Terrorist Pannu Threatens Mahakumbh Mela: ಅಮೇರಿಕಾ ಪುರಸ್ಕೃತ ಖಲಿಸ್ತಾನಿ ಭಯೋತ್ಪಾದಕ ಪನ್ನುವಿನಿಂದ ಮತ್ತೊಮ್ಮೆ ಮಹಾಕುಂಭಮೇಳಕ್ಕೆ ಬೆದರಿಕೆ !

ನ್ಯೂಯಾರ್ಕ್ (ಅಮೇರಿಕ) – ಪ್ರಯಾಗರಾಜ್‌ನಲ್ಲಿ ನಡೆಯುವ ಮಹಾಕುಂಭ ಮೇಳಕ್ಕೆ ಅಮೇರಿಕಾ ಪುರಸ್ಕೃತ ಖಲಿಸ್ತಾನಿ ಭಯೋತ್ಪಾದಕ ಮತ್ತು ನಿಷೇಧಿತ ಭಯೋತ್ಪಾದಕ ಸಂಘಟನೆ ‘ಸಿಖ್ ಫಾರ್ ಜಸ್ಟೀಸ್’ ನಾಯಕ ಗುರುಪತ್ವಂತ್ ಸಿಂಗ್ ಪನ್ನು ಮತ್ತೊಮ್ಮೆ ಬೆದರಿಕೆ ಹಾಕಿದ್ದಾರೆ. ಅವರು ವಿಡಿಯೋವಂದನ್ನು ಪ್ರಸಾರ ಮಾಡಿ ‘ಮಹಾಕುಂಭ ಪ್ರಯಾಗರಾಜ್ 2025 ರಣರಂಗವಾಗಲಿದೆ’ ಎಂದು ಬೆದರಿಕೆ ಹಾಕಿದ್ದಾನೆ. ಹಾಗೆಯೇ ಲಕ್ಷ್ಮಣಪುರಿ (ಲಖನೌ) ಮತ್ತು ಪ್ರಯಾಗರಾಜ್‌ನಲ್ಲಿ ಖಲಿಸ್ತಾನಿ ಮತ್ತು ಕಾಶ್ಮೀರ ಧ್ವಜಗಳನ್ನು ಹಾರಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ. ಜನವರಿ 13 ರಿಂದ ಫೆಬ್ರವರಿ 26 ರವರೆಗೆ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭಮೇಳ ನಡೆಯಲಿದೆ.