
ರಾಮಪುರ (ಉತ್ತರ ಪ್ರದೇಶ) – ಛತ್ತೀಸಗಢದ ದುರ್ಗ್ ಜಿಲ್ಲೆಯ ನಿವಾಸಿಯಾದ ಅಲೀಶಾ ಖಾತೂನ್ ಎಂಬ ಮುಸ್ಲಿಂ ಯುವತಿ ರಾಮಪುರ (ಉತ್ತರ ಪ್ರದೇಶ) ನಿವಾಸಿ ಜೋಗೇಂದ್ರ ಸೈನಿ ಎಂಬ ಹಿಂದೂ ಯುವಕನನ್ನು ವಿವಾಹವಾಗಿದ್ದಾರೆ. ವಿವಾಹದ ನಂತರ ಅಲೀಶಾ ಸ್ವಇಚ್ಛೆಯಿಂದ ತನ್ನ ಹೆಸರನ್ನು ‘ಅದಿತಿ’ ಎಂದು ಬದಲಾಯಿಸಿಕೊಂಡಿದ್ದಾಳೆ. ಅಲೀಶಾಳ ಕುಟುಂಬದವರು ಈ ವಿವಾಹವನ್ನು ವಿರೋಧಿಸಿದ್ದರು; ಆದರೆ ಯುವತಿ ಪ್ರಾಪ್ತ ವಯಸ್ಕಳಾಗಿದ್ದರಿಂದ ಪೊಲೀಸರು ಆಕೆಯ ಇಚ್ಛೆಯನ್ನು ಗೌರವಿಸಿದರು.
1. ಮಾಧ್ಯಮಗಳ ವರದಿಗಳ ಪ್ರಕಾರ, ರಾಮಪುರ ನಿವಾಸಿಯಾದ 21 ವರ್ಷದ ಜೋಗೇಂದ್ರ ಸೈನಿಗೆ ಒಂದೂವರೆ ವರ್ಷದ ಹಿಂದೆ ಛತ್ತೀಸಗಢದ ದುರ್ಗ್ ಜಿಲ್ಲೆಯ ನಿವಾಸಿಯಾದ ಅಲೀಶಾ ಖಾತೂನ್ ಪರಿಚಯವಾಗಿದ್ದಳು. ಮೆಲ್ಲನೆ ಅವರಿಬ್ಬರ ನಡುವೆ ಪ್ರೇಮಾಂಕುರವಾಗಿದೆ. ಕೆಲವು ದಿನಗಳ ಹಿಂದೆ ಅಲೀಶಾ ಖಾತೂನ್ ಸುಮಾರು 1 ಸಾವಿರ ಕಿಲೋಮೀಟರ್ ದೂರದ ರಾಮಪುರಕ್ಕೆ ಜೋಗೇಂದ್ರನ ಬಳಿಗೆ ಹೋಗಿದ್ದಾಳೆ.
2. ಅಲೀಶಾಳ ತಾಯಿ ಪರ್ವೀನ ಬೇಗಂ ಮತ್ತು ಸಹೋದರ ಮಹಮ್ಮದ್ ಸಮೀರ್ ಕೂಡ ಆಕೆಯನ್ನು ಹುಡುಕುತ್ತಾ ಛತ್ತೀಸಗಢ ಪೊಲೀಸರೊಂದಿಗೆ ರಾಮಪುರಕ್ಕೆ ತಲುಪಿದ್ದರು.
3. ಈ ಪ್ರಕರಣವು ರಾಮಪುರ ಪೊಲೀಸರ ಬಳಿಗೆ ತಲುಪಿತ್ತು. ಪೊಲೀಸರು ಯುವತಿ ಪ್ರಾಪ್ತ ವಯಸ್ಕಳಾಗಿದ್ದಾಳೆ ಎಂಬುದನ್ನು ಖಚಿತಪಡಿಸಿಕೊಂಡು ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡರು. ಇದರ ನಂತರ ವಿಶ್ವ ಹಿಂದೂ ಪರಿಷತ್ ಜೂನ್ 27 ರಂದು ಜೋಗೇಂದ್ರ ಮತ್ತು ಅಲೀಶಾ ಅವರ ವಿವಾಹವನ್ನು ಶಿವನ ದೇವಸ್ಥಾನದಲ್ಲಿ ನೆರವೇರಿಸಿತು.
ಪ್ರಾರ್ಥನೆ ಅಥವಾ ಮಂತ್ರಗಳನ್ನು ಹೇಳಲು ವಿದ್ಯಾರ್ಥಿಗಳು ಅಥವಾ ಪೋಷಕರ ಒಪ್ಪಿಗೆ ಅತ್ಯಗತ್ಯ! – IRS Nisha Oraon
Love Jihad Cases : ಕಳೆದ 24 ಗಂಟೆಗಳಲ್ಲಿ ವಿವಿಧ ರಾಜ್ಯಗಳಲ್ಲಿ ಬೆಳಕಿಗೆ ಬಂದ ಲವ್ ಜಿಹಾದ್ನ 9 ಘಟನೆಗಳು !
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿನ ಅವ್ಯವಹಾರ ಅತ್ಯಂತ ಗಂಭೀರ ಘಟನೆ! – ನ್ಯಾಯವಾದಿ ವಿಷ್ಣು ಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ
ರಾಜ್ಯದಲ್ಲಿ ಅಕ್ರಮ ವಲಸಿಗರ ಸಂಖ್ಯೆ 13 ಸಾವಿರಕ್ಕೂ ಹೆಚ್ಚು! – ರಾಜ್ಯ ಗೃಹ ಇಲಾಖೆಯ ವರದಿಯ ಮಾಹಿತಿ
ಶ್ರೀರಾಮ ಮಂದಿರದ 10 ಕೋಟಿ ಮೌಲ್ಯದ ಜಮೀನು ಪ್ರಕರಣ: ಅತಿಕ್ರಮಣದಾರರ ದಾವೆ ವಜಾ : Achalapur Sri Rama Temple
ಮಧ್ಯಪ್ರದೇಶದ ರಿವಾದಲ್ಲಿ ಗೋ-ಕಳ್ಳಸಾಗಣೆ: ಇಬ್ಬರು ಮುಸಲ್ಮಾನ ಮಹಿಳೆಯರ ಸೆರೆ : Rewa Beef Smuggling Arrests