ಭಾರತದಲ್ಲಿ, ದೆಹಲಿ, ಬಿಹಾರ ಮತ್ತು ಬಂಗಾಳ ರಾಜ್ಯಗಳಿಗೂ ಭೂಕಂಪದ ಅನುಭವ
ನವದೆಹಲಿ – ನೇಪಾಳದಲ್ಲಿ ಜನವರಿ 7 ರಂದು ಬೆಳಿಗ್ಗೆ 7.1 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಭೂಕಂಪದಲ್ಲಿ 95 ಜನರು ಸಾವನ್ನಪ್ಪಿದ್ದಾರೆ ಮತ್ತು 62 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ಹಿಂದೆ ನೇಪಾಳದಲ್ಲಿ ಏಪ್ರಿಲ್ 2015 ರಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಅಂದಾಜು 10 ಸಾವಿರ ಜನರು ಸಾವನ್ನಪ್ಪಿದ್ದರು.
🌍💔 7.1 Magnitude Earthquake Hits Nepal-Tibet Border
⚠️ Tremors felt across Nepal and North India!
💔 Toll rises as rescue teams battle freezing temperatures 🥶to save lives and provide relief.pic.twitter.com/bwTWUkA71w
— Sanatan Prabhat (@SanatanPrabhat) January 7, 2025
ನೇಪಾಳದಲ್ಲಿ ಸಂಭವಿಸಿದ ಈ ಸರಣಿ ಭೂಕಂಪ ಭಾರತದ ಮೇಲೂ ಪರಿಣಾಮ ಬೀರಿದೆ. ಭಾರತದ ಬಿಹಾರ, ಬಂಗಾಳ ಮತ್ತು ಅಸ್ಸಾಂನಲ್ಲಿಯೂ ಭೂಕಂಪನದ ಅನುಭವವಾಗಿದೆ. ಬಿಹಾರದ ಮೋತಿಹಾರಿ, ಸಮಸ್ತಿಪುರ್, ದರಭಂಗಾ, ಮಧುಬನಿ, ಪೂರ್ಣಿಯಾ, ಸಿವಾನ, ಅರರಿಯಾ, ಸುಪೌಲ ಮತ್ತು ಮುಜಪ್ಪರಪುರದಲ್ಲಿ ಬೆಳಗ್ಗೆ 6.40 ರ ಸುಮಾರಿಗೆ ಭೂಕಂಪನದ ಅನುಭವವಾಗಿದೆ. ಭೂಕಂಪನವನ್ನು ಅನುಭವಿಸಿದ ಜನರು ಭಯಭೀತರಾಗಿ ಮನೆಯಿಂದ ಹೊರಗೆ ಓಡಿಬಂದರು. ನೇಪಾಳದಲ್ಲಿ ಕಳೆದ 7 ದಿನಗಳಲ್ಲಿ 3 ಬಾರಿ ಭೂಕಂಪ ಸಂಭವಿಸಿದೆ. ಅವುಗಳಲ್ಲಿ ಜನವರಿ 2 ರಂದು ಸಂಭವಿಸಿದ ಭೂಕಂಪದ ತೀವ್ರತೆಯು 4.8 ರಷ್ಟಿದ್ದರೆ, ಜನವರಿ 3 ರಂದು ಸಂಭವಿಸಿದ ಭೂಕಂಪದ ತೀವ್ರತೆಯು 4.4 ರಷ್ಟಿತ್ತು.
ಟಿಬೆಟ್‌ನಲ್ಲಿ ಭೂಕಂಪಕ್ಕೆ 50ಕ್ಕೂ ಹೆಚ್ಚು ಮಂದಿ ಬಲಿ!
ಟಿಬೆಟ್‌ನ ಜಿಜಾಂಗ್‌ನಲ್ಲಿ ಜನವರಿ 7 ರಂದು ಬೆಳಿಗ್ಗೆ ಸಂಭವಿಸಿದ ಭೂಕಂಪನದ ತೀವ್ರತೆಗೆ 50 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.