ಅಮೆರಿಕ ಮತ್ತು ಇರಾನ್ ನಡುವೆ ಪರಸ್ಪರರ ಮೇಲಿನ ದಾಳಿಗಳನ್ನು ನಿಲ್ಲಿಸಲು ಸಿದ್ಧತೆ : US-Iran War

ಹಾರ್ಮುಜ್‌ ಜಲಸಂಧಿಯ ಮೂಲಕ ನೌಕೆಗಳ ಸಂಚಾರ ಮುಂದುವರಿಯಲಿದೆ

ವಾಷಿಂಗ್ಟನ್ (ಅಮೆರಿಕ) – ಕದನ ವಿರಾಮ ಒಪ್ಪಂದವಾದ ಕೇವಲ ೯ ದಿನಗಳಲ್ಲಿ ಇರಾನ್ ಮತ್ತು ಅಮೆರಿಕ ನಡುವೆ ಮತ್ತೆ ಯುದ್ಧದಂತಹ ಪರಿಸ್ಥಿತಿ ನಿರ್ಮಾಣವಾದ ನಂತರ, ಈಗ ಉಭಯ ದೇಶಗಳೂ ಪರಸ್ಪರರ ಮೇಲಿನ ದಾಳಿಗಳನ್ನು ನಿಲ್ಲಿಸಲು ಸಿದ್ಧತೆ ತೋರಿಸಿವೆ. ಜೂನ್ ೩೦ ರಂದು ಎರಡೂ ದೇಶಗಳ ಪ್ರತಿನಿಧಿಗಳು ಕತಾರ್‌ನಲ್ಲಿ ಚರ್ಚೆ ನಡೆಸಲಿದ್ದಾರೆ. ಇರಾನ್ ಮತ್ತು ಅಮೆರಿಕ ನಡುವೆ ನಡೆದಿರುವ ಒಪ್ಪಂದದ ಪ್ರಕಾರ, ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ವಾಣಿಜ್ಯ ನೌಕೆಗಳ ಸಂಚಾರಕ್ಕೆ ಯಾವುದೇ ಅಡ್ಡಿಪಡಿಸಲಾಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಈ ಜಲಮಾರ್ಗದ ವಿಷಯವಾಗಿ ಎರಡೂ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿತ್ತು.