ಚುನಾವಣೆಯಲ್ಲಿ ಹಣ ಹಂಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣಾ ರಾಷ್ಟ್ರ ಸಮಿತಿಯ ಮಹಿಳಾ ಸಂಸದೆಗೆ ೬ ತಿಂಗಳ ಜೈಲು ಶಿಕ್ಷೆ !

ಅನೇಕ ಕ್ಷೇತ್ರಗಳಲ್ಲಿ ಪುರುಷರಿಗೆ ಸಮಾನರಾಗಿದ್ದ ಮಹಿಳೆಯರು ಅಪರಾಧದಲ್ಲೂ ಪುರುಷರಿಗಿಂತ ಹಿಂದೆ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ !

ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಲ್ಲಿ ಬರುವ ಧಾರ್ಮಿಕ ಸ್ಥಳಗಳ ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಕೇರಳ ಉಚ್ಚ ನ್ಯಾಯಾಲಯ !

ಕೇರಳದ ಕೊಲ್ಲಮ್ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ೬೬ ರ ಅಗಲೀಕರಣದ ಕೆಲಸ ನಡೆಯುತ್ತಿರುವಾಗ ನಡುವೆ ಬರುತ್ತಿರುವ ಧಾರ್ಮಿಕ ಸ್ಥಳಗಳನ್ನು ರಕ್ಷಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಉಚ್ಚನ್ಯಾಯಾಲಯವು ತಿರಸ್ಕರಿಸಿದೆ.

ಪ್ರಧಾನಿ ಮೋದಿ, ಅಮಿತ್ ಶಾಹ ಮೊದಲಾದವರ ಬಗ್ಗೆ ಅವಹೇಳನಕಾರಿ ಭಾಷೆಯಲ್ಲಿ ಟೀಕಿಸಿದ ಪಾದ್ರಿಯ ಬಂಧನ !

ಇಲ್ಲಿಯವರೆಗೆ ಜಗತ್ತಿನಾದ್ಯಂತ ಕಾಮಾಂಧ ಪಾದ್ರಿಗಳ ಚಟುವಟಿಕೆಗಳು ಬೆಳಕಿಗೆ ಬರುತಿದ್ದವು. ಈಗ ದ್ವೇಷಭಾವನೆ ಹಾಗೂ ಅವಹೇಳನಕಾರಿ ಹೇಳಿಕೆ ನೀಡುವ ಪಾದ್ರಿಗಳೂ ಇದ್ದಾರೆ, ಎಂಬುದು ಬೆಳಕಿಗೆ ಬರುತ್ತಿದೆ.

‘ತಮ್ಮದೇ ಮನೆಯಲ್ಲಿ ಮರ್ಯಾದೆ ಸಿಗದೇ ಇದ್ದುದರಿಂದ ದಲಿತರು ಮತಾಂತರವಾಗುತ್ತಾರೆ !’ – ಬಿಹಾರದ ಮಾಜಿ ಮುಖ್ಯಮಂತ್ರಿ ಜೀತನ್ ರಾಮ ಮಾಂಝಿ

ಹಿಂದುತ್ವನಿಷ್ಠ ಸಂಘಟನೆಗಳು, ಧಾರ್ಮಿಕ ಸಂಘಟನೆಗಳು, ಸಂಪ್ರದಾಯಗಳು ಇವುಗಳೆಲ್ಲ ಜಾತಿಬೇಧವನ್ನು ನಾಶ ಮಾಡಲು ಕಾರ್ಯನಿರತವಾಗಿವೆ; ಆದರೆ ಬಡ ಹಿಂದೂಗಳಿಗೆ ಆಮಿಷಗಳನ್ನು ತೋರಿಸುವುದರಿಂದಲೇ ಅವರು ಮತಾಂತರವಾಗುತ್ತಾರೆ, ಇದೇ ಸತ್ಯವಾಗಿದೆ.

ಕೇರಳದಲ್ಲಿ ಮುಸಲ್ಮಾನ ಹಾಗೂ ಕ್ರೈಸ್ತರಿಗೆ ನೀಡಿದ ಅಲ್ಪಸಂಖ್ಯಾತ ಸ್ಥಾನದ ಬಗ್ಗೆ ಮರುಪರಿಶೀಲಿಸಬೇಕು ! – ಕೇರಳ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ

ಕೇರಳದಲ್ಲಿ ಮುಸಲ್ಮಾನ ಮತ್ತು ಕ್ರೈಸ್ತರಿಗೆ ನೀಡಲಾಗಿರುವ ‘ಅಲ್ಪಸಂಖ್ಯಾತ’ ಸ್ಥಾನಮಾನದ ಬಗ್ಗೆ ಮರುಪರಿಶೀಲಿಸುವಂತೆ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗಕ್ಕೆ ಆದೇಶ ನೀಡಬೇಕು, ಎಂದು ಅರ್ಜಿಯೊಂದನ್ನು ಕೇರಳ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ.

‘ಬ್ರೈನ್ ಟ್ಯೂಮರ್’ನ ಶಸ್ತ್ರ ಚಿಕಿತ್ಸೆ ನಡೆಯುತ್ತಿರುವಾಗ ಯುವತಿಯಿಂದ ಶ್ರೀ ಹನುಮಾನ ಚಾಲಿಸಾ ಪಠಣ !

