ಕರ್ಣಾವತಿ (ಗುಜರಾತ) – ಗಣೇಶೋತ್ಸವಕ್ಕಾಗಿ ಎತ್ತರದ ಗಣೇಶ ಮೂರ್ತಿಗಳ ಮೇಲಿನ ನಿರ್ಬಂಧವನ್ನು ಗುಜರಾತ ಸರಕಾರ ತೆಗೆದುಹಾಕಿದೆ. ೨೦೨೧ ರಲ್ಲಿ ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಗಣೇಶ ಮೂರ್ತಿಗಳ ಎತ್ತರ ೪ ಅಡಿ ಮತ್ತು ಮನೆಯಲ್ಲಿಯ ಗಣೇಶ ಮೂರ್ತಿಗಳು ೨ ಅಡಿ ಮೀರಿರಬಾರದು ಎಂಬ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಮಾರ್ಚ ೩೧, ೨೦೨೨ರ ನಂತರ ಕೊರೋನಾದ ಯಾವುದೇ ನಿರ್ಬಂಧ ಅನ್ವಯಿಸುವದಿಲ್ಲ. ಇದರಿಂದಾಗಿ ಮುಂಬರುವ ಗಣೇಶೋತ್ಸವಕ್ಕೆ ಮೂರ್ತಿಗಳ ಎತ್ತರದ ಮೇಲಿನ ನಿರ್ಬಂಧಗಳನ್ನು ತೆರವು ಮಾಡಲು ಮುಖ್ಯಮಂತ್ರಿ ಭೂಪೇಂದ್ರ ಪಟೇಲ ನಿರ್ಧರಿಸಿದ್ದಾರೆ ಎಂದು ಸರಕಾರ ಪ್ರಕಟಣೆಯಲ್ಲಿ ತಿಳಿಸಿದೆ.