ಪ್ರಧಾನಿ ಮೋದಿ, ಅಮಿತ್ ಶಾಹ ಮೊದಲಾದವರ ಬಗ್ಗೆ ಅವಹೇಳನಕಾರಿ ಭಾಷೆಯಲ್ಲಿ ಟೀಕಿಸಿದ ಪಾದ್ರಿಯ ಬಂಧನ !

ಇಲ್ಲಿಯವರೆಗೆ ಜಗತ್ತಿನಾದ್ಯಂತ ಕಾಮಾಂಧ ಪಾದ್ರಿಗಳ ಚಟುವಟಿಕೆಗಳು ಬೆಳಕಿಗೆ ಬರುತಿದ್ದವು. ಈಗ ದ್ವೇಷಭಾವನೆ ಹಾಗೂ ಅವಹೇಳನಕಾರಿ ಹೇಳಿಕೆ ನೀಡುವ ಪಾದ್ರಿಗಳೂ ಇದ್ದಾರೆ, ಎಂಬುದು ಬೆಳಕಿಗೆ ಬರುತ್ತಿದೆ. ಈ ಬಗ್ಗೆ ತಥಾಕಥಿತ ಪ್ರಗತಿ(ಅಧೋಗತಿ)ಪರರು ಹಾಗೂ ಜಾತ್ಯತೀತವಾದಿಗಳು ಮಾತನಾಡುವರೇ ?

ಪಾದ್ರಿ ಜಾರ್ಜ್ ಪೊನ್ನೈಯಾ

ಕನ್ಯಾಕುಮಾರಿ (ತಮಿಳುನಾಡು) – ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾಹ ಹಾಗೂ ಇತರ ನಾಯಕರ ವಿರುದ್ಧ ಧ್ವೇಷಪೂರ್ಣ ಹಾಗೂ ಅಸೂಯೆ ಮೂಡಿಸುವಂತಹ ಹೇಳಿಕೆಗಳನ್ನು ನೀಡಿದ ಬಗ್ಗೆ ರೋಮನ ಕ್ಯಾಥೊಲಿಕ ಪಾದ್ರಿ ಜಾರ್ಜ್ ಪೊನ್ನೈಯಾನನ್ನು ಪೊಲೀಸರು ಬಂಧಿಸಿದ್ದಾರೆ. ಪೊನ್ನೈಯಾ ‘ಜನನ್ಯಾಗ ಕ್ರಿಸ್ಥುವಾ ಪೆರವಯಿ ಅಮಾಯಿಪು’ ಹೆಸರಿನ ಸಂಸ್ಥೆಯ ಸಲಹೆಗಾರನೂ ಆಗಿದ್ದಾನೆ. ಆತ ಕನ್ಯಾಕುಮಾರಿಯಲ್ಲಿನ ಅರುಮನಯಿಯಲ್ಲಿ ಒಂದು ಸಭೆಯಲ್ಲಿ ಮಾತನಾಡುತ್ತಿರುವಾಗ ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡಿದ್ದನು. ಆತನ ಭಾಷಣದ ವಿಡಿಯೋ ಪ್ರಸಾರವಾದ ನಂತರ ಆತನ ವಿರುದ್ಧ ದೂರುಗಳು ಬಂದಾಗ ಪೊಲೀಸರು ಈ ಕ್ರಮ ಕೈಗೊಂಡರು. ಈ ಹಿಂದೆ ಆತ ತನ್ನ ಹೇಳಿಕೆಯ ಬಗ್ಗೆ ಕ್ಷಮೆ ಯಾಚಿಸಲೂ ಪ್ರಯತ್ನಿಸಿದ್ದನು, ಕೆಲವು ತಿಂಗಳ ಹಿಂದೆ ರಾಜ್ಯದಲ್ಲಿ ನಡೆದ ವಿಧಾನಸಭೆಯ ಚುನಾವಣೆಯ ಸಮಯದಲ್ಲಿ ಆದ ದ್ರವಿಡ ಮುನ್ನೆತ್ರ ಕಳಘಮ್ ಪಕ್ಷದ ಪರವಾಗಿ ಪ್ರಸಾರವನ್ನೂ ಮಾಡಿದ್ದನು.

ಜಾರ್ಜ್ ಪೊನ್ನೈಯಾ ನೀಡಿದ ಆಕ್ಷೇಪಾರ್ಹ ಹೇಳಿಕೆಗಳು

೧. ನರೇಂದ್ರ ಮೋದಿಯ ಕೊನೆಗಾಲವು ಅತ್ಯಂತ ದಯನೀಯವಾಗಿರಲಿದೆ, ಇದನ್ನು ನಾನು ಬರೆದು ಕೊಡುತ್ತೇನೆ. ನಾವು ಪೂಜಿಸುವ ದೇವತೆಯು ಜೀವಂತವಾಗಿದ್ದರೆ, ಮೋದಿ ಹಾಗೂ ಅಮಿತ್ ಶಾಹ ಇವರ ಕೊಳೆತ ದೇಹಗಳನ್ನು ನಾಯಿ ಹಾಗೂ ಹುಳಗಳು ತಿನ್ನುವುದನ್ನು ಇತಿಹಾಸವು ನೋಡಲಿದೆ.

. ರಾಜ್ಯದ ನಾಗರಕೊಲಿಯಲ್ಲಿನ ಬಿಜೆಪಿಯ ಶಾಸಕ ಎಮ್.ಆರ್. ಗಾಂಧಿ ಇವರನ್ನು ಉದ್ದೇಶಿಸಿ ಪೊನ್ನೈಯಾನು, ಭಾರತ ಮಾತೆಗೆ ದುಃಖವಾಗದಿರಲಿ; ಎಂದು ಗಾಂಧಿಯು ಚಪ್ಪಲಿ ಧರಿಸುತ್ತಿಲ್ಲ. ನಾವು ಮಾತ್ರ ಭಾರತಮಾತೆಯಿಂದ ನಮಗೆ ಯಾವುದೇ ರೀತಿಯ ಅನಾರೋಗ್ಯವಾಗಬಾರದು ಹಾಗೂ ನಮ್ಮ ಕಾಲಿಗೆ ಕೊಳೆ ತಾಗಬಾರದು ಎಂದು ಚಪ್ಪಲಿ ಹಾಕಿಕೊಳ್ಳುತ್ತೇವೆ.

೩. ವಿಧಾನಸಭೆಯ ಚುನಾವಣೆಯಲ್ಲಿ ದ್ರಮುಖಗೆ ಸಿಕ್ಕಿದ ಜಯ ಎಂದರೆ ಕ್ರೈಸ್ತ ಹಾಗೂ ಮುಸಲ್ಮಾನರು ನೀಡಿದ ಭಿಕ್ಷೆಯಾಗಿದೆ.

(ಟಿಪ್ಪಣಿ : ಪಾದ್ರಿ ಪೊನ್ನೈಯಾ ನೀಡಿದ ಹೇಳಿಕೆಗಳನ್ನು ಯಾರ ಭಾವನೆಗಳಿಗೆ ನೋವನ್ನುಂಟುಮಾಡುವ ಉದ್ದೇಶದಿಂದಲ್ಲ, ಬದಲಾಗಿ ಮಾಹಿತಿಗಾಗಿ ಪ್ರಕಟಿಸುತ್ತಿದ್ದೇವೆ.)