ಉತ್ತರಪ್ರದೇಶದಲ್ಲಿ ಸಂಘದ ಸ್ವಯಂಸೇವಕರ ಮಗನ ಶವ ಮರಕ್ಕೆ ನೇತು ಹಾಕಿರುವ ಸ್ಥಿತಿಯಲ್ಲಿ ಪತ್ತೆ

ಬಾಗಪತ (ಉತ್ತರಪ್ರದೇಶ) ಇಲ್ಲಿ ಸ್ವಯಂಸೇವಕರೊಬ್ಬರ ಮಗನ ಶವವು ಮರಕ್ಕೆ ನೇತು ಹಾಕಿರುವ ಸ್ಥಿತಿಯಲ್ಲಿ ಸಿಕ್ಕಿದೆ. ಅಕ್ಷಯ (ವಯಸ್ಸು ೨೨ ವರ್ಷ) ಎಂದು ಅವನ ಹೆಸರಾಗಿದೆ. ಗ್ರಾಮಸ್ಥರು ಈ ಘಟನೆಗೆ ಪೊಲೀಸರೇ ಹೊಣೆ ಎಂದು ನಿರ್ಧರಿಸಿ ‘ಪೊಲೀಸರ ಭಯದಿಂದ ಅಕ್ಷಯನು ಈ ರೀತಿಯ ಕೃತ್ಯ ಮಾಡಿದ್ದಾನೆ, ಎಂದು ಆರೋಪಿಸಿದ್ದಾರೆ. (ಉತ್ತರಪ್ರದೇಶ ಸರಕಾರವು ಈ ಪ್ರಕರಣದಲ್ಲಿ ವಿಚಾರಣೆ ನಡೆಸಿ ಸತ್ಯವನ್ನು ಜನತೆಯ ಮುಂದಿಡಬೇಕು ! – ಸಂಪಾದಕರು). ಈ ಘಟನೆಯ ಬಳಿಕ ನೂರಾರು ಗ್ರಾಮಸ್ಥರು ಶವ ತೆಗೆದುಕೊಂಡು ಪೊಲೀಸರ ವಿರುದ್ಧ ಘೋಷಣೆ ನೀಡಿದರು. ಆದ್ದರಿಂದ ಪೊಲೀಸರು ಬೇರೆ ಸ್ಥಳದಿಂದ ಹೆಚ್ಚುವರಿ ಪೊಲೀಸು ಪಡೆಯನ್ನು ಕರೆಯಿಸಿಕೊಂಡರು.