Prayagraj Mahakumbh Mela 2025 : 36 ಬಾಂಬ್ ಪತ್ತೆ ತಂಡಗಳಿಂದ ಇಡೀ ಮಹಾಕುಂಭಕ್ಷೇತ್ರದ ಪರಿಶೀಲನೆ !

ಬಾಂಬ್ ಪತ್ತೆ ತಂಡಗಳಿಂದ ವಾಹನ ಪರಿಶೀಲನೆ

ಪ್ರಯಾಗರಾಜ್, ಜನವರಿ 7 (ಸುದ್ದಿ) – ಕುಂಭಮೇಳದ ವೇಳೆ ಮತಾಂಧ ಮುಸ್ಲಿಮರಿಂದ ರಕ್ತಪಾತ ಮಾಡುವ ಬೆದರಿಕೆಯ ಹಿನ್ನೆಲೆಯಲ್ಲಿ ಇಡೀ ಮಹಾಕುಂಭಕ್ಷೇತ್ರದಲ್ಲಿ ಬಾಂಬ್ ಪತ್ತೆ ಮತ್ತು ವಿಲೇವಾರಿ ತಂಡಗಳ ಮೂಲಕ ತಪಾಸಣೆ ನಡೆಸಲಾಗಿದೆ. ಮಹಾಕುಂಭ ಕ್ಷೇತ್ರದ ಎಲ್ಲ ಅಂಗಡಿ, ಅಖಾಡ ಮಂಟಪಗಳು, ವಾಹನಗಳು, ಮರಳು ದಿಬ್ಬ, ಕಸದ ತೊಟ್ಟಿಗಳು ಹೀಗೆ ಎಲ್ಲೆಂದರಲ್ಲಿ ಬಾಂಬ್ ಪತ್ತೆ ದಳ ತಪಾಸಣೆ ನಡೆಸುತ್ತಿದೆ. ನಿತ್ಯ 36 ಬಾಂಬ್ ಪತ್ತೆ ತಂಡಗಳಿಂದ ಪರಿಶೀಲನೆ ನಡೆಸಲಾಗುತ್ತಿದೆ.

ಪ್ರಸ್ತುತ ಮಹಾಕುಂಭ ಕ್ಷೇತ್ರದಲ್ಲಿ ಸಾವಿರಾರು ಅಂಗಡಿಗಳು, ನೂರಾರು ಆಶ್ರಮಗಳು ನಿರ್ಮಾಣವಾಗಿವೆ. ಇವೆಲ್ಲವನ್ನೂ ಬಾಂಬ್ ಸ್ಕ್ವಾಡ್ ಹಂತ ಹಂತವಾಗಿ ಪರಿಶೀಲಿಸುತ್ತಿದೆ. ಕುಂಭ ಕ್ಷೇತ್ರದ ವಿವಿಧೆಡೆ ತಾತ್ಕಾಲಿಕ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಕ್ಷಯವಟ, ಲೇಟೆ ಮಾರುತಿ, ನಾಗವಾಸುಕಿ ದೇವಸ್ಥಾನ, ತ್ರಿವೇಣಿ ಸಂಗಮ ಮುಂತಾದ ಪ್ರಮುಖ ಧಾರ್ಮಿಕ ಸ್ಥಳಗಳು ಸಿಸಿಟಿವಿ ಕ್ಯಾಮರಾ ಸಹಿತ 24 ಗಂಟೆ ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ.