
ನವದೆಹಲಿ – ಕೇಂದ್ರ ಸರಕಾರವು 15 ವಿದೇಶಿ ವಿಶ್ವವಿದ್ಯಾಲಯಗಳಿಗೆ ಭಾರತದಲ್ಲಿ ತಮ್ಮ ಶಾಖೆಗಳನ್ನು (ಕ್ಯಾಂಪಸ್) ಪ್ರಾರಂಭಿಸಲು ಅನುಮತಿ ನೀಡಿದೆ. ಈ ವಿಶ್ವವಿದ್ಯಾಲಯಗಳಲ್ಲಿ ಯೂನಿವರ್ಸಿಟಿ ಆಫ್ ಅಬರ್ಡೀನ್, ಬ್ರಿಸ್ಟಲ್, ಯಾರ್ಕ್, ಇಲಿನಾಯ್ಸ್ ಟೆಕ್, ಲಿವರ್‌ಪೂಲ್ ಮತ್ತು ವಿಕ್ಟೋರಿಯಾದಂತಹ ಪ್ರಸಿದ್ಧ ವಿಶ್ವವಿದ್ಯಾಲಯಗಳು ಸೇರಿವೆ. ಮುಂಬಯಿ, ದೆಹಲಿ ಮತ್ತು ಬೆಂಗಳೂರಿನಲ್ಲಿ ಈ ವಿಶ್ವವಿದ್ಯಾಲಯಗಳ ಶಾಖೆಗಳು ಪ್ರಾರಂಭವಾಗಲಿವೆ. ಸರಕಾರವು ಈ ವಿಶ್ವವಿದ್ಯಾಲಯಗಳಿಗೆ ಆಶಯ ಪತ್ರವನ್ನು (ಲೆಟರ್ ಆಫ್ ಇಂಟೆಂಟ್) ನೀಡಿದೆ. ಹಾಗಾಗಿ, ಇವುಗಳಲ್ಲಿ ಕೆಲವು ವಿಶ್ವವಿದ್ಯಾಲಯಗಳ ಮೊದಲ ಶೈಕ್ಷಣಿಕ ಸೆಷನ್ ಆಗಸ್ಟ್‌ನಿಂದ ಆರಂಭವಾಗಲಿದೆ. ಈ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿದೇಶಿ ವಿಶ್ವವಿದ್ಯಾಲಯಗಳ ಪದವಿಯೇ ಸಿಗಲಿದೆ. ಇದರಿಂದಾಗಿ ಈಗ ವಿದೇಶಿ ವಿಶ್ವವಿದ್ಯಾಲಯದ ಪದವಿ ಪಡೆಯಲು ವಿದೇಶಕ್ಕೆ ಹೋಗುವ ಅಗತ್ಯವಿರುವುದಿಲ್ಲ.
ಆರಂಭದಲ್ಲಿ ಈ ವಿಶ್ವವಿದ್ಯಾಲಯಗಳಲ್ಲಿ 200 ರಿಂದ 250 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುವುದು. ಮುಂದಿನ 5 ವರ್ಷಗಳಲ್ಲಿ ಈ ಪ್ರಮಾಣವನ್ನು ವರ್ಷಕ್ಕೆ 1,000 ದಿಂದ 1,200 ವಿದ್ಯಾರ್ಥಿಗಳಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಮೊದಲ ಹಂತದಲ್ಲಿ ಕೃತಕ ಬುದ್ಧಿಮತ್ತೆ (Artificial Intelligence), ಕಂಪ್ಯೂಟರ್ ಸೈನ್ಸ್ ಮತ್ತು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಹಾಗೂ ಗಣಿತ ವಿಷಯಗಳ ಮೇಲೆ ಹೆಚ್ಚಿನ ಒತ್ತು ನೀಡಲಾಗುವುದು.
ಬಾಂಗ್ಲಾದೇಶದಲ್ಲಿ ಮತ್ತೆ ಹಿಂದೂ ದೇವತೆಗಳ ಮೂರ್ತಿಗಳ ಧ್ವಂಸ!
ಪಾಕಿಸ್ತಾನ: ಲಷ್ಕರ್-ಎ-ತೊಯ್ಬಾದ ಮೂವರು ಉಗ್ರರ ಸಂಶಯಾಸ್ಪದ ಸಾವು
ಬಾಂಗ್ಲಾದೇಶದಲ್ಲಿ ಮತಾಂಧ ಮುಸಲ್ಮಾನರಿಂದ ಒಂದೇ ಹಿಂದೂ ಕುಟುಂಬದ ನಾಲ್ವರ ಹತ್ಯೆ
…ಇರಾನ್ನ ಅಸ್ತಿತ್ವವನ್ನೇ ಅಳಿಸಿಹಾಕುತ್ತೇವೆ!
ಭಾರತ-ಬಾಂಗ್ಲಾದೇಶ ಗಡಿಯಲ್ಲಿ ನುಸುಳುಕೋರರನ್ನು ಹಿಮ್ಮೆಟ್ಟಿಸುವಾಗ ಬಾಂಗ್ಲಾದೇಶದಿಂದ ಭಾರಿ ವಿರೋಧ
ಫ್ರಾನ್ಸ್ನಲ್ಲಿ ತೀವ್ರ ಬಿಸಿಲಿನಿಂದಾಗಿ ಎಸಿ(ಎರ್ ಕಂಡಿಶನ್)ಗಳನ್ನು (ಎಸಿ, ಏರ್ ಕಂಡೀಶನರ್) ಖರೀದಿಸಲು ಅಂಗಡಿಗಳಲ್ಲಿ ಭಾರಿ ಜನಸಂದಣಿ