ಆಸ್ಪತ್ರೆಯಲ್ಲಿ ಅನುಭವೀ ಆಧುನಿಕ ವೈದ್ಯರ ತಂಡವು ಆಕೆಯ ಮೇಲೆ `ನ್ಯೂರೋ ಸರ್ಜರಿ’ ಮಾಡಿದರು. ಸುಮಾರು ೩ ಗಂಟೆಗಳ ಕಾಲ ನಡೆದ ಈ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಈ ಯುವತಿಯು ಎಚ್ಚರವಾಗಿದ್ದಳು. ಆಕೆಯ ಮೇಲೆ ನಡೆದ ಶಸ್ತ್ರಚಿಕಿತ್ಸೆಯು ಯಶಸ್ವಿಯಾಗಿದೆ.

ಜ್ಞಾನವಾಪಿ ಮಸೀದಿಗೆ ತಾಗಿರುವ ಭೂಮಿಯನ್ನು ಶ್ರೀ ಕಾಶಿ ವಿಶ್ವನಾಥ ದೇವಾಲಯದ ಆಡಳಿತಕ್ಕೆ ಹಸ್ತಾಂತರಿಸಲು ನಿರ್ಧಾರ !

ಜ್ಞಾನವಾಪಿ ಮಸೀದಿಯ ಪಕ್ಷವಾದ ‘ಅಂಜುಮಾನ ಇಂತೆಜಾಮಿಯಾ ಕಮೀಟಿ’ಯು ಜ್ಞಾನವಾಪಿ ಮಸೀದಿಗೆ ತಾಗಿರುವ ೧ ಸಾವಿರದ ೭೦೦ ಚದರ ಅಡಿ ಭೂಮಿಯನ್ನು ಶ್ರೀ ಕಾಶಿ ವಿಶ್ವನಾಥ ದೇವಾಲಯದ ಆಡಳಿತಕ್ಕೆ ಹಸ್ತಾಂತರಿಸಲು ನಿರ್ಧಾರ ಕೈಗೊಂಡಿದೆ.

ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆಯೋಜಿಸಲಾದ ‘ಆನ್‌ಲೈನ್’ ಗುರುಪೂರ್ಣಿಮಾ ಮಹೋತ್ಸವ’ವು ಬಾವಪೂರ್ಣ ವಾತಾವರಣದಲ್ಲಿ ಆಚರಣೆ !

ಈ ಶುಭ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ‘ಆಪತ್ಕಾಲದಲ್ಲಿ ಹಿಂದೂಗಳ ರಕ್ಷಣೆ ಹಾಗೂ ಹಿಂದೂ ರಾಷ್ಟ್ರದ ಸ್ಥಾಪನೆ’ ಈ ವಿಷಯದಲ್ಲಿ ಮಾರ್ಗದರ್ಶನ ಮಾಡಿದರು. ಅವರು ಮಾರ್ಗದರ್ಶನದಲ್ಲಿ ‘ಅಡಚಣೆಯ ಸಮಯದಲ್ಲಿ ನಮಗೆ ಸಹಾಯವಾಗಬೇಕು; ಅದಕ್ಕಾಗಿ ನಾವು ಬ್ಯಾಂಕಿನಲ್ಲಿ ಹಣ ಇಡುತ್ತೇವೆ.

ಕಾಶ್ಮೀರದಲ್ಲಿ ನಡೆದ ಘರ್ಷಣೆಯಲ್ಲಿ ಲಷ್ಕರ್-ಎ-ತೋಯಿಬಾದ ಇಬ್ಬರು ಉಗ್ರರ ಸಾವು

ಜುಲೈ ೨೨ ರಂದು ಸೊಪೋರಾ ಪ್ರದೇಶದ ವಾರಪೋರಾ ಗ್ರಾಮದಲ್ಲಿ ಸೇನೆ ಮತ್ತು ಉಗ್ರರ ನಡುವೆ ರಾತ್ರಿವಿಡಿ ನಡೆದ ಘರ್ಷಣೆಯಲ್ಲಿ ಜಿಹಾದಿ ಭಯೋತ್ಪಾದಕ ಸಂಘಟನೆಯ ‘ಲಷ್ಕರ್-ಎ-ತೋಯಿಬಾ’ಕ್ಕೆ ಸೇರಿದ ಇಬ್ಬರು ಉಗ್ರರು ಸಾವನ್ನಪ್ಪಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಡ್ರೋನ್‍ಗಳನ್ನು ಉರುಳಿಸಿದ ಭಾರತೀಯ ಸೇನೆ : ೫ ಕೆಜಿ ಸ್ಫೋಟಕ ಸ್ವಾಧೀನ !

ಜಿಹಾದಿ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಅವರು ಅಖನೂರ ಬಳಿ ಡ್ರೋನ್‍ನಿಂದ ದಾಳಿ ನಡೆಸಲು ಸಂಚು ಮಾಡಿದೆ ಎಂಬ ಮಾಹಿತಿ ಸಿಕ್ಕಿದ ನಂತರ ಸೈನ್ಯವು ವ್ಯೂಹವನ್ನು ರಚಿಸಿತು. ಅದರಂತೆ ಮಧ್ಯರಾತ್ರಿ ೧ ಗಂಟೆಗೆ ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ.