‘ತಮ್ಮದೇ ಮನೆಯಲ್ಲಿ ಮರ್ಯಾದೆ ಸಿಗದೇ ಇದ್ದುದರಿಂದ ದಲಿತರು ಮತಾಂತರವಾಗುತ್ತಾರೆ !’ – ಬಿಹಾರದ ಮಾಜಿ ಮುಖ್ಯಮಂತ್ರಿ ಜೀತನ್ ರಾಮ ಮಾಂಝಿ

* ತಮ್ಮ ಮನೆಯಿಂದ ಇತರರ ಮನೆಗೆ ಹೋದಾಗ ಮರ್ಯಾದೆ ಸಿಗುತ್ತದೆ, ಎಂಬುದು ಎಲ್ಲಿಯೂ ಕಾಣಿಸುತ್ತಿಲ್ಲ. ತದ್ವಿರುದ್ಧ ಇತರರ ಮನೆಯಲ್ಲಿ ಅವರು ಮೇಲ್ನೋಟಕ್ಕೆ ಮಾಡುತ್ತಾರೆ ಹಾಗೂ ಅವರನ್ನು ನಂತರ ತುಚ್ಛವಾಗಿ ಕಾಣುತ್ತಾರೆ, ಇದು ನೈಜಸ್ಥಿತಿ !

* ಹಿಂದುತ್ವನಿಷ್ಠ ಸಂಘಟನೆಗಳು, ಧಾರ್ಮಿಕ ಸಂಘಟನೆಗಳು, ಸಂಪ್ರದಾಯಗಳು ಇವುಗಳೆಲ್ಲ ಜಾತಿಬೇಧವನ್ನು ನಾಶ ಮಾಡಲು ಕಾರ್ಯನಿರತವಾಗಿವೆ; ಆದರೆ ಬಡ ಹಿಂದೂಗಳಿಗೆ ಆಮಿಷಗಳನ್ನು ತೋರಿಸುವುದರಿಂದಲೇ ಅವರು ಮತಾಂತರವಾಗುತ್ತಾರೆ, ಇದೇ ಸತ್ಯವಾಗಿದೆ. ಮಾಂಝಿಯವರು ಇದನ್ನು ಏಕೆ ಹೇಳುವುದಿಲ್ಲ ?

ಬಿಹಾರದ ಮಾಜಿ ಮುಖ್ಯಮಂತ್ರಿ ಜೀತನ್ ರಾಮ ಮಾಂಝಿ

ಪಾಟಲಿಪುತ್ರ (ಬಿಹಾರ) – ಹಿಂದೂ ಧರ್ಮದಲ್ಲಿ ಬೇಧಭಾವವಿರುವುದೇ ಮತಾಂತರಕ್ಕೆ ಮುಖ್ಯ ಕಾರಣವಾಗಿದೆ, ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ‘ಹಿಂದುಸ್ತಾನಿ ಆವಾಮ್ ಮೋರ್ಚಾ’ದ ಅಧ್ಯಕ್ಷ ಜೀತನ್ ರಾಮ ಮಾಂಝಿಯವರು ಹೇಳಿಕೆ ನೀಡಿದ್ದಾರೆ. ಕಳೆದ ವರ್ಷ ಗಯಾದಲ್ಲಿ ನಿರಂತರವಾಗಿ ದಲಿತರಿಂದ ಕ್ರೈಸ್ತ ಹಾಗೂ ಬೌದ್ಧ ಧರ್ಮ ಸ್ವೀಕಾರ ಮಾಡುವ ಘಟನೆಗಳಾದವು. ಈ ಬಗ್ಗೆ ಅವರು ಮಾತನಾಡುತ್ತಿದ್ದರು.

