(ಮಜಾರ್ ಎಂದರೆ ಮುಸಲ್ಮಾನ ಫಕೀರನ ಗೋರಿ)

ಗಾಜಿಯಾಬಾದ (ಉತ್ತರ ಪ್ರದೇಶ) – ಇಲ್ಲಿ ಸರಕಾರಿ ಭೂಮಿಯಲ್ಲಿ ನಿರ್ಮಿಸಲಾಗಿದ್ದ 3 ಅಂತಸ್ತಿನ ‘ಮಜಾರ್’ ಅನ್ನು ಆಡಳಿತವು ಬುಲ್ಡೋಜರ್ ಮೂಲಕ ಕೆಡವಿತು. ಹಲವು ನೋಟಿಸ್‌ಗಳನ್ನು ನೀಡಿದರೂ ಅಕ್ರಮ ಕಟ್ಟಡವನ್ನು ತೆರವುಗೊಳಿಸದ ಕಾರಣ ಅಂತಿಮವಾಗಿ ಈ ನೆಲಸಮ ಕಾರ್ಯಾಚರಣೆ ನಡೆಸಲಾಯಿತು. (ಈ ನೆಲಸಮದ ವೆಚ್ಚವನ್ನು ಸಂಬಂಧಪಟ್ಟವರಿಂದ ವಸೂಲಿ ಮಾಡುವುದಲ್ಲದೆ, ಒತ್ತುವರಿ ಮಾಡಿದವರನ್ನು ಜೈಲಿಗೆ ತಳ್ಳಬೇಕು! – ಸಂಪಾದಕರು) ಈ ಕಾರ್ಯಾಚರಣೆಯ ಸಮಯದಲ್ಲಿ ಸಾಕಷ್ಟು ಪೊಲೀಸ್ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿತ್ತು. (ಪೊಲೀಸ್ ಭದ್ರತೆಯನ್ನು ಏಕೆ ಇಡಬೇಕಾಗುತ್ತದೆ? ಅಕ್ರಮ ಕಟ್ಟಡವನ್ನು ಕೆಡವಲು ಯಾರು ವಿರೋಧಿಸುತ್ತಾರೆ? ಅಂತಹವರ ಮೇಲೆ ಪ್ರಕರಣ ದಾಖಲಿಸಿ ಅವರನ್ನು ಜೈಲಿಗೆ ಹಾಕಬೇಕು! – ಸಂಪಾದಕರು)
ಆಡಳಿತದ ಅನುಸಾರ, ಈ ನಿರ್ಮಾಣವು 2001ರಲ್ಲಿ ಒಂದು ಸಣ್ಣ ರಚನೆಯೊಂದಿಗೆ ಪ್ರಾರಂಭವಾಯಿತು. ಮುಂದಿನ ವರ್ಷಗಳಲ್ಲಿ, ಸುತ್ತಮುತ್ತಲಿನ ಭೂಮಿಯನ್ನೂ ಒತ್ತುವರಿ ಮಾಡಿಕೊಳ್ಳಲಾಯಿತು. 25 ವರ್ಷಗಳಲ್ಲಿ ಈ ನಿರ್ಮಾಣವು 3 ಅಂತಸ್ತಿನವರೆಗೆ ತಲುಪಿತು. ಈ ಭೂಮಿಯ ಮೌಲ್ಯ ಒಂದೂವರೆ ಕೋಟಿ ರೂಪಾಯಿಗಳಾಗಿವೆ. (25 ವರ್ಷಗಳವರೆಗೆ ಆಡಳಿತದಲ್ಲಿ ಯಾರೆಲ್ಲಾ ನಿದ್ರಿಸುತ್ತಿದ್ದರು, ಅವರ ಪಟ್ಟಿಯನ್ನು ತಯಾರಿಸಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು! – ಸಂಪಾದಕರು)
ಫೋರ್ಟ್ (ಮುಂಬಯಿ) ನಲ್ಲಿನ ಸರಕಾರಿ ಜಾಗದ ಪ್ರಕರಣದಲ್ಲಿ ಚರ್ಚ್ಗೆ ಜಿಲ್ಲಾಧಿಕಾರಿಗಳಿಂದ ಬಾಕಿ ಹಣ ವಸೂಲಾತಿಯ ನೋಟಿಸ್ !
ರಾ.ಸ್ವ. ಸಂಘದಲ್ಲಿ ಜನಸಂದಣಿ ಹೆಚ್ಚಾದ ಕಾರಣ ಒಳ್ಳೆಯ ಜನರ ಕೊರತೆಯಾಗಿದೆ !
15 ಸಾವಿರ ಜನರನ್ನು ಕೊಲ್ಲುವ ಸಂಚು ಇತ್ತು! – ಆರೋಪಿ ಫಯ್ಯಾಜ್ ಒಪ್ಪಿಗೆ
ಆಸ್ಸಾಂ: ಮಾಜಿ ಪೊಲೀಸ್ ಉಪಮಹಾನಿರ್ದೇಶಕರ 53 ಕೋಟಿ ರೂಪಾಯಿಗಳ ಆಸ್ತಿ ಜಪ್ತಿ !
ಬಾಂಗ್ಲಾದೇಶದಲ್ಲಿ ಮತಾಂಧ ಮುಸಲ್ಮಾನರಿಂದ ಒಂದೇ ಹಿಂದೂ ಕುಟುಂಬದ ನಾಲ್ವರ ಹತ್ಯೆ
ಶ್ರೀರಾಮಮಂದಿರದ ದಾನ ಕಳ್ಳತನ ಪ್ರಕರಣದ 8 ಆರೋಪಿಗಳ ಮನೆಗಳ ಮೇಲೆ ಪೊಲೀಸರ ದಾಳಿ