ಅಲಿಗಡ (ಉತ್ತರಪ್ರದೇಶ) ಇಲ್ಲಿಯ ಮಸೀದಿಯ ಸಮೀಪದಿಂದ ಹೋಗುತ್ತಿದ್ದ ಹಿಂದೂಗಳ ದಿಬ್ಬಣದ ಮೇಲೆ ಮೊಟ್ಟೆ ಎಸೆದರು !

ಜಿಲ್ಲೆಯ ಟಪ್ಪಲ ಇಲ್ಲಿ ನುರಪೂರ ಭಾಗದಲ್ಲಿ ಜುಲೈ ೭ ರಂದು ಹಿಂದೂ ಕುಟುಂಬದ ಇಬ್ಬರು ಯುವತಿಯರ ಮದುವೆ ದಿಬ್ಬಣವು ಶಾಹಿ ಮಸೀದಿಯ ಸಮೀಪದಿಂದ ಹೋಗುತ್ತಿರುವಾಗ ದಿಬ್ಬಣದಲ್ಲಿ ಸಹಭಾಗಿ ಆಗಿರುವವರ ಮೇಲೆ ಇಲ್ಲಿಯ ಮುಸಲ್ಮಾನರ ಮನೆಯ ಮೇಲಿಂದ ಮೊಟ್ಟೆ ಎಸೆಯಲಾಯಿತು

ರಾಜಸ್ಥಾನದ ಮನ್ಸೂರ ಅಲಿ ಎಂಬಾತನು ದಲಿತ ಯುವತಿಯ ಮೇಲೆ ೬ ವರ್ಷಗಳ ಕಾಲ ಬಲಾತ್ಕಾರ ನಡೆಸಿದ್ದಾನೆ !

ರಾಜಸ್ಥಾನದ ಟೋಂಕ ಜಿಲ್ಲೆಯ ಮೇಹಂದವಾಸ ಭಾಗದ ಓರ್ವ ಯುವತಿಯ ಮೇಲೆ ಮನ್ಸೂರ ಅಲಿ ಎಂಬ ಮುಸಲ್ಮಾನ ೬ ವರ್ಷಗಳಿಂದ ಬಲಾತ್ಕಾರ ನಡೆಸಿದ್ದಾನೆ. ಅವನು ಸಂತ್ರಸ್ತೆಯ ಅಶ್ಲೀಲ ವಿಡಿಯೋ ತಯಾರಿಸಿ ಆಕೆಗೆ ‘ಬ್ಲಾಕ್‌ಮೇಲ್’ ಮಾಡುತ್ತಾ ಆಕೆಯ ಮೇಲೆ ಬಲಾತ್ಕಾರ ನಡೆಸಿದ್ದಾನೆ.

ಮಧ್ಯಪ್ರದೇಶದ ಒಂದು ಮಹಾವಿದ್ಯಾಲಯದಲ್ಲಿನ ವಸತಿಗೃಹದಲ್ಲಿ ಹನುಮಾನ ಚಾಲಿಸಾದ ಸಾಮೂಹಿಕ ಪಠಣ

ಸಿಹೊರ ಜಿಲ್ಲೆಯ ‘ವೆಲ್ಲೋರ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಾಜಿ’ ಯ ವಸತಿಗೃಹದಲ್ಲಿ ಹನುಮಾನ ಚಾಲಿಸಾ ಸಾಮೂಹಿಕ ಪಠಣ ಮಾಡಿದ್ದರಿಂದ ಮಹಾವಿದ್ಯಾಲಯದ ಆಡಳಿತವು ೭ ವಿದ್ಯಾರ್ಥಿಗಳಿಗೆ ಪ್ರತಿಯೊಬ್ಬರಿಗೆ ೫ ಸಾವಿರ ರೂಪಾಯಿ ದಂಡ ವಿಧಿಸಿದೆ.

ಸ್ಥಳೀಯ ಹಿಂದುಗಳಿಗೆ ನೌಕರಿಯಲ್ಲಿ ೫೦% ಮೀಸಲಾತಿ ನೀಡಲಿಲ್ಲವೆಂದರೆ ಕಂಪನಿ ಮುಚ್ಚಿ ಬಿಡುವೆವು.

