ರಾ.ಸ್ವ. ಸಂಘದಲ್ಲಿ ಜನಸಂದಣಿ ಹೆಚ್ಚಾದ ಕಾರಣ ಒಳ್ಳೆಯ ಜನರ ಕೊರತೆಯಾಗಿದೆ !

ಮಧ್ಯಪ್ರದೇಶದ ಭಾಜಪ ಸರಕಾರದ ನಗರಾಭಿವೃದ್ಧಿ ಮತ್ತು ಗೃಹ ನಿರ್ಮಾಣ ಸಚಿವರಾದ ಕೈಲಾಸ ವಿಜಯವರ್ಗೀಯರವರ ಹೇಳಿಕೆ

ಭೋಪಾಲ (ಮಧ್ಯಪ್ರದೇಶ) – ರಾ.ಸ್ವ. ಸಂಘದಲ್ಲಿ ಜನಸಂದಣಿ ಹೆಚ್ಚಾಗಿದೆ; ಆದರೆ ಒಳ್ಳೆಯ ಜನರ ಕೊರತೆಯಿದೆ. ಮೊದಲು ಒಳ್ಳೆಯ ಜನರಿದ್ದರು, ಈಗ ಸಂಘದಲ್ಲಿ ಅಂತಹ ಜನರ ಕೊರತೆಯಿದೆ. ಸಂಘಟನೆ ಬೆಳೆಯುತ್ತಿದೆ, ಸಿದ್ಧಾಂತವೂ ಬೆಳೆಯುತ್ತಿದೆ; ಆದರೆ ಒಳ್ಳೆಯ ಜನರು ಇಲ್ಲದಿದ್ದರೆ ಈ ಸಿದ್ಧಾಂತದ ಮಹತ್ವವೇನು? ನಾವು ಚಿಂತನೆ ಮತ್ತು ಮಂಥನ ಮಾಡಬೇಕು ಎಂದು ಮಧ್ಯಪ್ರದೇಶದ ನಗರಾಭಿವೃದ್ಧಿ ಮತ್ತು ಗೃಹ ನಿರ್ಮಾಣ ಸಚಿವರಾದ ಕೈಲಾಸ ವಿಜಯವರ್ಗೀಯರವರು ಇಲ್ಲಿ ಹೇಳಿದ್ದಾರೆ. ಅವರು ಶಾಲಿಗ್ರಾಮ ತೋಮರ ಸ್ಮೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಾ. ಮೋಹನ ಯಾದವ ರವರೂ ಉಪಸ್ಥಿತರಿದ್ದರು.

ಕೈಲಾಸ ವಿಜಯವರ್ಗೀಯರವರು ಮುಂದುವರಿಯುತ್ತಾ, ನಮ್ಮ ಪಕ್ಷವು ತುಂಬಾ ದೊಡ್ಡದಾಗಿದೆ. ಯಾವ ಅಧಿಕಾರಿಯೇ ಬರಲಿ, ಅವನು ನಾನು ಕೂಡ ಸಂಘದ ಪಟ್ಟಿ ಕಟ್ಟಿದ್ದೇನೆ ಎಂದು ಹೇಳುತ್ತಾನೆ. ಸಂಘದ ಚಡ್ಡಿ ಧರಿಸಿದ್ದೇನೆ ಎನ್ನುತ್ತಾನೆ. ಒಬ್ಬ ಅಧಿಕಾರಿಯು ನನಗೆ, ‘ನನ್ನ ತಂದೆ ಸಂಘಕ್ಕೆ ಹೋಗುತ್ತಿದ್ದರು’ ಎಂದು ಹೇಳಿದರು. ಯಾರೋ ಒಬ್ಬರು ‘ನನ್ನ ತಂದೆ ಸಂಘದಲ್ಲಿ ಅಧ್ಯಕ್ಷರಾಗಿದ್ದರು’ ಎನ್ನುತ್ತಾರೆ. ಸರಕಾರ ಬಂದ ನಂತರ ಎಲ್ಲಾ ಅಧಿಕಾರಿಗಳು ಸಂಘದವರಾಗಿದ್ದಾರೆ. ಭಾಜಪ ಸರಕಾರ ಬಂದ ನಂತರ ಅಧಿಕಾರಿಗಳೂ ತಮ್ಮನ್ನು ಸಂಘದೊಂದಿಗೆ ಸಂಬಂಧ ಹೊಂದಿದ್ದೇವೆ ಎಂದು ಹೇಳಿಕೊಳ್ಳಲು ಪ್ರಾರಂಭಿಸಿದ್ದಾರೆ, ಎಂದು ಹೇಳಿದರು.