ಜೀತನ್ ರಾಮ ಮಾಂಝಿಯವರು ಮಂಡಿಸಿದ ಅಂಶಗಳು

. ಯಾವಾಗ ಸ್ವಂತದ ಮನೆಯಲ್ಲಿ ಗೌರವ ಸಿಗುವುದಿಲ್ಲವೋ, ಆಗ ಅವರು ಇತರರ ಮನೆಗೆ ಹೋಗುತ್ತಾರೆ ಇದು ಸ್ವಾಭಾವಿಕವಾಗಿದೆ. ಇಂತಹ ಸಮಯದಲ್ಲಿ ಯಾರು ಯಾವ ಧರ್ಮದಲ್ಲಿ ಹೋಗುತ್ತಿದ್ದಾರೆ, ಇದು ಸಮಸ್ಯೆ ಅಲ್ಲ. ಆದರೆ ಮನೆಯ ಮಾಲೀಕನಿಗೆ, ಜನರು ಇತರರ ಮನೆಗೆ ಏಕೆ ಹೋಗುತ್ತಿದ್ದಾರೆ ಹಾಗೂ ಸ್ವಂತದ ಮನೆಯಲ್ಲಿ ಅವರ ಅಭಿವೃದ್ಧಿ ಆಗುವುದಿಲ್ಲವೇನು ? ಎಂಬುದು ಗಮನಕ್ಕೆ ಬರುವುದು ಮಹತ್ವದ್ದಾಗಿದೆ.

. ದಲಿತರನ್ನು ಉಪೇಕ್ಷಿಸಿದುದರಿಂದ ಅವರ ಭಾವನೆಗಳಿಗೆ ನೋವುಂಟಾಗಿದ್ದು ಅವರು ಮತಾಂತರವಾಗುತ್ತಿದ್ದಾರೆ. ಅವರ ಮೇಲೆ ಯಾವುದೇ ಒತ್ತಡ ಇಲ್ಲ. ಇದೇ ರೀತಿ ಇತರ ಕಡೆಗಳಲ್ಲಿಯೂ ಆಗುತ್ತಿದೆಯೆಂದಾದರೆ ಅವರೂ ಕೂಡ ಮತಾಂತರವಾಗುತ್ತಾರೆ. ಈ ಮತಾಂತರದಿಂದಾಗಿ ದೇಶಕ್ಕೆ ಯಾವುದೇ ಅಪಾಯವಿಲ್ಲ. (ಮತಾಂತರ ಅಂದರೆ ರಾಷ್ಟ್ರಾಂತರ ! ಹಿಂದೂ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಹೋದರೆ, ಒಬ್ಬ ಹಿಂದೂ ಕಡಿಮೆ ಆದನು ಎಂದಾಗಿರದೇ ಶತ್ರುಗಳ ಸಂಖ್ಯೆಯಲ್ಲಿ ಒಂದು ಹೆಚ್ಚಳವಾಗುತ್ತದೆ, ಎಂದು ಸ್ವಾತಂತ್ರವೀರ ಸಾವರಕರರು ಹೇಳಿದ್ದರು. ಆದ್ದರಿಂದ ಮಾಂಝಿಯವರು ಏನೇ ಹೇಳಿದರೂ, ಅದು ಸುಳ್ಳಾಗಿದೆ ! – ಸಂಪಾದಕರು)

. ಓರ್ವ ದಲಿತ ಮುಖ್ಯಮಂತ್ರಿಯು ಒಂದು ದೇವಾಲಯದಲ್ಲಿ ದರ್ಶನಕ್ಕಾಗಿ ಹೋಗಿ ಬಂದ ನಂತರ ಆ ದೇವಾಲಯವನ್ನು ಸ್ವಚ್ಛ ಮಾಡುತ್ತಾರೆ, ಇದನ್ನು ಏನೆಂದು ತಿಳಿದುಕೊಳ್ಳಬೇಕು ? (ಹೀಗೆ ನಡೆಯುತ್ತಿದೆ ಎಂದಾದರೆ, ಅದು ಅಯೋಗ್ಯವೇ ಆಗಿದೆ. ಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲದ್ದರಿಂದಲೇ ಹಿಂದೂಗಳಲ್ಲಿ ವರ್ಣಾಶ್ರಮ ವ್ಯವಸ್ಥೆಯ ಬದಲಾಗಿ ಜಾತಿಗಳು ನಿರ್ಮಾಣವಾಗಿವೆ. ಅದನ್ನು ದೂರ ಮಾಡಲು ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವುದು ಅತ್ಯಂತ ಅಗತ್ಯವಿದೆ ! – ಸಂಪಾದಕರು)