ಹಿಂದೂ ಬಹುಸಂಖ್ಯಾತ ಭಾರತದಲ್ಲಿ ‘ಹಿಂದೂ’ ಆಗಿ ಅನುಭವಿಸಿದ ಆಘಾತಗಳು!
ಬಂಗಾಳದಲ್ಲಿ ಅಪ್ರಾಪ್ತ ಹಿಂದೂ ಯುವತಿಯ ಆತ್ಮಹತ್ಯೆ

ನವದೆಹಲಿ – ದೇಶಾದ್ಯಂತ ಹಿಂದೂಗಳ ಅಸ್ತಿತ್ವಕ್ಕೆ ಮಾರಕವಾಗಿರುವ ಲವ್ ಜಿಹಾದ್‌ನ ಸಂಚು ಭೀಕರ ರೂಪ ಪಡೆದುಕೊಂಡಿದೆ. ಕಳೆದ 24 ಗಂಟೆಗಳಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಬಂಗಾಳ ರಾಜ್ಯಗಳಲ್ಲಿ ‘ಲವ್ ಜಿಹಾದ್’ನ 9 ಘಟನೆಗಳು ಬೆಳಕಿಗೆ ಬಂದಿವೆ. ಈ 9 ಘಟನೆಗಳ ವರದಿ ಇಲ್ಲಿದೆ…
1. ಉತ್ತರ ಪ್ರದೇಶ (4 ಘಟನೆಗಳು)
ಕಾನ್ಪುರ – ಅರ್ಮಾನ್ ಎಂಬ ಲವ್ ಜಿಹಾದಿಯು 17 ವರ್ಷದ ಹಿಂದೂ ಹುಡುಗಿಯನ್ನು ತನ್ನ ಬಲೆಗೆ ಬೀಳಿಸಿಕೊಂಡನು. ತನ್ನ 2 ಸಹಚರರೊಂದಿಗೆ ಆಕೆಯನ್ನು ಅಪಹರಿಸಿ, 6 ದಿನಗಳ ಕಾಲ ತನ್ನ ಮನೆಯಲ್ಲಿ ಕೂಡಿಹಾಕಿದ್ದನು. ಈ ಅವಧಿಯಲ್ಲಿ ಸಂತ್ರಸ್ತೆಗೆ ಬುರ್ಖಾ ಧರಿಸಲು ಮತ್ತು ‘ಕಲ್ಮಾ’ ಪಠಿಸಲು ಒತ್ತಾಯಿಸಲಾಯಿತು, ನಿಷೇಧಿತ ಮಾಂಸವನ್ನು (ಬಹುಶಃ ಗೋಮಾಂಸ) ತಿನ್ನಿಸಲಾಯಿತು, ಮತ್ತು ಬಿಸಿ ಇಕ್ಕಳದಿಂದ ಸುಡಲಾಯಿತು. ಆಕೆಯನ್ನು ಸೌದಿ ಅರೇಬಿಯಾಕ್ಕೆ ಮಾರಾಟ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು. ಪೊಲೀಸರು ಅರ್ಮಾನ್‌ನನ್ನು ಬಂಧಿಸಿದ್ದು, ಆತನ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಔರೈಯಾ – ಜಿಲ್ಲೆಯ ಸೆಂಗನ್‌ಪುರ ಗ್ರಾಮದಲ್ಲಿ ಆಕಾಶ್ ಎಂಬ ಹಿಂದೂ ಪುರುಷನೊಂದಿಗೆ ಓಡಿಹೋದ ಮುಸ್ಲಿಂ ಮಹಿಳೆಯೊಬ್ಬಳು ಆರ್ಯ ಸಮಾಜದ ದೇವಸ್ಥಾನದಲ್ಲಿ ಆತನನ್ನು ವಿವಾಹವಾದಳು. ಆಕೆಯ ತಂದೆಯ ದೂರಿನ ಮೇರೆಗೆ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈ ವೇಳೆ ಮಹಿಳೆ ತನಗೆ ತನ್ನ ಕುಟುಂಬದವರ ಬಳಿ ಹೋಗಬೇಕೆಂದು ಹೇಳಿದಳು; ಆದರೆ ಆಕೆಯ ಹಿಂದೂ ಪತಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದರೆ ಆತನೊಂದಿಗೆ ವಾಸಿಸಲು ಸಿದ್ಧಳಾಗಿದ್ದಾಳೆ. ಸದ್ಯ ಮಹಿಳೆಯನ್ನು ಆಕೆಯ ಕುಟುಂಬದ ಸುಪರ್ದಿಗೆ ನೀಡಲಾಗಿದೆ.