ಇಲ್ಲಿಯ ಪ್ರಸಿದ್ಧ ಔಷಧಿ ನಿರ್ಮಿಸುವ ಹಮ್‌ದರ್ದ ಕಂಪನಿಯಲ್ಲಿ ಸ್ಥಳೀಯ ಹಿಂದೂಗಳಿಗೆ ೫೦% ಮೀಸಲಾತಿ ನೀಡುವ ಮನವಿ ಇಲ್ಲಿ ನಡೆದಿರುವ ಮಹಾಪಂಚಾಯತಿಯಲ್ಲಿ ಮಾಡಲಾಯಿತು. ಏನಾದರೂ ಈ ಮನವಿಯನ್ನು ತಳ್ಳಿಹಾಕಿದರೆ ಆಗ ಕಂಪನಿ ಮುಚ್ಚಲಾಗುವುದು, ಎಂಬ ಎಚ್ಚರಿಕೆ ಮಹಾಪಂಚಾಯತಿಯಿಂದ ನೀಡಲಾಗಿದೆ.

ಕಾಳಿಯಂತಹ ಚಿತ್ರ ತಯಾರಿಸುವವರ ಶಿರಚ್ಛೇದ ಮಾಡುವವರಿಗೆ ೨೦ ಲಕ್ಷ ರೂಪಾಯಿ ನೀಡುವೆ !

‘ಕಾಳಿ’ಯಂತಹ ಚಿತ್ರಗಳ ಮೂಲಕ ಹಿಂದೂ ಧರ್ಮಕ್ಕೆ ಅಪಕೀರ್ತಿ ತರುವ ಅಂತಾರಾಷ್ಟ್ರೀಯ ಷಡ್ಯಂತ್ರ ನಡೆದಿದೆ. ಕಾಳಿಮಾತೆಯ ಅವಮಾನ ಮಾಡಿದ್ದಾರೆ. ನಿರಂಜನೀ ಆಖಾಡಾದ ಸಂತನಾಗಿರುವ ನಾನು ಘೋಷಿಸುವುದೇನೆಂದರೆ, ಇಂತಹ ಚಲನಚಿತ್ರ ತೆಗೆದಿರುವವರ ಶಿರಚ್ಛೇದ ಮಾಡುವವನಿಗೆ ನಾನು ೨೦ ಲಕ್ಷ ರೂಪಾಯಿ ನೀಡುವೇನು’

ಅಮರನಾಥದಲ್ಲಿ ಮೇಘಸ್ಫೋಟದಿಂದ ಸ್ವಲ್ಪದರಲ್ಲಿ ಪಾರಾದ ಶಾಸಕ ಟಿ. ರಾಜಾಸಿಂಗ ಮತ್ತು ಕುಟುಂಬದವರು !

ಅಮರನಾಥ ಗುಹೆಯ ತಪ್ಪಲಿನಲ್ಲಿರುವ ಯಾತ್ರಾಸ್ಥಳದ ಬಳಿ ಜುಲೈ ೮ ರಂದು ಸಂಭವಿಸಿದ ಮೇಘಸ್ಫೋಟದಲ್ಲಿ ತೆಲಂಗಾಣದ ಪ್ರಖರ ಹಿಂದುತ್ವನಿಷ್ಠ ನೇತಾರ ಹಾಗೂ ಬಿಜೆಪಿ ಶಾಸಕ ಶ್ರೀ ಟಿ ರಾಜಾಸಿಂಗರವರ ಕುಟುಂಬ ಸಿಲುಕಿಕೊಂಡಿತ್ತು. ಅವರು ಬಿಕ್ಕಟ್ಟಿನಿಂದ ಸ್ವಲ್ಪದರಲ್ಲೇ ಪಾರಾದರು.

