ಬಾಂಗ್ಲಾದೇಶದಲ್ಲಿ ಮತ್ತೆ ಹಿಂದೂ ದೇವತೆಗಳ ಮೂರ್ತಿಗಳ ಧ್ವಂಸ!

ಢಾಕಾ (ಬಾಂಗ್ಲಾದೇಶ) – ಮೈಮನ್‌ಸಿಂಗ್ ಜಿಲ್ಲೆಯ ತಾರಕಂಡ ಉಪ-ಜಿಲ್ಲೆಯ ರಾಮಚಂದ್ರಪುರ ಗ್ರಾಮದ ನಾಥ್‌ಬಾರಿ ಕಾಳಿ ದೇವಸ್ಥಾನದಲ್ಲಿ, ಅಪರಿಚಿತ ವ್ಯಕ್ತಿಗಳು ರಾತ್ರಿಯ ಕತ್ತಲಲ್ಲಿ ಶ್ರೀ ಕಾಳಿಮಾತೆ ಮತ್ತು ಭಗವಾನ್ ಮಹಾದೇವ ಸೇರಿದಂತೆ ಒಟ್ಟು 4 ಮೂರ್ತಿಗಳನ್ನು ಧ್ವಂಸಗೊಳಿಸಿದ್ದಾರೆ. ಬೆಳಿಗ್ಗೆ ಪ್ರಾರ್ಥನೆಗಾಗಿ ದೇವಸ್ಥಾನಕ್ಕೆ ಬಂದಾಗ ಸ್ಥಳೀಯ ಹಿಂದೂ ಭಕ್ತರಿಗೆ ಈ ಘಟನೆ ತಿಳಿದುಬಂದಿದೆ. ಸ್ಥಳೀಯ ಹಿಂದೂ ಸಮುದಾಯವು ಈ ಪ್ರಕರಣದ ತನಿಖೆ ನಡೆಸಿ ಅಪರಾಧಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದೆ.

ಈ ಘಟನೆಯನ್ನು ‘ಬಾಂಗ್ಲಾದೇಶ ಮೈನಾರಿಟಿ ವಾಚ್’ ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ‘ಈ ಪ್ರಕರಣದಲ್ಲಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.

(ಈ ಛಾಯಾಚಿತ್ರಗಳನ್ನು ಪ್ರಕಟಿಸುವುದರ ಹಿಂದೆ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶವಿಲ್ಲ, ಬದಲಿಗೆ ವಸ್ತುಸ್ಥಿತಿಯನ್ನು ಸಮಾಜದ ಮುಂದೆ ತರಬೇಕು ಎಂಬ ಉದ್ದೇಶದಿಂದಲೇ ಇವುಗಳನ್ನು ಪ್ರಕಟಿಸಲಾಗಿದೆ. – ಸಂಪಾದಕರು)

ಸಂಪಾದಕೀಯ ನಿಲುವು

ಹಿಂದೂಗಳ ಮೇಲಿನ ದೌರ್ಜನ್ಯಗಳನ್ನಲ್ಲದಿದ್ದರೂ, ಕನಿಷ್ಠ ದೇವತೆಗಳ ಮೇಲಿನ ಆಕ್ರಮಣಗಳನ್ನಾದರೂ ತಡೆಯಲು ಸರಕಾರ ಬಾಂಗ್ಲಾದೇಶ ಸರಕಾರದ ಮೇಲೆ ಒತ್ತಡ ಹೇರುತ್ತದೆಯೇ?