ಹಾಪುರ್ – ಜಿಲ್ಲೆಯ ಸಲೈ ಗ್ರಾಮದ ಹುಸೇನ್ ಎಂಬ ಯುವಕ ತನ್ನ ಒಬ್ಬ ಸಹಚರನೊಂದಿಗೆ ಕಥಿತ ಹಿಂದೂ ಪ್ರೇಮಿಯ ಮನೆಗೆ ತೆರಳಿದನು. ಮನೆಗೆ ಹೋಗಿ ಆಕೆಯನ್ನು ಮದುವೆಯಾಗುವಂತೆ ಒತ್ತಾಯಿಸಿದನು. ಆಕೆ ವಿರೋಧಿಸಿದಾಗ, ಆಕೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದನು. ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳು ಸದ್ಯ ತಲೆಮರೆಸಿಕೊಂಡಿದ್ದಾನೆ.
ಲಕ್ಷ್ಮಣಪುರಿ – ಇಲ್ಲಿನ ಆಶಿಯಾನಾ ಪ್ರದೇಶದಲ್ಲಿ ವಾಸಿಸುವ ಇರ್ಶಾದ್ ಅಹ್ಮದ್ ಎಂಬಾತ 2022ರಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ‘ರಾಹುಲ್’ ಎಂದು ನಂಬಿಸಿ ಹಿಂದೂ ಯುವತಿಯೊಬ್ಬಳನ್ನು ಬಲೆಗೆ ಬೀಳಿಸಿಕೊಂಡಿದ್ದನು. ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ಅಶ್ಲೀಲ ಚಿತ್ರಗಳನ್ನು ತೆಗೆದಿದ್ದನು. ನಂತರ ಆಕೆ ಪೊಲೀಸ್ ದೂರು ನೀಡುವ ಬೆದರಿಕೆ ಹಾಕಿದಾಗ, ಆತ ಆಕೆಯೊಂದಿಗೆ ದೇವಾಲಯದಲ್ಲಿ ವಿವಾಹವಾಗುವ ನಾಟಕವಾಡಿದನು. ಕಾಲಕ್ರಮೇಣ ಸಂತ್ರಸ್ತೆಗೆ ಆತನ ನಿಜವಾದ ಗುರುತು ತಿಳಿಯಿತು, ಅಲ್ಲದೆ ಆತ ಮೊದಲೇ ವಿವಾಹಿತನೆಂಬುದು ಗೊತ್ತಾಯಿತು. ಆಕೆ ಪ್ರಶ್ನಿಸಿದಾಗ, ಆತ ಅಶ್ಲೀಲ ಚಿತ್ರಗಳನ್ನು ಬಳಸಿ ಬೆದರಿಕೆ ಹಾಕಿದನು, ಸಾವಿರಾರು ರೂಪಾಯಿ ಸುಲಿಗೆ ಮಾಡಿದನು ಮತ್ತು ಮತಾಂತರಗೊಳ್ಳುವಂತೆ ಒತ್ತಡ ಹೇರಿದನು. ಪೊಲೀಸರು ಇರ್ಶಾದ್ ಅಹ್ಮದ್‌ನನ್ನು ಬಂಧಿಸಿದ್ದಾರೆ.
