Mahakumbh Mela 2025 : ಕುಂಭ ಕ್ಷೇತ್ರದಲ್ಲಿ ಮೂಲಕ ನಿಯೋಜಿಸಲಾದ ಪೊಲೀಸರ “ಆನ್‌ಲೈನ್” ಮೂಲಕ ಉಪಸ್ಥಿತಿಯ ದಾಖಲೆ !

ಪ್ರಯಾಗರಾಜ – ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರಕಾರದ ‘ಡಿಜಿಟಲ್ ಕುಂಭ’ ಪರಿಕಲ್ಪನೆಯಡಿ, ಕುಂಭ ಕ್ಷೇತ್ರಕ್ಕೆ ನಿಯೋಜಿಸಲಾದ ಪೊಲೀಸರ ಉಪಸ್ಥಿತಿಯನ್ನು ಈಗ ಆನ್‌ಲೈನ್‌ನಲ್ಲಿ ನೋಂದಾಯಿಸಲಾಗುತ್ತಿದೆ. ಈ ಹಿಂದೆ ನೇರವಾಗಿ ಪುಸ್ತಕಗಳಲ್ಲಿ ದಾಖಲಾಗುತ್ತಿತ್ತು. ಮಹಾ ಕುಂಭ ಮೇಳದ ಬಂದೋಬಸ್ತಿಗಾಗಿ ನೇಮಕಗೊಂಡ ಪೊಲೀಸರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಅವರ ಉಪಸ್ಥಿತಿಯ ಈ ಆನ್‌ಲೈನ್ ಪದ್ಧತಿಯು ತರಬೇತಿ ಮಾಹಿತಿಯನ್ನು ಸಂಗ್ರಹಿಸಲು ಪ್ರಯೋಜನವಾಗುತ್ತಿದೆ.