ಸಾಮಾಜಿಕ ಜಾಲತಾಣಗಳಲ್ಲಿ ಜಿಹಾದಿ ಭಯೋತ್ಪಾದಕ ಸಂಘಟನೆಗಳ ಸಾವಿರಾರು ಖಾತೆಗಳು !

ಶೇ. ೪೦ರಷ್ಟು ಭಯೋತ್ಪಾದಕರ ನೇಮಕಾತಿಯ ಮಾಧ್ಯಮ !

ಕೋಟ್ಯಂತರ ರೂಪಾಯಿಗಳನ್ನೂ ಸಂಗ್ರಹಿಸುತ್ತಾರೆ !

ಹೊಸ ದೆಹಲಿ : ಇಸ್ಲಾಮಿಕ್ ಸ್ಟೇಟ್ ಅಂದಾಜು ೭೦,೦೦೦ ಟ್ವಿಟರ್ ಖಾತೆಗಳನ್ನು ಹೊಂದಿದ್ದು, ತಲಾ ೧ ಸಾವಿರ ‘ಫಾಲೊಅರ್ಸ್’ಗಳನ್ನು ಹೊಂದಿದೆ ಎಂದು ‘ಬ್ರೂಕಿಂಗ್ಸ್ ಸೆಂಟರ್ ಫಾರ್ ಮಿಡಲ್ ಈಸ್ಟ್ ಪಾಲಿಸಿ’ಯು ವರದಿ ಮಾಡಿದೆ. ಇದರಿಂದ ಕೋಟ್ಯಂತರ ಜನರು ಕೇವಲ ಒಂದು ಇಸ್ಲಾಮಿಕ ಸ್ಟೆಟ್‌ನೊಂದಿಗೆ ಸೇರಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಅಲ್ಲದೆ ೨೦೧೮ ರ ಒಂದು ವರದಿಯ ಪ್ರಕಾರ, ಇಸ್ಲಾಮಿಕ್ ಸ್ಟೇಟ್ ೯೬ ದೇಶಗಳಲ್ಲಿ ಫೇಸ್‌ಬುಕ್‌ನಲ್ಲಿ ಒಟ್ಟು ೧ ಸಾವಿರ ಖಾತೆಗಳನ್ನು ಹೊಂದಿದೆ. ಇಸ್ಲಾಮಿಕ್ ಸ್ಟೇಟ್‌ನಲ್ಲಿ ಶೇ. ೪೦ರಷ್ಟು ವಿದೇಶಿ ಭಯೋತ್ಪಾದಕರು ಸಾಮಾಜಿಕ ಮಾಧ್ಯಮಗಳ ಮೂಲಕ ಸೇರುತ್ತಾರೆ. ಸೈಬರ್ ಜಗತ್ತಿನ ಮೇಲೆ ನಿಗಾ ಇಡಲು ಯಾವುದೇ ಜಾಗತಿಕ ವ್ಯವಸ್ಥೆ ಇಲ್ಲದಿರುವುದರಿಂದ ವಿವಿಧ ದೇಶಗಳಲ್ಲಿರುವ ಸಣ್ಣ ಮತ್ತು ದೊಡ್ಡ ಭಯೋತ್ಪಾದಕ ಸಂಘಟನೆಗಳು ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳನ್ನು ಸಂಪರ್ಕಿಸಲು ಸುಲಭವಾಗುತ್ತದೆ.

೧. ‘ಜಾಗತಿಕ ಭಯೋತ್ಪಾದನೆ ಸೂಚ್ಯಂಕ ೨೦೨೨’ ರ ಪ್ರಕಾರ, ೨೦೨೧ ರಲ್ಲಿ ನಡೆದ ವಿಶ್ವದಾದ್ಯಂತ ನಡೆದ ಭಯೋತ್ಪಾದಕ ದಾಳಿಗಳ ಶೇ. ೨೯ ರಷ್ಟು ದಾಳಿಗಳಿಗೆ ಇಸ್ಲಾಮಿಕ್ ಸ್ಟೇಟ್ ಹೊಣೆಯಾಗಿದೆ.