2. ಮಧ್ಯಪ್ರದೇಶ (4 ಘಟನೆಗಳು)
ಜಬಲ್ಪುರ – ಸೈಯದ್ ಇಶಾಕ್ ಅಸ್ರಾರ್ ಎಂಬ ಯುವಕ ತಾನು ‘ರಾಜ್‌ಕುಮಾರ್’ ಎಂಬ ದಂತವೈದ್ಯ ಎಂದು ನಂಬಿಸಿದ್ದನು. ಈ ಮೂಲಕ ಆತ 3 ಹಿಂದೂ ಮಹಿಳೆಯರನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದನು. ಮೂವರಲ್ಲಿ ಕೋಲಕಾತಾದ ಸಂತ್ರಸ್ತೆ ಆತನ ಕಿರುಕುಳ ತಾಳಲಾರದೆ ಪೊಲೀಸರಿಗೆ ದೂರು ನೀಡಿದ್ದಾಳೆ. ವಿಎಚ್‌ಪಿ (VHP) ಸೈಯದ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ಜಬಲ್ಪುರದ ಮತ್ತೊಂದು ಘಟನೆಯಲ್ಲಿ, ನೆಕ್ ಅಲಿ ಖಾನ್ ಎಂಬ ವ್ಯಕ್ತಿ ತಾನು ‘ಅಂಕಿತ್’ ಎಂದು ಹೇಳಿಕೊಂಡು ಫೇಸ್‌ಬುಕ್ ಮೂಲಕ ಹಿಂದೂ ಮಹಿಳೆಯೊಂದಿಗೆ ಸ್ನೇಹ ಬೆಳೆಸಿದನು. ಆಕೆಯ ಲೈಂಗಿಕ ಶೋಷಣೆ ಮಾಡಿ, ಮದುವೆಯಾಗುವುದಾಗಿ ಭರವಸೆ ನೀಡಿ ಆಕೆಯೊಂದಿಗೆ ‘ಲಿವ್-ಇನ್ ರಿಲೇಶನ್‌ಶಿಪ್’ನಲ್ಲಿ (ಸ್ತ್ರೀ ಮತ್ತು ಪುರುಷ ಮದುವೆಯಾಗದೆ ಒಟ್ಟಿಗೆ ವಾಸಿಸುವುದು) ಇದ್ದನು. ಸಂತ್ರಸ್ತೆಯ ಆರೋಪದ ಪ್ರಕಾರ, ಆತ ಆಕೆಯ ಮೇಲೆ ಇಸ್ಲಾಂ ಧರ್ಮ ಸ್ವೀಕರಿಸಲು ಒತ್ತಡ ಹೇರಿದನು, ಗೋಮಾಂಸ ತಿನ್ನಿಸಿದನು ಮತ್ತು ಮುಂಬಯಿಗೆ ಕರೆದೊಯ್ದು 5 ಲಕ್ಷ ರೂಪಾಯಿಗೆ ಮಾರಾಟ ಮಾಡಲು ಪ್ರಯತ್ನಿಸಿದನು. ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬಂದು, ಆಕೆ ‘ಹಿಂದೂ ಧರ್ಮ ಸೇನೆ’ಯ ಸಹಾಯದಿಂದ ಜಬಲ್ಪುರ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
3. ಬಂಗಾಳ (1 ಘಟನೆ)
ಉತ್ತರ 24 ಪರಗಣ – ಜಿಲ್ಲೆಯ ಬಂಗಾಂವ್ ನಗರದ ಗೋಪಾಲ್ ನಗರದ ಗೋಪಿನಾಥಪುರದಲ್ಲಿ ಅಪ್ರಾಪ್ತ ಹಿಂದೂ ಯುವತಿಯನ್ನು ಆತ್ಮಹತ್ಯೆಗೆ ಪ್ರೇರೇಪಿಸಿದ ಆರೋಪದ ಮೇಲೆ ಪೊಲೀಸರು ಅಜ್ಮೀರ್ ಮಂಡಲ ಎಂಬಾತನನ್ನು ಬಂಧಿಸಿದ್ದಾರೆ. ಸಂತ್ರಸ್ತೆಯ ಕುಟುಂಬಸ್ಥರು ಅಜ್ಮೀರ್ ಎಂಬ ಯುವಕನ ಮೇಲೆ ಹತ್ಯೆಯ ಆರೋಪ ಹೊರಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಭಾಜಪ ಶಾಸಕ ಸ್ವಪನ್ ಮಜುಂದಾರ್ ಜೂನ್ 28 ರಂದು ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಿ, ಇದು ‘ಲವ್ ಜಿಹಾದ್’ ಪ್ರಕರಣ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಎಂಟನೇ ತರಗತಿಯಲ್ಲಿ ಓದುತ್ತಿದ್ದ ಈ ಸಂತ್ರಸ್ತೆಗೆ ಅಜ್ಮೀರ್ ಜೊತೆ ಪ್ರೇಮಸಂಬಂಧವಿತ್ತು. ನಂತರ ಆಕೆ ಆತನೊಂದಿಗಿನ ಸಂಬಂಧವನ್ನು ಮುರಿದುಕೊಂಡಿದ್ದಳು; ಆದರೆ ಅಜ್ಮೀರ್‌ಗೆ ಇದು ಇಷ್ಟವಿರಲಿಲ್ಲ. ಆತ ಆಕೆಯನ್ನು ನಿರಂತರವಾಗಿ ಬೆದರಿಸುತ್ತಿದ್ದನು. ಇದರಿಂದಾಗಿ ಆಕೆ ತೀವ್ರ ಮಾನಸಿಕ ಒತ್ತಡದಲ್ಲಿದ್ದಳು. ಕೊನೆಗೆ ಜೂನ್ 26 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಳು.
ಹಿಂಸಾಚಾರಕ್ಕೆ ತಿರುಗಿದ ‘ಕಾಕರೋಚ್ ಜನತಾ ಪಾರ್ಟಿ’ಯ ಸಂಸತ್ ಭವನ ಚಲೋ ಪ್ರತಿಭಟನೆ; ಪೊಲೀಸರಿಂದ ಲಾಠಿ ಪ್ರಹಾರ
5 ವರ್ಷಗಳಲ್ಲಿ 1 ಸಾವಿರ 676 ಪ್ರಕರಣಗಳು ದಾಖಲು: ಕೋಟ್ಯಂತರ ರೂಪಾಯಿ ಮೌಲ್ಯದ ಟಿಕೆಟ್ ಜಪ್ತಿ : Railway Tickets Seized
ಈ ಹಿಂದೆ ನನ್ನನ್ನು ಬಂಗಾಳದಿಂದ ಹೊರಗಟ್ಟಿದ ನಾಯಕರು ಈಗಲೂ ನನ್ನನ್ನು ಭಾಜಪ ಮತ್ತು ಸಂಘವನ್ನು ಬೆಂಬಲಿಸುವವಳು ಎಂದು ಬಿಂಬಿಸುತ್ತಿದ್ದಾರೆ! : Taslima Nasrin
ಬಂಗಾಳದಲ್ಲಿ ಸೆಪ್ಟೆಂಬರ್ 1 ರಿಂದ ಎಲ್ಲಾ ಸರಕಾರಿ ಕಲಾಪಗಳು ಬಂಗಾಳಿ ಭಾಷೆಯಲ್ಲೇ ನಡೆಯಲಿವೆ! – ಮುಖ್ಯಮಂತ್ರಿ : Only Bengali in Bengal
‘ಹಿಂದೂ ದೇವತೆಗಳು ಮಾಂಸ-ಮದ್ಯ ಸೇವಿಸುತ್ತಿದ್ದರು’ ಎಂದು ಹೇಳುವ ಧ್ರುವ್ ರಾಠಿಯ ವೀಡಿಯೊವನ್ನು ೨೪ ಗಂಟೆಗಳಲ್ಲಿ ತೆಗೆದುಹಾಕಿ !
ಕುನಾಲ್ ಕಾಮ್ರಾ ಮತ್ತು ಪ್ರಕಾಶ್ ರಾಜ್ ವಿರುದ್ಧ ಪ್ರಕರಣ ದಾಖಲಿಸಿ; ಹಿಂದೂ ಜನಜಾಗೃತಿ ಸಮಿತಿ ಮತ್ತು ಸುಪ್ರೀಂ ಕೋರ್ಟ್ ವಕೀಲರ ಆಗ್ರಹ