ಪ್ರಧಾನಿ ಮತ್ತು ಗೃಹ ಸಚಿವರನ್ನು ಗುಂಡಿಕ್ಕಿ ಕೊಲ್ಲುವ ಹೇಳಿಕೆ ನೀಡಿದ ಮೌಲಾನ ವಿರುದ್ಧ ಕಾನೂನು ಕ್ರಮಕೈಗೊಳ್ಳಿ !

ಜುಲೈ ೨ ರಂದು ಮುಸಲ್ಮಾನರು ಏಕರೂಪ ನಾಗರೀಕ ಸಂಹಿತೆಯ ವಿರುದ್ಧ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಒಬ್ಬ ಮೌಲ್ವಿಯು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ ಶಾಹ ಇವರನ್ನು ಕೊಲ್ಲುವಂತೆ ಕರೆ ನೀಡಿದನು. ಹಾಗೆಯೇ ಕಾನೂನಿನ ವಿರುದ್ಧವಾಗಿ ರಸ್ತೆಗಿಳಿಯುವಂತೆಯೂ ಕರೆ ನೀಡಿದನು.

ಬೆಳಗಾವಿಯ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ

ಜೈನಮುನಿ ಕಾಮಕುಮಾರ ನಂದಿ ಮಹಾರಾಜರು ಜುಲೈ 5 ರಿಂದ ನಾಪತ್ತೆಯಾಗಿದ್ದರು. ಇದೀಗ ಅವರ ಶವ ಪತ್ತೆಯಾಗಿದೆ. ಮುನಿಗಳ ಹತ್ಯೆ ಮಾಡಿ ಅವರ ಶವವನ್ನು ಎಸೆದಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದ್ದು, ಅವರು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಹತ್ಯೆಯ ಹಿಂದಿನ ಕಾರಣ ಇದುವರೆಗೂ ತಿಳಿದುಬಂದಿಲ್ಲ.

ಪನವೆಲ ರೈಲು ನಿಲ್ದಾಣದಲ್ಲಿ ೫ ಮುಸ್ಲಿಮರಿಂದ ನಮಾಜ್ !

ಪನವೆಲ ರೈಲು ನಿಲ್ದಾಣದ ಬಳಿ ಪ್ರಯಾಣಿಕರ ಹೋಗು ಬರುವುವ ಮಾರ್ಗದಲ್ಲಿ ೫ ಮುಸಲ್ಮಾನರು ನಮಾಜ ಮಾಡಿದರು. ಈ ಸಂದರ್ಭದಲ್ಲಿನ ಒಂದು ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ.

`ಬಿ.ಬಿ.ಸಿ’ಯಿಂದ ಫ್ರಾನ್ಸ ಹಿಂಸಾಚಾರವನ್ನು ಪರೋಕ್ಷವಾಗಿ ಬೆಂಬಲಿಸುವ ವಾರ್ತೆ ಮುದ್ರಣ !

`ಬಿಬಿಸಿ’ಯು ಫ್ರಾನ್ಸನಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಅಲ್ಲಿಯ ರಾಜಕಾರಣಿಗಳೇ ಹೊಣೆಗಾರರು ಎಂದು ವರದಿಯನ್ನು ಪ್ರಕಟಿಸಿದೆ. `ಫ್ರಾನ್ಸನ ಗಲಭೆ : ರಾಜಕಾರಣಿಗಳಿಗೆ ನಾವು ಯಾರೂ ಅಲ್ಲ’ ಈ ಶೀರ್ಷಿಕೆಯಡಿಯಲ್ಲಿ ಪ್ರಕಟವಾಗಿರುವ ಸುದ್ದಿಯಲ್ಲಿ ಫ್ರಾನ್ಸನ ಮಾರ್ಸೆಲಿಸ್ ನಗರದ ಅಮಿನೆ ಹೆಸರಿನ 19 ವರ್ಷದ ಮುಸಲ್ಮಾನ ಹುಡುಗನ ವ್ಯಥೆಯನ್ನು ಮಂಡಿಸಿದೆ.

ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರಗೀತೆಯ ಸಮಯದಲ್ಲಿ ಎದ್ದು ನಿಲ್ಲದ ೧೪ ಜನರ ಬಂಧನ

ಜೂನ್ ೨೫ ರಂದು ರಾಜ್ಯದ ಉಪ ರಾಜ್ಯಪಾಲ ಮನೋಜ ಸಿಂಹ ಇವರು ಉಪಸ್ಥಿತರಿದ್ದ ಒಂದು ಕಾರ್ಯಕ್ರಮದಲ್ಲಿ ರಾಷ್ಟಗೀತೆ ನುಡಿಸುವಾಗ ಕೆಲವು ಜನರು ಎದ್ದು ನಿಲ್ಲಲಿಲ್ಲ. ಇಂತಹವರ ತನಿಖೆ ನಡೆಸಿ ೧೪ ಜನರನ್ನು ಬಂಧಿಸಲಾಗಿದೆ.

