ಹಿಂದೂ ವಿಧಿಜ್ಞ ಪರಿಷತ್ತಿನ ದೂರಿನ ನಂತರ ಆಡಳಿತ ಮಂಡಳಿಯಿಂದ ಕ್ರಮ
21 ದಿನಗಳಲ್ಲಿ ಹಣ ಪಾವತಿಸದಿದ್ದರೆ ಕಾನೂನು ಕ್ರಮದ ಎಚ್ಚರಿಕೆ

ಮುಂಬಯಿ – ಇಲ್ಲಿನ ಫೋರ್ಟ್ ಪ್ರದೇಶದಲ್ಲಿರುವ ಸರಕಾರಿ ಭೂಮಿಯನ್ನು ‘ದ ಚರ್ಚ್ ಆಫ್ ಸ್ಕಾಟ್‌ಲ್ಯಾಂಡ್ ಟ್ರಸ್ಟ್’ ಕಳೆದ 33 ವರ್ಷಗಳಿಂದ ಅನಧಿಕೃತವಾಗಿ ತನ್ನ ವಶದಲ್ಲಿ ಇಟ್ಟುಕೊಂಡಿದೆ. ಈ ಪ್ರಕರಣದಲ್ಲಿ ಮುಂಬಯಿ ನಗರ ಜಿಲ್ಲಾಧಿಕಾರಿ ಕಚೇರಿಯು ಚರ್ಚ್‌ಗೆ ಬಾಕಿ ಹಣ ವಸೂಲಾತಿಯ ಅಂತಿಮ ನೋಟಿಸ್ ಜಾರಿಗೊಳಿಸಿದೆ.
ಭೂಪಟದ ಕ್ರಮಾಂಕ 1405 ರ 1137.32 ಚದರ ಮೀಟರ್ ಭೂಮಿಯನ್ನು ಅನಧಿಕೃತವಾಗಿ ಬಳಸಿದ ಕಾರಣಕ್ಕಾಗಿ ‘ದ ಚರ್ಚ್ ಆಫ್ ಸ್ಕಾಟ್‌ಲ್ಯಾಂಡ್ ಟ್ರಸ್ಟ್’ಗೆ 31 ಲಕ್ಷ 74 ಸಾವಿರ 895 ರೂಪಾಯಿಗಳ ಬಾಕಿ ವಸೂಲಾತಿಯ ಅಂತಿಮ ನೋಟಿಸ್ ಜಾರಿಗೊಳಿಸಲಾಗಿದೆ. ಮುಂದಿನ 21 ದಿನಗಳಲ್ಲಿ ಈ ಮೊತ್ತವನ್ನು ಸರರ್ಕಾಕಾರಿ ಖಾತೆಯಲ್ಲಿ ಜಮಾ ಮಾಡದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಆಡಳಿತ ಮಂಡಳಿಯು ಎಚ್ಚರಿಕೆ ನೀಡಿದೆ.
ಇಲ್ಲಿನ ಸರಕಾರಿ ಭೂಮಿಯನ್ನು 18 ಜೂನ್ 1894 ರಂದು ‘ಫ್ರೀ ಚರ್ಚ್ ಆಫ್ ಸ್ಕಾಟ್‌ಲ್ಯಾಂಡ್’ ಸಂಸ್ಥೆಗೆ 99 ವರ್ಷಗಳ ಗುತ್ತಿಗೆಯ ಮೇಲೆ (ಲೀಜ್) ನೀಡಲಾಗಿತ್ತು. ಈ ಗುತ್ತಿಗೆಯ ಅವಧಿಯು 13 ಜೂನ್ 1993 ರಂದೇ ಕೊನೆಗೊಂಡಿದೆ; ಆದರೆ ಅವಧಿ ಮುಗಿದು 33 ವರ್ಷಗಳು ಕಳೆದರೂ, ಸರಕಾರವು ಈ ಭೂಮಿಯನ್ನು ವಶಕ್ಕೆ ಪಡೆದಿರಲಿಲ್ಲ ಅಥವಾ ಗುತ್ತಿಗೆಯನ್ನು ನವೀಕರಿಸಿರಲಿಲ್ಲ.
ಹಿಂದೂ ವಿಧಿಜ್ಞ ಪರಿಷತ್ತಿನ ಹೋರಾಟ
ಹಿಂದೂ ವಿಧಿಜ್ಞ ಪರಿಷತ್ತಿನ ಅಧ್ಯಕ್ಷರಾದ ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ್ ಅವರು ಈ ಗಂಭೀರ ಪ್ರಕರಣವನ್ನು ಗಮನಿಸಿ ಕಂದಾಯ ಇಲಾಖೆಗೆ ಲಿಖಿತ ದೂರು ಸಲ್ಲಿಸಿದ್ದರು. ಮೂಲ ಬಾಡಿಗೆದಾರ ಸಂಸ್ಥೆಯು ಈಗ ಅಸ್ತಿತ್ವದಲ್ಲಿಲ್ಲ ಮತ್ತು ‘ಚರ್ಚ್ ಆಫ್ ಸೆಂಟ್ ಆಂಡ್ರ್ಯೂ ಅಂಡ್ ಸೆಂಟ್ ಕೊಲುಂಬಾ’ ಎಂಬ ಸಂಸ್ಥೆಯು ಯಾವುದೇ ಅಧಿಕೃತ ಕಾನೂನು ವರ್ಗಾವಣೆಯಿಲ್ಲದೆ ಈ ಮೌಲ್ಯಯುತ ಭೂಮಿಯನ್ನು ಅನಧಿಕೃತವಾಗಿ ಬಳಸುತ್ತಿದೆ. ಈ ಪ್ರಕರಣದಲ್ಲಿ ಮಾಹಿತಿ ಹಕ್ಕಿನ ಅಡಿಯಲ್ಲಿ ಕೇಳಲಾದ ಪ್ರಶ್ನೆಗಳಿಂದಾಗಿ ಆಡಳಿತಾತ್ಮಕ ವಿಳಂಬವು ಬಯಲಿಗೆ ಬಂದಿದೆ.