೨. ತಾಲಿಬಾನ್‌ ಕೂಡ ಸಂಚಾರವಾಣಿಗಳಲ್ಲಿ ಬಾಂಬ್ ದಾಳಿಯ ವೀಡಿಯೋಗಳನ್ನು ತಯಾರಿಸಿ ಟ್ವಿಟರ್‌ಗೆ ಅಪ್‌ಲೋಡ್ ಮಾಡುತ್ತಾರೆ. ಅದರ ಮೂಲಕ ನೇಮಕಾತಿ ಮತ್ತು ನಿಧಿ ಸಂಗ್ರಹಿಸುವ ಕೆಲಸ ನಡೆಯುತ್ತದೆ. ‘ಯುಕೆ ಟೈಮ್ಸ್’ನ ವರದಿಯ ಪ್ರಕಾರ, ತಾಲಿಬಾನ್ ಯೂಟ್ಯೂಬ್, ಫೇಸ್‌ಬುಕ್, ವಾಟ್ಸ್ ಅಪ್ ಮತ್ತು ಟೆಲಿಗ್ರಾಮ್‌ಗಳಲ್ಲಿ ವೀಡಿಯೋಗಳನ್ನು ಅಪ್‌ಲೋಡ್ ಮಾಡುವ ಮೂಲಕ ‘ಮರ್ಸಿಡಿಸ್’ನಂತಹ ದೊಡ್ಡ ಸಂಸ್ಥೆಗಳ ಜಾಹಿರಾತುಗಳನ್ನು ಪಡೆದು ಈ ಮೂಲಕ ತಿಂಗಳಿಗೆ ಕೋಟ್ಯಂತರ ರೂಪಾಯಿಗಳನ್ನು ಗಳಿಸುತ್ತಿದೆ.

೩. ಭಯೋತ್ಪಾದಕ ಸಂಘಟನೆಗಳಿಗೆ ಹಣ ಪೂರೈಸುವ ಹಜ್ಜಾಜ್ ಫಹದ್ ಅಲ್-ಅಜ್ಮಿ ತನ್ನ ೧೭ ಲಕ್ಷ ಫಾಲೊಅರ್ಸ್‌ಗಳಿಗೆ ಭಯೋತ್ಪಾದಕ ಚಟುವಟಿಕೆಗಳಿಗೆ ಧನಸಹಾಯ ನೀಡುವಂತೆ ಟ್ವಿಟರ್‌ನಲ್ಲಿ ಮನವಿ ಮಾಡಿದ್ದ.

೪. ಫೆಬ್ರವರಿ ೨೦೨೦ ರಲ್ಲಿ ಅಮೇರಿಕಾದ ಸಂಸ್ಥೆ ‘ಬ್ಲ್ಯಾಕ್ ಬರ್ಡ್’ ನಡೆಸಿದ ಅಧ್ಯಯನದ ಪ್ರಕಾರ, ಭಯೋತ್ಪಾದನೆಯನ್ನು ಪ್ರಚೋದಿಸಲು ೪೭ ಭಾಷೆಗಳಲ್ಲಿ ಒಟ್ಟು ೯ ಲಕ್ಷ ೨೭ ಸಾವಿರದ ೯೦೮ ಟ್ವೀಟ್‌ಗಳನ್ನು ಬಳಸಲಾಗಿತ್ತು.

೫. ಮಾರ್ಚ್ ೨೦೧೯ ರಲ್ಲಿ ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ನಲ್ಲಿ ೫೧ ಜನರ ಹತ್ಯೆಯನ್ನು ಫೇಸ್‌ಬುಕ್‌ನಲ್ಲಿ ನೇರ ಪ್ರಸಾರ ಮಾಡಲಾಗಿತ್ತು. ಜೊತೆಗೆ ಕಳೆದ ತಿಂಗಳು ಉದಯಪುರದಲ್ಲಿ ಕನ್ಹೈಯ್ಯಾಲಾಲ್ ಅವರ ಶಿರಚ್ಛೇದದ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸಿ ಜನರನ್ನು ಕೆರಳಿಸುವ ಪ್ರಯತ್ನ ನಡೆದಿತ್ತು.

ಸಂಪಾದಕೀಯ ನಿಲುವು

ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಇದು ಕಾಣುವುದಿಲ್ಲವೇ ? ಅಥವಾ ಈ ಭಯೋತ್ಪಾದಕ ಸಂಘಟನೆಗಳಿಗೆ ರಹಸ್ಯ ಬೆಂಬಲವಿದೆಯೇ ?

ಹಿಂದೂಗಳ ಸಂಘಟನೆಗಳು ಮತ್ತು ಮುಖಂಡರ ಖಾತೆಗಳನ್ನು ನಿಷೇಧಿಸುವ ಫೇಸ್ ಬುಕ್, ಟ್ವಿಟರ್ ನಂತಹ ಸಂಸ್ಥೆಗಳು ಭಯೋತ್ಪಾದಕರ ಬಗ್ಗೆ ನಿಷ್ಕ್ರಿಯವಾಗಿರುವುದೇಕೆ ಎಂದು ಉತ್ತರಿಸುವರೇ ?