|
(ಗೋರಿ ಅಂದರೆ ಮುಸಲ್ಮಾನನ ಮೃತದೇಹವನ್ನು ಹೂಳಲಾದ ಸ್ಥಳ)
ಕನ್ನೌಜ (ಉತ್ತರಪ್ರದೇಶ) – ಇಲ್ಲಿ ದೇವಾಲಯದ ಭೂಮಿಯಲ್ಲಿ ಗೋರಿಗಳನ್ನು ನಿರ್ಮಿಸಿರುವುದನ್ನು ವಿರೋಧಿಸಿದ ಸಮಯದಲ್ಲಿ ಪರಸ್ಪರ ಕಲ್ಲುತೂರಾಟವಾಯಿತು. ಈ ಪ್ರಕರಣದಲ್ಲಿ ಪೊಲೀಸರು ಕಾಮಿಲ, ನೂರ ಹಸನ ಮತ್ತು ಇಬಲ ಹಸನರ ವಿರುದ್ಧ ಅಪರಾಧ ದಾಖಲಿಸಿದ್ದಾರೆ. ಈ ಮೂವರ ಮೇಲೆ ಹೊಡೆದಾಟ ಮತ್ತು ಬೆದರಿಕೆಯ ಆರೋಪಗಳಿವೆ. ದೇವಾಲಯದ ಭೂಮಿಯನ್ನು ಕಬಳಿಸಲು ಇಲ್ಲಿ ಗೋರಿಗಳನ್ನು ನಿರ್ಮಿಸಲಾಗಿತ್ತು. ಇದನ್ನು ಹಿಂದೂಗಳು ವಿರೋಧಿಸಿದ್ದರಿಂದ ಈ ಘಟನೆ ನಡೆದಿದೆ.
೧. ಇಲ್ಲಿಯ ಉಮರಾಣ ಗ್ರಾಮದಲ್ಲಿ ೭೦ ಬಿಘಾದಲ್ಲಿನ (ಬಿಘಾ ಅಂದರೆ ಭೂಮಿ ಅಳೆಯುವ ಮಾಪನ) ೭ ಬಿಘಾ ಭೂಮಿಯು ದೇವಾಲಯದ ಹೆಸರಿನಲ್ಲಿ ಇದೆ, ಉಳಿದ ೬೩ ಬಿಘಾ ಭೂಮಿಯು ಗ್ರಾಮದಲ್ಲಿನ ಸಂಘದ್ದಾಗಿದೆ. ಒಂದು ವಾರದ ಮೊದಲು ಇಲ್ಲಿನ ಭೂಮಿಯನ್ನು ಕಬಳಿಸುವ ಮುಸ್ಲಿಮರ ಸಂಚು ಬೆಳಕಿಗೆ ಬಂದಿತ್ತು. ನಂತರ ಗ್ರಾಮದ ಮಹಿಪಾಲರು ಮತ್ತು ಕೆಲವು ಗ್ರಾಮಸ್ಥರು ಬೆಟ್ಟದ ಮೇಲೆ ಹೋಗಿದ್ದರು. ಅಲ್ಲಿ ಅವರಿಗೆ ಒಂದು ಗೋರಿ ಕಂಡಿತು. ಅವರು ಈ ಸ್ಥಳವನ್ನು ಕಬಳಿಸುವ ಉದ್ದೇಶದಿಂದ ಇಲ್ಲಿ ಇತ್ತೀಚೆಗೆ ಗೋರಿ ಕಟ್ಟಲಾಗಿದೆ ಎಂದು ಹೇಳುತ್ತಾರೆ. ಈ ಗೋರಿಗಳನ್ನು ಹಿಂದೂಗಳು ಈ ಮೊದಲೇ ಕಟ್ಟಿರುವ ಧಾರ್ಮಿಕ ಕಟ್ಟೆಯಲ್ಲಿ ನಿರ್ಮಿಸಲಾಗಿದೆ.
೨. ಈ ಬೆಟ್ಟದಲ್ಲಿ ಅಕ್ರಮವಾಗಿ ಅಗೆಯಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಗಣಿಗಾರಿಕೆಯಿಂದ ಹಲವಾರು ದಿಬ್ಬಗಳು ನೆಲಸಮವಾಗಿವೆ ಮತ್ತು ಅಲ್ಲಿ ಗೋರಿಗಳು ಹಾಗೂ ಮಳೆನೀರಿನ ಚಿಕ್ಕ ಕೃತಕ ಕೆರೆಗಳು ನಿರ್ಮಾಣವಾಗುತ್ತಿವೆ. ಗೋರಿಗಳು ಹಾಗೂ ಮಳೆನೀರಿನ ಚಿಕ್ಕ ಕೃತಕ ಕೆರೆಗಳ ನಿರ್ಮಾಣವನ್ನು ಹಿಂದೂಗಳು ವಿರೋಧಿಸಿದ್ದರಿಂದ, ಮುಸ್ಲಿಮರು ಅಲ್ಲಿಗೆ ಒಟ್ಟು ಸೇರಿ ಹಿಂದೂಗಳ ಮೇಲೆ ಕಲ್ಲು ತೂರಾಟ ಮಾಡಿದರು. ಜೊತೆಗೆ ಕೆಲವು ಜನರನ್ನು ಥಳಿಸಿದರು. ಇದರಲ್ಲಿ ಕೆಲವರು ಅಲ್ಲಿ ಓಡಿದರು; ಆದರೆ ಅವರು ಘಟನೆಯ ಚಿತ್ರೀಕರಣ ಮಾಡಿ ಪೋಲೀಸ ಠಾಣೆಯಲ್ಲಿ ದೂರು ಸಲ್ಲಿಸಿದರು.
ಸಂಪಾದಕೀಯ ನಿಲುವು
|