ಕಾಶ್ಮೀರದಲ್ಲಿ ನಡೆದ ಘರ್ಷಣೆಯಲ್ಲಿ ಲಷ್ಕರ್-ಎ-ತೋಯಿಬಾದ ಇಬ್ಬರು ಉಗ್ರರ ಸಾವು

ಭಯೋತ್ಪಾದಕರ ಕಾರ್ಖಾನೆಯಾಗಿರುವ ಪಾಕಿಸ್ತಾನ ನಾಶವಾದರೆ ಮಾತ್ರ ಭಾರತದ ಮೇಲೆ ಭಯೋತ್ಪಾದಕ ದಾಳಿಗಳು ನಿಲ್ಲಬಲ್ಲದು, ಎಂಬುದನ್ನು ತಿಳಿದುಕೊಳ್ಳಿ !

ಶ್ರೀನಗರ : ಜುಲೈ ೨೨ ರಂದು ಸೊಪೋರಾ ಪ್ರದೇಶದ ವಾರಪೋರಾ ಗ್ರಾಮದಲ್ಲಿ ಸೇನೆ ಮತ್ತು ಉಗ್ರರ ನಡುವೆ ರಾತ್ರಿವಿಡಿ ನಡೆದ ಘರ್ಷಣೆಯಲ್ಲಿ ಜಿಹಾದಿ ಭಯೋತ್ಪಾದಕ ಸಂಘಟನೆಯ ‘ಲಷ್ಕರ್-ಎ-ತೋಯಿಬಾ’ಕ್ಕೆ ಸೇರಿದ ಇಬ್ಬರು ಉಗ್ರರು ಸಾವನ್ನಪ್ಪಿದ್ದಾರೆ. ಭಯೋತ್ಪಾದಕರಲ್ಲಿ ಒಬ್ಬನು ಈ ಸಂಘಟನೆಯ ಮುಖಂಡನಾಗಿದ್ದನು. ಭಾರತೀಯ ಸೈನಿಕರು ಮತ್ತು ನಾಗರಿಕರ ಮೇಲಾದ ಹಲವಾರು ಭಯೋತ್ಪಾದಕ ದಾಳಿಗಳಲ್ಲಿ ಆತನ ಕೈವಾಡವಿತ್ತು. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.