Kanpur Mayor Reopened Hindu Temples : ಉತ್ತರ ಪ್ರದೇಶದಲ್ಲಿನ ಕಾನ್ಪುರದ ಮಹಿಳಾ ಮೇಯರ್ ನಿಂದ ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮುಚ್ಚಿದ್ದ 3 ದೇವಸ್ಥಾನಗಳನ್ನು ತೆರೆದರು !

ಕಾನ್ಪುರ (ಉತ್ತರ ಪ್ರದೇಶ) – ಕೆಲವು ದಿನಗಳ ಹಿಂದೆ, ಕಾನ್ಪುರದ ಮೇಯರ್ ಪ್ರಮೀಳಾ ಪಾಂಡೆ ಅವರು ನಗರದ ಮುಸ್ಲಿಂ ಬಾಹುಳ್ಯ ಪ್ರದೇಶಗಳಲ್ಲಿ ಹಲವು ವರ್ಷಗಳಿಂದ ಮುಚ್ಚಿದ್ದ ಹಿಂದೂ ದೇವಸ್ಥಾನಗಳನ್ನು ಪತ್ತೆ ಮಾಡಿದ್ದರು. ಅವರಿಗೆ ಅಂತಹ 5 ದೇವಸ್ಥಾನಗಳು ಕಂಡುಬಂದವು‌. ಇಡೀ ನಗರದಲ್ಲಿ 100 ಕ್ಕೂ ಹೆಚ್ಚು ದೇವಸ್ಥಾನಗಳಿವೆ ಎಂದು ಆಡಳಿತವು ಅಂಕಿಅಂಶಗಳನ್ನು ನೀಡಿತ್ತು. ಜನವರಿ 6 ರಂದು ಮೇಯರ್ ಪಾಂಡೆ ಅವರು ಮುಸ್ಲಿಂ ಬಾಹುಳ್ಯವಿರುವ ಹಿರಾಮಣಪುರವಾ ಪ್ರದೇಶಕ್ಕೆ ತೆರಳಿ 3 ಶಿವ ದೇವಸ್ಥಾನಗಳನ್ನು ತೆರೆದರು.  ಈ ವೇಳೆ ಪೊಲೀಸರೂ ಅವರ ಜತೆಗಿದ್ದರು. ಈ ಮೂರು ದೇವಸ್ಥಾನಗಳೂ ಹಲವು ವರ್ಷಗಳಿಂದ ಮುಚ್ಚಿತ್ತು. ಅವು ಭಗ್ನಗೊಂಡಿದೆ. ದೇವಸ್ಥಾನದಲ್ಲಿನ ಮೂರ್ತಿಗಳು ಭಗ್ನಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಶಿವಲಿಂಗ ಕಾಣೆಯಾಗಿದೆ. ಇನ್ನು ಈ ದೇವಸ್ಥಾನಗಳನ್ನು ಸ್ವಚ್ಛಗೊಳಿಸಿ ಭದ್ರತೆ ಒದಗಿಸಲಾಗುವುದು ಎಂದು ಮೇಯರ್ ತಿಳಿಸಿದರು. ಅಲ್ಲದೆ ಅತಿಕ್ರಮಣ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಮೇಯರ್ ಅವರ ಅಭಿಯಾನಕ್ಕೆ ಮುಸ್ಲಿಂ ಧರ್ಮಗುರುಗಳಿಂದ ವಿರೋಧ

ಈ ಹಿಂದೆ ಮುಸ್ಲಿಂ ಧರ್ಮಗುರುಗಳು ಮೇಯರ್‌ನಿಂದ ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಲ್ಲಿ ದೇವಸ್ಥಾನಗಳನ್ನು ಹುಡುಕುವ ಅಭಿಯಾನವನ್ನು ನಿಷೇಧಿಸುವಂತೆ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದರು. ಈ ಕುರಿತು ಮೇಯರ್ ಪ್ರಮೀಳಾ ಪಾಂಡೆ ಮಾತನಾಡಿ, ನಾನು ಏನೇ ಮಾಡಿದರೂ ಕಾನೂನಿನ ಚೌಕಟ್ಟಿನಲ್ಲಿ ಮಾಡುತ್ತಿದ್ದೇನೆ’, ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಕಾನ್ಪುರದ ಮಹಿಳಾ ಮೇಯರ್ ಪ್ರಮೀಳಾ ಪಾಂಡೆ ಅವರಿಂದ ಎಲ್ಲೆಡೆಯ ಆಡಳಿತಗಾರರು ಆದರ್ಶವನ್ನು ತೆಗೆದುಕೊಳ್ಳಬೇಕು ಮತ್ತು ಮುಸ್ಲಿಂ ಬಾಹುಳ್ಯ ಪ್ರದೇಶಗಳಲ್ಲಿ ಮುಚ್ಚಿರುವ ದೇವಸ್ಥಾನಗಳನ್ನು ತೆರೆದು ಸುರಕ್ಷಿತಗೊಳಿಸಬೇಕು !