾಹಿತಿಯ ಪ್ರಕಾರ ಚಿಶ್ತಿಯವರಿಂದ ನೀಡಲಾಗಿರುವ ಅಯೋಗ್ಯ ಹೇಳಿಕೆಯಿಂದ ಇಲ್ಲಿಯ ಜನಜಂಗುಳಿ ಕಡಿಮೆ ಆಗಿದೆ. ಹಾಗೆ ನೋಡಿದರೆ ಉದಯಪೂರದ ಹತ್ಯಾಕಾಂಡದ ನಂತರ ಜನರು ಹೋಟೆಲ್‌ನಲ್ಲಿ ಕಾಯ್ದಿರಿಸುವಿಕೆಯ ಪ್ರಮಾಣ ಕಡಿಮೆಯಾಗಿದೆ. ‘ಸೋಹನ್ ಹಲ್ವಾ’ ಈ ಸಿಹಿ ತಿನಿಸಿಗಾಗಿ ಪ್ರಸಿದ್ಧವಾಗಿರುವ ‘ಖ್ವಾಜಾ ಗರಿಬ ನವಾಜ್ ಸ್ವೀಟ್ಸ್’ನ ಮಾಲಿಕ ಶದಭ ಸಿದ್ಧಕಿ ಇವರ ಗಳಿಕೆ ಶೇ. ೯೦ ರಷ್ಟು ಕಡಿಮೆಯಾಗಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

‘ಹಿಂದೂ ಸಂಘಟಿತರಾದರೆ ಅವರು ಏನು ಮಾಡಬಹುದು ?’, ಇದರ ಉದಾಹರಣೆ ! ಇದರಿಂದ ‘ಹಿಂದುಗಳ ಮೇಲೆ ಆಘಾತ ಮಾಡುವವರಿಗೆ ಈ ರೀತಿ ಪಾಠ ಕಲಿಸುವುದು ಅವಶ್ಯಕತೆಯಾಗಿದೆ’, ಎಂದು ಯಾರಾದರು ಹೇಳಿದರೆ ತಪ್ಪಾಗಲಾರದು ?