Chhattisgarh Naxal Attack 8 Jawans Killed: ಛತ್ತೀಸ್‌ಗಢದಲ್ಲಿ ನಕ್ಸಲರಿಂದ ದಾಳಿ; 8 ಯೋಧರು ವೀರಗತಿ

ವಿಜಾಪುರ (ಛತ್ತೀಸಗಢ) – ಇಲ್ಲಿ ಜನವರಿ 6 ರಂದು ಮಧ್ಯಾಹ್ನ 2.15 ರ ಸುಮಾರಿಗೆ ನಕ್ಸಲ್ ಪೀಡಿತ ಪ್ರದೇಶವನ್ನು ಪರಿಶೀಲಿಸಿ ಪೊಲೀಸ್ ವಾಹನದಲ್ಲಿ ಹಿಂತಿರುಗುತ್ತಿದ್ದಾಗ ರಸ್ತೆಬದಿಯಲ್ಲಿ ಅಡಗಿಸಿಟ್ಟಿದ್ದ ಬಾಂಬ್ ಸ್ಫೋಟವಾಗಿ 8 ಯೋಧರು ವೀರ ಮರಣವನ್ನು ಹೋಂದಿದರು. ಒಬ್ಬ ಚಾಲಕ ಕೂಡ ಸಾವನ್ನಪ್ಪಿದ್ದಾನೆ.

ಬಸ್ತರ್ ವಿಭಾಗದ ಪೊಲೀಸ್ ಮಹಾನಿರೀಕ್ಷಕ ಸುಂದರರಾಜ ಪಿ. ಮಾತನಾಡಿ, ವಿಜಾಪುರದಿಂದ ಬಂದ ಜಂಟಿ ಕಾರ್ಯಾಚರಣೆ ತಂಡವು ಪರಿಶೀಲನೆ ನಡೆಸಿ ವಾಪಸ್ಸಾಗುತ್ತಿತ್ತು. ಆ ಸಂದರ್ಭದಲ್ಲಿ ಆಂಬೇಲಿ ಗ್ರಾಮದ ಬಳಿ ನಕ್ಸಲೀಯರು ಸ್ಫೋಟ ನಡೆಸಿದ್ದಾರೆ’, ಎಂದು ಹೇಳಿದರು.  ಹಿಂದಿನ ದಿನ ವಿಜಾಪುರದಲ್ಲಿ ನಕ್ಸಲೀಯರೊಂದಿಗಿನ ಎನ್‌ಕೌಂಟರ್‌ನಲ್ಲಿ 3 ನಕ್ಸಲೀಯರು ಕೊಲ್ಲಲ್ಪಟ್ಟಿದ್ದರು ಹಾಗೂ ಒಬ್ಬ ಯೋಧ ವೀರ ಮರಣ ಹೊಂದಿದ್ದರು.