ಮಹಾ ಕುಂಭ ಮೇಳದ ನಿಮಿತ್ತ ಗಂಗಾನದಿಯಲ್ಲಿ ಹೆಚ್ಚುವರಿ ನೀರು ಬಿಡುವ ಕಾರ್ಯ ಪ್ರಾರಂಭ !

ಪ್ರಯಾಗರಾಜ್ ಕುಂಭಮೇಳ 2025

ಪ್ರಯಾಗ್‌ರಾಜ್ – ಮಹಾಕುಂಭ ಮೇಳದ ಹಿನ್ನೆಲೆಯಲ್ಲಿ ತ್ರಿವೇಣಿ ಸಂಗಮಕ್ಕೆ ಬರುವ ಭಕ್ತರಿಗೆ ನದಿಯಲ್ಲಿ ಸ್ನಾನ ಮಾಡಲು ಅನುಕೂಲವಾಗುವಂತೆ ‘THDC (ತೆಹ್ರಿ ಹೈಡ್ರೊ ಡೆವಲಪ್‌ಮೆಂಟ್ ಕಾರ್ಪೊರೇಷನ್) ಪವಿತ್ರ ಗಂಗೆಯಲ್ಲಿ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲು ಪ್ರಾರಂಭಿಸಿದೆ. ಹೆಚ್ಚುವರಿ ನೀರನ್ನು ಬಿಡುಗಡೆ ಮಾಡುವಂತೆ ಉತ್ತರ ಪ್ರದೇಶದ ನೀರಾವರಿ ಇಲಾಖೆಯ ಬೇಡಿಕೆಯಂತೆ THDC ಈ ಬೇಡಿಕೆಯನ್ನು ಮಾಡಿದೆ. THDC ನೀಡಿದ ಮಾಹಿತಿಯ ಪ್ರಕಾರ, ದೇವಪ್ರಯಾಗದಿಂದ ಪ್ರಯಾಗರಾಜ್‌ವರೆಗೆ ಗಂಗಾ ನದಿಯ ಎಲ್ಲಾ ಘಾಟ್‌ಗಳಲ್ಲಿ ಸಾಕಷ್ಟು ನೀರು ಬಿಡಲಾಗಿದೆ.