ನ್ಯಾಯಾಲಯದ ಬೇಸಿಗೆ ರಜೆಗಳ ನಂತರ ವಿಚಾರಣೆಯಾದರೆ ಆಕಾಶವೇನೂ ಕಳಚಿ ಬೀಳುವುದಿಲ್ಲ! : Supreme Court

ಶ್ರೀರಾಮ ಮಂದಿರದಲ್ಲಿನ ಕಾಣಿಕೆ ಹಣ ಕಳ್ಳತನ ಪ್ರಕರಣದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಣೆ, ಅರ್ಜಿದಾರರಿಗೆ ತರಾಟೆ!

ನವದೆಹಲಿ – ಶ್ರೀರಾಮ ಮಂದಿರದಲ್ಲಿನ ಕಾಣಿಕೆ ಹಣ ಕಳ್ಳತನದ ಪ್ರಕರಣದ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ದಾಖಲಿಸಲಾಗಿತ್ತು. ಈ ಅರ್ಜಿಯಲ್ಲಿ ಸಿಬಿಐ ಉಸ್ತುವಾರಿಯಲ್ಲಿ ತನಿಖೆ ನಡೆಸಬೇಕೆಂದು ಮನವಿ ಮಾಡಲಾಗಿತ್ತು; ಆದರೆ ಸುಪ್ರೀಂ ಕೋರ್ಟ್ ಈ ಪ್ರಕರಣದ ತುರ್ತು ವಿಚಾರಣೆ ನಡೆಸಲು ನಿರಾಕರಿಸಿತು. ನ್ಯಾಯಾಲಯವು ಅರ್ಜಿದಾರರನ್ನು, ‘ಒಂದು ವೇಳೆ ಬೇಸಿಗೆಯ ರಜೆಯ ನಂತರ ನ್ಯಾಯಾಲಯದ ನಿಯಮಿತ ಕಲಾಪಗಳು ಪ್ರಾರಂಭವಾದಾಗ ಈ ಪ್ರಕರಣದ ವಿಚಾರಣೆ ನಡೆದರೆ, ಆಕಾಶವೇನೂ ಕಳಚಿ ಬೀಳುವುದಿಲ್ಲ, ಎಂದು ತರಾಟೆಗೆ ತೆಗೆದುಕೊಂಡಿದೆ. ನಿಮಗೇಕೆ ಇಷ್ಟೊಂದು ಗಡಿಬಿಡಿ? ನಿಗದಿತ ಪ್ರಕ್ರಿಯೆಯ ಪ್ರಕಾರವೇ ವಿಚಾರಣೆ ನಡೆಸಲಾಗುವುದು. ಈ ಅರ್ಜಿಯನ್ನು ಜುಲೈ ೧೨ ರಿಂದ ೧೭ ರ ವಾರದಲ್ಲಿ ಪರಿಗಣಿಸಲಾಗುವುದು’, ಎಂದು ಹೇಳುತ್ತಾ ತುರ್ತು ವಿಚಾರಣೆಯ ಮನವಿಯನ್ನು ತಿರಸ್ಕರಿಸಿತು.

ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಬ್ಬರು ವಕೀಲರ ಪರವಾಗಿ ಸಲ್ಲಿಸಲಾಗಿತ್ತು. ಉತ್ತರ ಪ್ರದೇಶ ಪೊಲೀಸರಿಂದ ನಡೆಯುತ್ತಿರುವ ತನಿಖೆಯ ಮೇಲೆ ನಂಬಿಕೆ ಇಡಲು ಸಾಧ್ಯವಿಲ್ಲ; ಏಕೆಂದರೆ ಪ್ರಮುಖ ಸಾಕ್ಷ್ಯಗಳನ್ನು ಸರಿಯಾಗಿ ಸುರಕ್ಷಿತವಾಗಿಡುತ್ತಿಲ್ಲ ಎಂದು ಈ ಅರ್ಜಿಯಲ್ಲಿ ತಿಳಿಸಲಾಗಿತ್ತು.