Sambhal Survey Report : ಸಂಭಲ ಮಸೀದಿಯ ಸಮೀಕ್ಷೆಯ ವರದಿ ಬಹಿರಂಗ ಪಡೆಸಬಾರದಂತೆ !

ಮುಸಲ್ಮಾನ ಪಕ್ಷದಿಂದ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ

ಪ್ರಯಾಗರಾಜ (ಉತ್ತರಪ್ರದೇಶ) – ಸಂಭಲ ಜಿಲ್ಲಾ ನ್ಯಾಯಾಲಯದ ಆದೇಶದ ಪ್ರಕಾರ ಶಾಹಿ ಜಮಾ ಮಸೀದಿ ಆಡಳಿತ ಸಮಿತಿಯು ಅಲ್ಲಿ ನಡೆಯುತ್ತಿರುವ ಸಮೀಕ್ಷೆಯ ಸಂದರ್ಭದಲ್ಲಿ ಕಾರ್ಯಾಚರಣೆ ನಿಲ್ಲಿಸುವುದಕ್ಕಾಗಿ ಅಲಹಾಬಾದ್ ಉಚ್ಚ ನ್ಯಾಯಾಲಯಕ್ಕೆ ಮೊರೆ ಹೋಗಿದೆ. ಸಮೀಕ್ಷೆಯ ಕುರಿತು ನಿಷೇಧ ಹೇರಬೇಕೆಂದು ಸಮಿತಿಯು ಅರ್ಜಿಯನ್ನು ದಾಖಲಿಸಿದೆ. ಹಾಗೂ ‘ಆಯುಕ್ತರು ಸಮೀಕ್ಷೆಯ ವರದಿ ಬಹಿರಂಗಗೊಳಿಸಬಾರದು’, ‘ಮುಂದಿನ ವಿಚಾರಣೆಯವರೆಗೆ ಅಲ್ಲಿ ನಡೆಯುವ ಕಾರ್ಯಾಚರಣೆ ನಿಲ್ಲಿಸಬೇಕು’, ಇಂತಹ ಬೇಡಿಕೆಗಳನ್ನು ಮಾಡಿದೆ. ಇದರ ಕುರಿತು ಜನವರಿ ೭ ಅಥವಾ ೮ ರಂದು ವಿಚಾರಣೆ ನಡೆಯುವ ಸಾಧ್ಯತೆ ಇದೆ.

ಸಂಪಾದಕೀಯ ನಿಲುವು

ಸಂಭಲ ಮಸೀದಿ ಈ ಮೊದಲು ಪ್ರಾಚೀನ ಮಂದಿರವಾಗಿತ್ತು, ಇದು ಸಮೀಕ್ಷೆಯಿಂದ ಸ್ಪಷ್ಟವಾಗಿರುವುದರಿಂದ ಮುಸಲ್ಮಾನರು ಈ ರೀತಿ ಆಗ್ರಹಿಸುತ್ತಿದ್ದಾರೆ, ಇದನ್ನು ತಿಳಿದುಕೊಳ್ಳಿ !