ಜಿಲ್ಲಾಧಿಕಾರಿಗಳಿಂದ 21 ದಿನಗಳ ಗಡುವು
ಈ ದೂರನ್ನು ಗಮನಿಸಿದ ಮುಂಬಯಿ ನಗರ ಜಿಲ್ಲಾಧಿಕಾರಿ ಕಚೇರಿಯು 23 ಜೂನ್ 2026 ರಂದು ಸಂಬಂಧಪಟ್ಟ ಟ್ರಸ್ಟ್‌ಗೆ ಹೊಸ ನೋಟಿಸ್ ಕಳುಹಿಸಿದೆ. 3 ಜನವರಿ 2022 ರ ಆದೇಶದ ಪ್ರಕಾರ, ಗುತ್ತಿಗೆ ನವೀಕರಣಕ್ಕಾಗಿ 31 ಲಕ್ಷ 74 ಸಾವಿರ 895 ರೂಪಾಯಿಗಳನ್ನು ಸರಕಾರಿ ಖಾತೆಯಲ್ಲಿ ಜಮಾ ಮಾಡುವುದು ಕಡ್ಡಾಯವಾಗಿತ್ತು. ಈಗ ನಿವಾಸಿ ಉಪ ಜಿಲ್ಲಾಧಿಕಾರಿಗಳು 23 ಜೂನ್‌ನ ಪತ್ರದ ಮೂಲಕ ಸಂಬಂಧಪಟ್ಟ ಸಂಸ್ಥೆಗೆ 21 ದಿನಗಳ ಅಂತಿಮ ಗಡುವನ್ನು ನೀಡಿದ್ದಾರೆ.
ನಿಗದಿತ ಅವಧಿಯಲ್ಲಿ ಬಾಕಿ ಹಣವನ್ನು (ಜಿ.ಆರ್.ಎ.ಎಸ್.) ವ್ಯವಸ್ಥೆಯ ಮೂಲಕ ಜಮಾ ಮಾಡಿ, ಅದರ ಅಧಿಕೃತ ಚಲನ್ ಅನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸದಿದ್ದರೆ, ನಿಯಮಾನುಸಾರ ಮುಂದಿನ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸರಕಾರಿ ಭೂಮಿಯ ಅಕ್ರಮ ಬಳಕೆ ಮತ್ತು ಕಂದಾಯವನ್ನು ವಂಚಿಸುತ್ತಿದ್ದ ಸಂಸ್ಥೆಗಳ ವಿರುದ್ಧ ಹಿಂದೂ ವಿಧಿಜ್ಞ ಪರಿಷತ್ತು ನೀಡಿದ ಹೋರಾಟಕ್ಕೆ ಈ ನೋಟಿಸ್‌ನಿಂದಾಗಿ ದೊಡ್ಡ ಯಶಸ್ಸು ಸಿಕ್ಕಿದೆ.
ರಾ.ಸ್ವ. ಸಂಘದಲ್ಲಿ ಜನಸಂದಣಿ ಹೆಚ್ಚಾದ ಕಾರಣ ಒಳ್ಳೆಯ ಜನರ ಕೊರತೆಯಾಗಿದೆ !
ಗಾಜಿಯಾಬಾದ (ಉತ್ತರ ಪ್ರದೇಶ) ನಲ್ಲಿ ಒತ್ತುವರಿ ಮಾಡಿ ನಿರ್ಮಿಸಿದ್ದ 3 ಅಂತಸ್ತಿನ ಮಜಾರ್ ನೆಲಸಮ!
15 ಸಾವಿರ ಜನರನ್ನು ಕೊಲ್ಲುವ ಸಂಚು ಇತ್ತು! – ಆರೋಪಿ ಫಯ್ಯಾಜ್ ಒಪ್ಪಿಗೆ
ಆಸ್ಸಾಂ: ಮಾಜಿ ಪೊಲೀಸ್ ಉಪಮಹಾನಿರ್ದೇಶಕರ 53 ಕೋಟಿ ರೂಪಾಯಿಗಳ ಆಸ್ತಿ ಜಪ್ತಿ !
ಶ್ರೀರಾಮಮಂದಿರದ ದಾನ ಕಳ್ಳತನ ಪ್ರಕರಣದ 8 ಆರೋಪಿಗಳ ಮನೆಗಳ ಮೇಲೆ ಪೊಲೀಸರ ದಾಳಿ
ಮುಳಗುಂದ : ಒಬ್ಬನೇ ಒಬ್ಬ ಮುಸ್ಲಿಮರಿಲ್ಲದಿದ್ದರೂ ಹಿಂದೂಗಳಿಂದ ಮೊಹರಂ ಆಚರಣೆ!