ರಾಜ್ಯದಲ್ಲಿ ಅಕ್ರಮ ವಲಸಿಗರ ಸಂಖ್ಯೆ 13 ಸಾವಿರಕ್ಕೂ ಹೆಚ್ಚು! – ರಾಜ್ಯ ಗೃಹ ಇಲಾಖೆಯ ವರದಿಯ ಮಾಹಿತಿ

ಬೆಂಗಳೂರು/ಮೈಸೂರು – ರಾಜ್ಯ ಗೃಹ ಇಲಾಖೆಯು ವಲಸಿಗರ ಪಟ್ಟಿಯನ್ನು ಸಿದ್ಧಪಡಿಸಿದೆ. ಅದರಂತೆ ರಾಜ್ಯದಲ್ಲಿ ಒಟ್ಟು 13,675 ವಲಸಿಗರು ಇರುವುದು ಸರಕಾರಕ್ಕೆ ಕಂಡುಬಂದಿದೆ. ರಾಜಧಾನಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಅಂದರೆ 10,650 ವಲಸಿಗರು ವಾಸಿಸುತ್ತಿದ್ದಾರೆ. ತದನಂತರ ಮೈಸೂರು (810), ಬೆಳಗಾವಿ (458), ದಕ್ಷಿಣ ಕನ್ನಡ (268) ಮತ್ತು ರಾಮನಗರ (191) ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಲಸಿಗರು ಇರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೆ ಇತರ ಜಿಲ್ಲೆಗಳಲ್ಲೂ ವಲಸಿಗರು ವಾಸಿಸುತ್ತಿದ್ದಾರೆ.

ಮೈಸೂರಿಗೆ ಬಾಂಗ್ಲಾದೇಶಿ ವಲಸಿಗರು ಬರುತ್ತಿದ್ದಾರೆ ಎಂಬ ವದಂತಿ ಹರಡಿದ ನಂತರ ಮೈಸೂರು ರೈಲು ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಬಂಗಾಳದಿಂದ ಬಂದಿದ್ದ ಹೌರಾ ಎಕ್ಸ್‌ಪ್ರೆಸ್‌ನಲ್ಲಿ ಪರಿಶೀಲನೆ ನಡೆಸಲಾಯಿತು. ಈ ಹಿಂದೆ ಬಂಗಾಳದಿಂದ ಬಂದ ಜನರನ್ನು ಬಾಂಗ್ಲಾದೇಶಿ ವಲಸಿಗರು ಎಂದು ಆರೋಪಿಸಿದ್ದರಿಂದ ದೊಡ್ಡ ಗಲಾಟೆಯಾಗಿತ್ತು. ಆದಾಗ್ಯೂ, ದಾಖಲೆಗಳ ಪರಿಶೀಲನೆಯ ಸಮಯದಲ್ಲಿ ಅವರಲ್ಲಿ ಯಾರೊಬ್ಬರೂ ಬಾಂಗ್ಲಾದೇಶಿ ವಲಸಿಗರು ಅಲ್ಲ ಎಂಬುದು ಸ್ಪಷ್ಟವಾಯಿತು. ಆದ್ದರಿಂದ, ವದಂತಿಗಳಿಗೆ ಕಡಿವಾಣ ಹಾಕಲು ಈ ಬಾರಿ ರೈಲ್ವೆ ಪೊಲೀಸರು ಸ್ವಯಂಪ್ರೇರಿತರಾಗಿ ಪರಿಶೀಲನೆ ನಡೆಸುವ ಕ್ರಮವನ್ನು ಕೈಗೊಂಡಿದ್ದಾರೆ.

​ಯಾವ ಜಿಲ್ಲೆಯಲ್ಲಿ ಎಷ್ಟು ಅಕ್ರಮ ವಲಸಿಗರು?

೧. ಬಳ್ಳಾರಿ : ೫೩

೨. ಚಿಕ್ಕಬಳ್ಳಾಪುರ : ೩೮

೩. ಹುಬ್ಬಳ್ಳಿ/ಧಾರವಾಡ : ೩೫

೪. ಮಂಡ್ಯ : ೩೭

೫. ದಾವಣಗೆರೆ : ೨೦

೬. ರಾಯಚೂರು : ೧೯

೭. ಕೋಲಾರ : ೧೩

೮. ಕೊಡಗು : ೧೦

೯. ಕೊಪ್ಪಳ : ೧೦

೧೦. ಕಲಬುರಗಿ : ೯

೧೧. ಚಿತ್ರದುರ್ಗ : ೮

೧೨. ಹಾಸನ : ೫

೧೩. ಚಾಮರಾಜನಗರ : ೩

ಸಂಪಾದಕೀಯ ನಿಲುವು

ರಾಜ್ಯದಲ್ಲಿ ಮುಸ್ಲಿಮರ ಓಲೈಕೆ ಮಾಡುವ ಕಾಂಗ್ರೆಸ್ ಸರಕಾರ ಇರುವುದರಿಂದ ವಲಸಿಗರನ್ನು ಹೊರಹಾಕುವ ಸಾಧ್ಯತೆ ಕಡಿಮೆ!