ನವಸಾರಿ (ಗುಜರಾತ) ಇಲ್ಲಿ `ಲವ್ ಜಿಹಾದ್’ನ ಬೇರೆ ರೀತಿಯ ಪ್ರಕರಣ ಬಹಿರಂಗ !

ರಾಜ್ಯದ ನವಸಾರಿ ಜಿಲ್ಲೆಯಲ್ಲಿ ಲವ್ ಜಿಹಾದ್ ನ ಒಂದು ವಿಚಿತ್ರ ಪ್ರಕರಣ ಬಹಿರಂಗವಾಗಿದೆ. ಈ ಪ್ರಕರಣದಲ್ಲಿ ಕುಖ್ಯಾತ ಗೂಂಡಾ ಮತ್ತು ವಿವಾಹಿತ ಅಸೀಮ್ ಶೇಖ್ ಓರ್ವ ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಯಲ್ಲಿ ಸೆಳೆದು ಅವಳೊಂದಿಗೆ ವಿವಾಹವಾಗುವ ಆಶ್ವಾಸನೆಯನ್ನು ನೀಡಿ ಅವಳ ಅಶ್ಲೀಲ ಛಾಯಾಚಿತ್ರಗಳನ್ನು ತೆಗೆದನು.

ಕೇದಾರನಾಥ ದೇವಸ್ಥಾನದ ಪರಿಸರದಲ್ಲಿ ಪ್ರೇಯಸಿಯಿಂದ ಪ್ರೇಮಿಗೆ ಮದುವೆ ಪ್ರಸ್ತಾಪ ಮಾಡುವ ವಿಡಿಯೋ ವೈರಲ್ !

ಇಂತಹವರ ವಿರುದ್ಧ ಕ್ರಮ ಕೈಗೊಳ್ಳಿ ! – ದೇವಸ್ಥಾನದ ಆಡಳಿತದಿಂದ ಪೊಲೀಸರಿಗೆ ಪತ್ರ

ಆದಿವಾಸಿ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಪ್ರವೇಶ ಶುಕ್ಲಾನ ಬಂಧನ

ಮಧ್ಯಪ್ರದೇಶದಲ್ಲಿನ ಸಿಧಿ ಜಿಲ್ಲೆಯಲ್ಲಿ ಆದಿವಾಸಿ ವ್ಯಕ್ತಿಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದ ಅಡಿಯಲ್ಲಿ ಪ್ರವೇಶ ಶುಕ್ಲಾ ಇತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಹೇಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಇರಾನನಲ್ಲಿ ೨೦೨೩ ರ ಮೊದಲು ೬ ತಿಂಗಳಲ್ಲಿ ೩೫೪ ಜನರಿಗೆ ಗಲ್ಲು ಶಿಕ್ಷೆ !

ಇರಾನಿನಲ್ಲಿ ಕಳೆದ ಆರು ತಿಂಗಳಲ್ಲಿ ೩೫೪ ಜನರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ೨೦೨೨ ರಲ್ಲಿ ಮೊದಲ ಆರು ತಿಂಗಳಲ್ಲಿ ೨೬೧ ಜನರಿಗೆ ನೇಣುಗಂಬಕ್ಕೆ ಏರಿಸಲಾಗಿದ್ದರೇ ಇಡೀ ವರ್ಷದಲ್ಲಿ ಈ ಸಂಖ್ಯೆ ೫೮೨ ರಷ್ಟು ಆಗಿತ್ತು. ಮೊದಲ ಆರ ತಿಂಗಳ ತುಲನೆಯಲ್ಲಿ ಈ ವರ್ಷದ ಸಂಖ್ಯೆ ಶೇಕಡಾ ೩೬ ಕ್ಕಿಂತಲೂ ಹೆಚ್ಚಾಗಿದೆ, ಎಂದು ನಾರ್ವೇಯಲ್ಲಿನ, ‘ಇರಾನ್ ಹ್ಯೂಮನ್ ರೈಟ್ಸ್’ ಹೆಸರಿನ ಸಂಘಟನೆಯು ಮಾಹಿತಿ ನೀಡಿದೆ.

ಬಂಗಾಳದಲ್ಲಿ ಭಾಜಪದ ಪದಾಧಿಕಾರಿಯ ಹತ್ಯೆ

ಬಂಕಿಮ ಹಂಸದ ಎಂಬ ೪೮ ವರ್ಷದ ಭಾಜಪದ ಪದಾಧಿಕಾರಿಯ ಶವ ಪತ್ತೆಯಾಗಿದೆ. ಅವನ ಹತ್ಯೆ ನಡೆದಿರುವುದಾಗಿ ಪೊಲೀಸರು ಹೇಳಿದ್ದಾರೆ. ಬಂಕಿಮ್ ಇವರು ಕೆಂದಡಿ ಗ್ರಾಮದಲ್ಲಿನ ಒಂದು ಚುನಾವಣಾ ಕ್ಷೇತ್ರದ ಭಾಜಪದ ಕಾರ್ಯದರ್ಶಿ ಆಗಿದ್ದರು.