Delhi Congress Election Assurance : ದೆಹಲಿಯಲ್ಲಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಪ್ರತಿ ತಿಂಗಳು ೨ ಸಾವಿರದ ೫೦೦ ರೂಪಾಯಿ ನೀಡುವೆವು ! – ಕಾಂಗ್ರೆಸ್ ಆಶ್ವಾಸನೆ

ನವದೆಹಲಿ – ದೆಹಲಿಯಲ್ಲಿ ವಿಧಾನಸಭೆಯ ಚುನಾವಣೆ ನಡೆಯಲಿದೆ. ಆಮ್ ಆದ್ಮಿ ಪಕ್ಷವು ಮತ್ತೆ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಪ್ರತಿ ತಿಂಗಳು ೧ ಸಾವಿರ ರೂಪಾಯಿ ನೀಡುವ ಘೋಷಣೆ ಮಾಡಿದೆ. ಈಗ ಕಾಂಗ್ರೆಸ್ ಕೂಡ ಮಹಿಳೆಯರಿಗೆ ಪ್ರತಿ ತಿಂಗಳು ೨ ಸಾವಿರದ ೫೦೦ ರೂಪಾಯಿ ನೀಡುವ ‘ಪ್ಯಾರಿ ದೀದಿ ಯೋಜನೆ’ ಘೋಷಿಸಿದೆ.

ಕರ್ನಾಟಕದ ಕಾಂಗ್ರೆಸ್ ಸರಕಾರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇವರು, ದೆಹಲಿಯಲ್ಲಿ ಕಾಂಗ್ರೆಸ್ ಸರಕಾರ ರಚಿಸುವುದು ಮತ್ತು ನಾವು ಮಹಿಳೆಯರಿಗೆ ೨ ಸಾವಿರದ ೫೦೦ ರೂಪಾಯಿ ನೀಡುವೆವು’, ಇದರ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸ ಇದೆ. ಇದರ ನಿರ್ಣಯ ಸರಕಾರದ ಸಚಿವ ಸಂಪುಟದ ಮೊದಲನೆಯ ಸಭೆಯಲ್ಲಿ ತೆಗೆದುಕೊಳ್ಳುವೆವು’, ಎಂದು ಹೇಳಿದರು.

ಸಂಪಾದಕೀಯ ನಿಲುವು

ಜನರ ಹಣ ಜನರಿಗೆ ನೀಡಿ ಮತ ಪಡೆಯುವ ಈ ನೂತನ ಪದ್ಧತಿ ಸಂಪೂರ್ಣ ದೇಶದಲ್ಲಿ ಆರಂಭವಾಗಿದ್ದು ಇದರ ಪರಿಣಾಮ ಅಭಿವೃದ್ಧಿ ಕಾರ್ಯದ ಮೇಲೆ ಆಗುತ್ತಿದೆ. ‘ಇದರಿಂದ ನಮ್ಮನ್ನು ವಂಚಿಸಲಾಗುತ್ತಿದೆ’, ಇದು ಜನರ ಗಮನಕ್ಕೆ ಬರುತ್ತಿಲ್ಲ, ಇದೇ ಎಲ್ಲಕ್ಕಿಂತ ದೊಡ್ಡ ದೌರ್ಭಾಗ್ಯವಾಗಿದೆ ! ಇಂತಹವರಿಂದ ಭಾರತೀಯ ಪ್ರಜಾಪ್ರಭುತ್ವ ಸುದೃಢಗೊಳ್ಳುವ ಬದಲು ರಾಜಕಾರಣಿಗಳಿಂದ ದುರ್ಬಲಗೊಳಿಸಲಾಗುತ್ತಿದೆ, ಇದು ಜನರ ಗಮನಕ್ಕೆ ಬಂದ ದಿನವೇ ಸುದಿನ !