ಹಿಂದೂ ದೇವತೆಗಳಲ್ಲಿ ನಂಬಿಕೆಯಿರುವ ಹಿಂದೂಯೇತರರು ದೇವಸ್ಥಾನಗಳಿಗೆ ಹೋಗುವುದನ್ನು ತಡೆಯಲು ಸಾಧ್ಯವಿಲ್ಲ! – ಮದ್ರಾಸ ಉಚ್ಚ ನ್ಯಾಯಾಲಯ

ಇತರ ಧರ್ಮದ ವ್ಯಕ್ತಿಯೊಬ್ಬರು ಹಿಂದೂ ದೇವತೆಯ ಮೇಲೆ ನಂಬಿಕೆಯಿಟ್ಟು ದೇವತೆಯನ್ನು ಭೇಟಿ ಮಾಡಲು ಬಯಸಿದರೆ ಅವನನ್ನು ಆ ದೇವತೆಯ ದೇವಾಲಯಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಲು ಅಥವಾ ನಿಷೇಧಿಸಲು ಆಗುವುದಿಲ್ಲ ಎಂದು ಮದ್ರಾಸ ಉಚ್ಚ ನ್ಯಾಯಾಲಯ ಒಂದು ಮನವಿಯ ಬಗ್ಗೆ ಆಲಿಕೆ ನಡೆಸಿ ತೀರ್ಪು ನೀಡಿದೆ.

ದೆಹಲಿಯ ಫತೆಪುರಿ ಮಸೀದಿಯ ಶಾಹಿ ಇಮಾಮಗೆ ಕೊಲೆ ಬೆದರಿಕೆ

ಇಲ್ಲಿಯ ಫತೆಪುರಿ ಮಸೀದಿಯ ಶಾಹಿ ಇಮಾಮ ಮುಫ್ತಿ ಮುಕರ್ರಾಮ ಅವರಿಗೆ ದೂರವಾಣಿ ಮೂಲಕ ಜೀವ ಬೆದರಿಕೆ ಹಾಕಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ೪ ಬೆದರಿಕೆಗಳು ಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಒಪ್ಪಿಗೆಯಿಂದ ಶಾರೀರಿಕ ಸಂಬಂಧವನ್ನಿಡುವುದು ಬಲಾತ್ಕಾರವಲ್ಲ ! – ಕೇರಳ ಉಚ್ಚ ನ್ಯಾಯಾಲಯ

ಆರೋಪಿ ನ್ಯಾಯವಾದಿ ನವನೀತ ನಾಥ (ವಯಸ್ಸು ೨೯)ಇವರು ಓರ್ವ ಮಹಿಳಾ ನ್ಯಾಯವಾದಿಗೆ ವಿವಾಹದ ಆಶ್ವಾಸನೆಯನ್ನು ನೀಡಿ ಆಕೆಯ ಮೇಲೆ ವಿವಿಧ ಕಡೆಗಳಲ್ಲಿ ಬಲಾತ್ಕಾರ ಮಾಡಿರುವ ಹಾಗೂ ಅನಂತರ ಇನ್ನೊಂದು ಮಹಿಳೆಯೊಂದಿಗೆ ವಿವಾಹವಾಗುವ ನಿರ್ಣಯ ತೆಗೆದುಕೊಂಡಿರುವುದು ಈ ಆರೋಪವಾಗಿದೆ.

‘ನನ್ನ ಕಾಳಿ ಮಾತೆಯು ಹಿಂದುತ್ವವನ್ನು ಧ್ವಂಸಗೊಳಿಸುತ್ತಾಳೆ !’

‘ಕಾಲೀ’ ಮಾಹಿತಿ ಚಿತ್ರದ ನಿರ್ಮಾಪಕರಾದ ಲೀನಾ ಮಣೀಮೇಕಲಯಿಯವರು ಹೊಸ ಟ್ವೀಟ್‌ ಮಾಡಿದ್ದಾರೆ. ಅದರಲ್ಲಿ ಅವರು ‘ನನ್ನ ಕಾಲಿಯು ’ಕ್ವೀರ; (ವಿಚಿತ್ರ) ಇದ್ದಾಳೆ. ಆಕೆಯು ಒಂದು ಮುಕ್ತ ಆತ್ಮವಾಗಿದ್ದಾಳೆ. ಅದು ಪುರುಷಪ್ರಾಧಾನ್ಯತೆಯ ಮೇಲೆ ಉಗುಳುತ್ತಾಳೆ.