ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ‘ದಾವತ್-ಎ-ಇಸ್ಲಾಮಿ’ಗೆ ೨೫ ರಾಜ್ಯಗಳ ೩೦೦ ಜನರು ಸಂಪರ್ಕದಲ್ಲಿ !

ಉದಯಪೂರ ಹತ್ಯೆ ಪ್ರಕರಣ

ಭಾರತಾದ್ಯಂತ ಸರಣಿ ಕೊಲೆಯ ಸಂಚಿನ ಸಾಧ್ಯತೆ !

ಉದಯಪೂರ(ರಾಜಸ್ಥಾನ) – ಇಲ್ಲಿಯ ಕನ್ಹಯ್ಯಲಾಲ ಇವರ ಶಿರಚ್ಛೇದ ಮಾಡಿರುವ ಗೌಸ್ ಮಹಮ್ಮದ್ ಮತ್ತು ರಿಯಾಜ್ ಅತ್ತಾರಿ ಇವರು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ‘ದಾವತ್-ಎ-ಇಸ್ಲಾಮಿ’ಯ ೧೮ ಭಯೋತ್ಪಾದಕರ ಜೊತೆಗೆ ಸತತವಾಗಿ ಸಂಪರ್ಕದಲ್ಲಿದ್ದರು. ಈ ಭಯೋತ್ಪಾದಕರ ಸಂಚಾರ ವಾಣಿಯ ಸಂಖ್ಯೆಯೊಂದಿಗೆ ಭಾರತದ ೨೫ ರಾಜ್ಯಗಳ ೩೦೦ ಜನರ ಸಂಪರ್ಕದಲ್ಲಿದ್ದಾರೆ, ಎಂದು ಆಘಾತಕಾರಿ ಮಾಹಿತಿಯನ್ನು ರಾಷ್ಟ್ರೀಯ ತನಿಖಾ ದಳ ಮತ್ತು ಗುಪ್ತಚರ ಇಲಾಖೆ ಇವರ ಕೈ ಸೇರಿದೆ. ಈ ೩೦೦ ಜನರು ಮುಖ್ಯವಾಗಿ ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ, ಮಹಾರಾಷ್ಟ್ರ, ಬಂಗಾಲ, ಬಿಹಾರ ಮತ್ತು ಕೇರಳ ಇಲ್ಲಿಯವರಾಗಿದ್ದಾರೆ.

ಮೂಲಗಳಿಗೆ ಸಿಕ್ಕಿದ ಮಾಹಿತಿಯ ಪ್ರಕಾರ ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯಲಾಲ್ ಇವರ ಶಿರಚ್ಛೇದ ಮತ್ತು ಮಹಾರಾಷ್ಟ್ರದ ಅಮರಾವತಿಯಲ್ಲಿನ ಉಮೇಶ್ ಕೊಲ್ಹೆ ಇವರ ಕೊಲೆಯಲ್ಲಿ ಬಹಳಷ್ಟು ಸಾಮ್ಯತೆ ಕಂಡು ಬಂದು ಈ ರೀತಿಯ ಸರಣಿ ಹತ್ಯೆಯ ಸಂಚಿರುವ ಸಾಧ್ಯತೆ ನಿರಾಕರಿಸಲು ಸಾಧ್ಯವಿಲ್ಲ. ಆದ್ದರಿಂದ ತನಿಖಾ ದಳದವರು ಈ ಎಲ್ಲಾ ೨೫ ರಾಜ್ಯಗಳಿಗೆ ಎಚ್ಚರದಿಂದಿರಲು ಸೂಚಿಸಿದೆ.

ಸಂಪಾದಕೀಯ ನಿಲುವು

* ಹಿಂದೂಗಳ ಬುಡದಲ್ಲಿ ಎದ್ದಿರುವ ಈ ಜಿಹಾದಿ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೆಸೆಯಲು, ಈಗ ‘ಹಿಂದೂ ರಾಷ್ಟ್ರ’ ಇದು ಏಕೈಕ ಪರ್ಯಾಯವಾಗಿದೆ, ಇದನ್ನು ಅರಿತುಕೊಳ್ಳಿರಿ !

* ಸ್ವಾತಂತ್ರ್ಯದ ನಂತರ ೭೫ ವರ್ಷಗಳಲ್ಲ ಬದಲಾಗಿ ಕಳೆದ ೧ ಸಾವಿರ ೩೦೦ ವರ್ಷಗಳ ಕಾಲ ಜಿಹಾದಿ ಆಕ್ರಮಣಕಾರರಿಂದ ಹಿಂದುಗಳ ರಕ್ಷಣೆ ಮಾಡಲು ಆಯಾ ಕಾಲದ ಆಡಳಿತದಲ್ಲಿ ಹೆಚ್ಚಿನ ಸಮಯ ವಿಫಲಗೊಂಡಿದ್ದಾರೆ. ಆದ್ದರಿಂದ ಈಗಲಾದರೂ ಹಿಂದುಗಳು ಯಾರ ಮೇಲೆಯೂ ಅವಲಂಬಿಸದೆ ಸ್ವಂತದ, ಕುಟುಂಬದ ಮತ್ತು ಊರಿನ ರಕ್ಷಣೆ ಮಾಡುವುದಕ್ಕಾಗಿ ಸಂಘಟಿತರಾಗಿ ಸ್ವಸಂರಕ್ಷಣಾರ್ಥ ಸಿದ್ಧರಾಗುವುದು ಅವಶ್ಯಕತೆ !